Muslims Threaten Hindu Boy : ಮುಸ್ಲಿಂ ಯುವತಿಯೊಂದಿಗೆ ಮಾತನಾಡಿದಕ್ಕೆ ಹಿಂದೂ ಯುವಕನಿಗೆ ಥಳಿಸಿದ ಮುಸ್ಲಿಮರು!

ಬೆಂಗಳೂರು – ಬೆಂಗಳೂರಿನಲ್ಲಿ ಮುಸ್ಲಿಂ ಹುಡುಗಿಯೊಂದಿಗೆ ಮಾತನಾಡುತ್ತಿದ್ದ ಹಿಂದೂ ಯುವಕನಿಗೆ ಕಿರುಕುಳ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ. ಪ್ರಸಾರ ಮಾಧ್ಯಮ ವರದಿಗಳ ಪ್ರಕಾರ, ಏಪ್ರಿಲ್ 9 ರಂದು ಬೆಂಗಳೂರಿನ ಚಂದ್ರಾ ಲೇಔಟ್ ಪ್ರದೇಶದ ಉದ್ಯಾನವನದಲ್ಲಿ ಬುರ್ಖಾ ಧರಿಸಿದ್ದ ಯುವತಿಯೊಬ್ಬಳು ಹಿಂದೂ ಯುವಕನೊಂದಿಗೆ ದ್ವಿಚಕ್ರ ವಾಹನದಲ್ಲಿ ಕುಳಿತು ಮಾತನಾಡುತ್ತಿದ್ದಳು. ಇಬ್ಬರೂ ಒಟ್ಟಿಗೆ ಕುಳಿತು ಮಾತನಾಡುತ್ತಿರುವುದನ್ನು ನೋಡಿದ ಮುಸ್ಲಿಂ ಯುವಕರ ಗುಂಪೊಂದು ಅವರ ಬಳಿ ಬಂದು ಪ್ರಶ್ನಿಸಲು ಪ್ರಾರಂಭಿಸಿತು. ಅವರು ಹಿಂದೂ ಯುವಕನನ್ನು ಬೆದರಿಸಿದರು. ‘ನಿಮಗೆ ನಾಚಿಕೆ ಅನಿಸುವುದಿಲ್ಲವೇ? ನೀವು ಬೇರೆ ಧರ್ಮದ ಯುವತಿಯೊಂದಿಗೆ ಏಕೆ ಕುಳಿತಿದ್ದೀರಿ?’ ಎಂದು ಕೇಳಿದರು.

1. ಇದರ ನಂತರ, ಆ ಗೂಂಡಾ ಮುಸ್ಲಿಂ ಯುವಕರು ಹಿಂದೂ ಹುಡುಗನನ್ನು ಕೋಲುಗಳಿಂದ ಹಲ್ಲೆ ಮಾಡಿದರು. ಈ ಬಗ್ಗೆ ವಿಡಿಯೋ ಪ್ರಸಾರವಾಗುತ್ತಿದ್ದಂತೆ ಪೊಲೀಸರು ಕ್ರಮ ಕೈಗೊಂಡು 5 ಮುಸ್ಲಿಂ ಗೂಂಡಾಗಳನ್ನು ಬಂಧಿಸಿದ್ದಾರೆ.

2. ಈ ಘಟನೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಮತ್ತು ರಾಜ್ಯ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಪ್ರಿಯಾಂಕ ಖರ್ಗೆ ಅವರು ಟೀಕಿಸಿದ್ದಾರೆ. ‘ಯಾವುದೇ ಪರಿಸ್ಥಿತಿಯಲ್ಲಿ ನೈತಿಕ ಪೊಲೀಸಗಿರಿ ಸಹಿಸಲಾಗದು. ಇದು ಉತ್ತರ ಪ್ರದೇಶ, ಬಿಹಾರ ಅಥವಾ ಮಧ್ಯಪ್ರದೇಶವಲ್ಲ. ಕರ್ನಾಟಕ ಒಂದು ಪ್ರಗತಿಪರ ರಾಜ್ಯ’ ಎಂದು ಹೇಳಿದರು. (ಭಾಜಪ ಆಡಳಿತದ ರಾಜ್ಯಗಳಲ್ಲಿ ಲವ್ ಜಿಹಾದಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿರುವುದು ಖರ್ಗೆ ಅವರಿಗೆ ಕಾಣಿಸುತ್ತಿಲ್ಲವೇ? ಹಿಂದೂಗಳ ಪ್ರತಿಯೊಂದು ಸಮಸ್ಯೆಯಲ್ಲೂ ರಾಜಕೀಯ ಮಾಡುವ ಕಾಂಗ್ರೆಸ್ಸಿಗರಿಗೆ ಹಿಂದೂಗಳು ಅವರ ಸ್ಥಾನ ತೋರಿಸಬೇಕು! – ಸಂಪಾದಕರು)

ಸಂಪಾದಕೀಯ ನಿಲುವು

ಹಿಂದೂ ಯುವಕ ಮುಸ್ಲಿಂ ಯುವತಿಯೊಂದಿಗೆ ಮಾತನಾಡಿದ್ದನ್ನು ಸಹಿಸದ ಮುಸ್ಲಿಮರು ಲವ್ ಜಿಹಾದ್ ಮಾಡಿ ಹಿಂದೂ ಯುವತಿಯರ ಜೀವನವನ್ನು ಹಾಳು ಮಾಡುತ್ತಾರೆ ಎಂಬುದನ್ನು ನೆನಪಿಡಿ !