ತಮಿಳುನಾಡಿನ ಹಳ್ಳಿಯೊಂದರ ಶಾಲೆಯಲ್ಲಿ ನಡೆದ ಘಟನೆ

ಕೊಯಮತ್ತೂರು (ತಮಿಳುನಾಡು) – ಕೊಯಮತ್ತೂರಿನ ಕಿನತುಕಾಡವು ತಾಲೂಕಿನ ಸೆನ್‌ಗುಟ್ಟೈಪಲಯಂ ಗ್ರಾಮದ ಸ್ವಾಮಿ ಚಿದಭವಂದ್ ಮೆಟ್ರಿಕ್ ಪ್ರೌಢ ಶಾಲೆಯಲ್ಲಿ 8 ನೇ ತರಗತಿಯಲ್ಲಿ ಓದುತ್ತಿದ್ದ 14 ವರ್ಷದ ವಿದ್ಯಾರ್ಥಿನಿಗೆ ಮುಟ್ಟಾದ ಕಾರಣ ಆಕೆಯನ್ನು ತರಗತಿಯ ಹೊರಗೆ ಕೂರಿಸುವಂತೆ ಮುಖ್ಯೋಪಾಧ್ಯಾಯರು ಹೇಳಿದರು. ವಿದ್ಯಾರ್ಥಿನಿ 5 ವಿಷಯಗಳ ಪರೀಕ್ಷೆಯನ್ನು ತರಗತಿಯ ಹೊರಗೆ ಕುಳಿತು ಬರೆದಳು. ಈ ಬಗ್ಗೆ ವಿದ್ಯಾರ್ಥಿನಿಯ ತಾಯಿ ಶಾಲೆಗೆ ತೆರಳಿ ಪ್ರಶ್ನಿಸಿದ್ದರು. ಅಲ್ಲದೆ, ಸ್ಥಳೀಯರು ಪೊಲ್ಲಾಚಿಯ ಉಪವಿಭಾಗಾಧಿಕಾರಿಗಳಿಗೆ ದೂರು ದಾಖಲಿಸಿ ಶಾಲಾ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
1. ಕೊಯಮತ್ತೂರು ಜಿಲ್ಲಾಧಿಕಾರಿ ಪವನಕುಮಾರ ಜಿ. ಗಿರಿಯಪ್ಪನವರ ಮಾತನಾಡಿ, ಗ್ರಾಮಾಂತರ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ತನಿಖೆಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು. ಸದ್ಯ ಬಂದಿರುವ ಸತ್ಯಾಂಶಗಳು ಮತ್ತು ಮಾಹಿತಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು, ಎಂದು ಹೇಳಿದರು.
2. ನವೆಂಬರ್ 2024 ರಲ್ಲಿ, ಕೇಂದ್ರ ಸರಕಾರವು ಮುಟ್ಟಿನ ನೈರ್ಮಲ್ಯ ನೀತಿಯನ್ನು ಅನುಮೋದಿಸಿತು. ಮುಟ್ಟಾದ ಸಮಯದಲ್ಲಿ ಹುಡುಗಿಯರನ್ನು ಶಾಲೆಗೆ ಬರದಂತೆ ತಡೆಯುವ ಅಡೆತಡೆಗಳನ್ನು ನಿವಾರಿಸುವುದು ಈ ನೀತಿಯನ್ನು ತರುವ ಉದ್ದೇಶವಾಗಿದೆ; ಆದರೆ ಇಂತಹ ಘಟನೆಗಳು ಅದಕ್ಕೆ ವಿರುದ್ಧವಾಗಿವೆ.
ಶಾಲೆಗಳಲ್ಲಿ ಶೌಚಾಲಯಗಳ ಕೊರತೆಯಿಂದ ವಿದ್ಯಾರ್ಥಿನಿಯರು ಶಾಲೆಗೆ ಹೋಗುವುದನ್ನು ತಪ್ಪಿಸುತ್ತಾರೆ ! ಭಾರತದ ಶಾಲಾ ವಿದ್ಯಾರ್ಥಿನಿಯರ ಸ್ಥಿತಿಗತಿಯ ಕುರಿತು ನಡೆಸಿದ ಸಮೀಕ್ಷೆಯಲ್ಲಿ ಶೌಚಾಲಯದ ಕೊರತೆಯಿಂದ ನಾಲ್ಕನೇ ಒಂದು ಭಾಗದಷ್ಟು ವಿದ್ಯಾರ್ಥಿನಿಯರು ಮುಟ್ಟಿನ ಸಮಯದಲ್ಲಿ ಶಾಲೆಗೆ ಹೋಗುತ್ತಿರಲಿಲ್ಲ ಎಂದು ತಿಳಿದುಬಂದಿದೆ.
ಸಂಪಾದಕೀಯ ನಿಲುವುಹಿಂದೂಗಳಿಗೆ ಧರ್ಮಶಿಕ್ಷಣ ಸಿಗದ ಕಾರಣ ಇಂತಹ ಘಟನೆಗಳು ನಡೆಯುತ್ತಿವೆ. ಇದರಿಂದ ಪ್ರಗತಿ(ಅಧೋಗತಿ) ಪರರು, ಜಾತ್ಯತೀತರು ಮತ್ತು ಕಥಿತ ಅಂಧಶ್ರದ್ಧಾ ನಿರ್ಮೂಲನವಾದಿಗಳು ಇಂತಹ ಘಟನೆಗಳ ದುರುಪಯೋಗ ಮಾಡಿಕೊಳ್ಳುತ್ತಾರೆ, ಎಂಬುದನ್ನು ಗಮನಿಸಿ! |