CM Yogi Adityanath Sri Ramanavami Order : ಶ್ರೀ ರಾಮ ನವಮಿಯ ಸಂದರ್ಭದಲ್ಲಿ ಉತ್ತರ ಪ್ರದೇಶದ ಪ್ರತಿಯೊಂದು ದೇವಸ್ಥಾನದಲ್ಲಿ ಶ್ರೀ ರಾಮಚರಿತಮಾನಸ ಪಠಣ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಆದೇಶ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಶ್ರೀ ರಾಮ ನವಮಿಯ ಸಂದರ್ಭದಲ್ಲಿ, ಉತ್ತರ ಪ್ರದೇಶದ ಎಲ್ಲಾ ದೇವಸ್ಥಾನಗಳಲ್ಲಿ 24 ಗಂಟೆಗಳ ಕಾಲ ನಿರಂತರವಾಗಿ ಶ್ರೀ ರಾಮಚರಿತಮಾನಸವನ್ನು ಪಠಿಸಲಾಗುತ್ತಿದೆ. ಈ ನಿಟ್ಟಿನಲ್ಲಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹಿರಿಯ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಈ ಆದೇಶ ನೀಡಿದ್ದರು.

1. ಮುಖ್ಯಮಂತ್ರಿಯವರ ನಿರ್ದೇಶನದಂತೆ, ಎಲ್ಲಾ ಜಿಲ್ಲೆಗಳ ದೇವಸ್ಥಾನಗಳಲ್ಲಿ ಶ್ರೀ ರಾಮಚರಿತಮಾನಸ ನಿರಂತರ ಪಠಣಕ್ಕೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ.

2. ಏಪ್ರಿಲ್ 5 ರಂದು ಪ್ರಾರಂಭವಾಗುವ ಅಖಂಡ ಶ್ರೀ ರಾಮಚರಿತಮಾನಸ ಪಠಣವು ಏಪ್ರಿಲ್ 6 ರಂದು ಶ್ರೀ ರಾಮ ನವಮಿಯ ದಿನದಂದು ಮಧ್ಯಾಹ್ನ 12 ಗಂಟೆಗೆ ಶ್ರೀ ರಾಮ ಜನ್ಮಭೂಮಿಯಲ್ಲಿರುವ ಭವ್ಯ ಶ್ರೀ ರಾಮಮಂದಿರದಲ್ಲಿ ಶ್ರೀ ರಾಮ ಲಲ್ಲಾನ ಹಣೆಯ ಮೇಲೆ ಸೂರ್ಯನ ಕಿರಣಗಳು ಬೀಳುವುದರೊಂದಿಗೆ ಕೊನೆಗೊಳ್ಳುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.

3. ದೇವಿಪಾಟಣ ದೇವಸ್ಥಾನ, ಬಲರಾಮಪುರ, ಶಾಕುಂಭರಿ ದೇವಿ ದೇವಸ್ಥಾನ – ಸಹರಾನಪುರ, ಶ್ರೀ ವಿಂಧ್ಯವಾಸಿನಿ ದೇವಿ ಧಾಮ – ಮಿರ್ಜಾಪುರ ಮುಂತಾದ ಪ್ರಮುಖ ದೇವತೆಗಳ ದೇವಸ್ಥಾನಗಳು ಮತ್ತು ಶಕ್ತಿಪೀಠಗಳಿಗೆ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡಲಿದ್ದಾರೆ. ಸೂರ್ಯನ ಕಿರಣಗಳ ದರ್ಶನಕ್ಕಾಗಿ ದೇಶಾದ್ಯಂತ ಜನರು ಅಯೋಧ್ಯೆಗೆ ಬರುವ ಸಾಧ್ಯತೆಯಿದೆ. ಅಂತಹ ಪರಿಸ್ಥಿತಿಯಲ್ಲಿ, ಭಕ್ತರ ಸೌಕರ್ಯ ಮತ್ತು ಭದ್ರತೆಗಾಗಿ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಬೇಕು. ಸರತಿ ಸಾಲಿನಲ್ಲಿ ನಿಂತಿರುವ ಭಕ್ತರು ಬಿಸಿಲಿನಲ್ಲಿ ನಿಲ್ಲುವಾಗ ಯಾವುದೇ ತೊಂದರೆಗಳನ್ನು ಎದುರಿಸಬಾರದು; ಆದ್ದರಿಂದ, ಮಾರ್ಗದಲ್ಲಿ ಸೆಣಬಿನಿಂದ ಮಾಡಿದ ಬಟ್ಟೆಯನ್ನು ಹಾಕಲು ವ್ಯವಸ್ಥೆ ಮಾಡಬೇಕು. ಎಲ್ಲಾ ದೇವಸ್ಥಾನಗಳಲ್ಲಿ ಸರಿಯಾದ ಕುಡಿಯುವ ನೀರಿನ ಸೌಲಭ್ಯ ಇರಬೇಕು ಎಂದು ಮುಖ್ಯಮಂತ್ರಿ ಹೇಳಿದರು.

ಸಂಪಾದಕೀಯ ನಿಲುವು

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ತಮ್ಮ ರಾಜ್ಯದಲ್ಲಿ ಇಂತಹ ಆದೇಶಗಳನ್ನು ನೀಡಬಹುದಾದರೆ, ಇತರ ರಾಜ್ಯಗಳ ಮುಖ್ಯಮಂತ್ರಿಗಳು ತಮ್ಮ ರಾಜ್ಯಗಳಲ್ಲಿ ಏಕೆ ನೀಡಬಾರದು?, ಎನ್ನುವ ಪ್ರಶ್ನೆ ಅಂತಹ ಜನರನ್ನು ಆಯ್ಕೆ ಮಾಡುವ ಧರ್ಮಾಭಿಮಾನಿ ಹಿಂದೂಗಳಿಗೆ ಮೂಡುತ್ತದೆ!