Tensions In Bengal Over Saffron Flag : ಬಂಗಾಳದಲ್ಲಿ ಬಸ್ಸಿಗೆ ಹಾಕಿದ್ದ ಶ್ರೀರಾಮನ ಚಿತ್ರವಿರುವ ಕೇಸರಿ ಧ್ವಜ ತೆಗೆದಿದ್ದರಿಂದ ಉದ್ವಿಗ್ನತೆ

ಕೋಲ್ಕತ್ತಾ (ಬಂಗಾಳ) – ಇಲ್ಲಿ ಶ್ರೀರಾಮ ನವಮಿಯ ಸಂದರ್ಭದಲ್ಲಿ ಒಂದು ಬಸ್ ಮೇಲೆ ಹಾಕಿದ್ದ ಕೇಸರಿ ಧ್ವಜ ತೆಗೆದುಹಾಕುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಆದ ನಂತರ ಉದ್ವಿಗ್ನತೆ ಉಂಟಾಗಿದೆ. ಮಮತಾ ಬ್ಯಾನರ್ಜಿ ಸರಕಾರದ ಬೆಂಬಲಿಗರು ಪೋಲೀಸರ ಸಮ್ಮಖದಲ್ಲಿ ಕೇಸರಿ ಧ್ವಜವನ್ನು ಬಲವಂತವಾಗಿ ತೆಗೆದಿದ್ದಾರೆ ಎಂದು ಭಾಜಪ ಆರೋಪಿಸಿದೆ. ಈ ಧ್ವಜದಲ್ಲಿ ಭಗವಾನ್ ಶ್ರೀರಾಮನ ಚಿತ್ರವೂ ಇತ್ತು.

ಸಂಪಾದಕೀಯ ನಿಲುವು

ಬಂಗಾಳದಲ್ಲಿನ ತೃಣಮೂಲ ಕಾಂಗ್ರೆಸ್ ಸರಕಾರಕ್ಕೆ ಶ್ರೀ ರಾಮನ ಬಗ್ಗೆ ದ್ವೇಷ ಇರುವುದರಿಂದ ಅದು ಬಾಬರ್ ನ ವಂಶಜರೆಂದು ತೋರಿಸಿ ಕೊಡುತ್ತಿದೆ. ಕೇಂದ್ರದಲ್ಲಿರುವ ಭಾಜಪ ಸರಕಾರವು ಈ ಸರಕಾರವನ್ನು ವಿಸರ್ಜಿಸಿ ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು, ಎಂದು ಹಿಂದೂಗಳಿಗೆ ಅನ್ನಿಸುತ್ತದೆ!