Mumbai Sri Siddivinayak Girl Baby Scheme : ನವಜಾತ ಹೆಣ್ಣು ಮಕ್ಕಳ ಹೆಸರಿನಲ್ಲಿ 10 ಸಾವಿರ ರೂಪಾಯಿ; ಬಾಲಕಿಯರ ಸರ್ವತೋಮುಖ ಅಭಿವೃದ್ಧಿಗೆ ನೂತನ ಯೋಜನೆ!

ಮುಂಬಯಿಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಟ್ರಸ್ಟ್ ನಿಂದ ಮಹತ್ವದ ನಿರ್ಧಾರ!

ಸೌಜನ್ಯ : Prahaar News

ಮುಂಬಯಿ – ಇಲ್ಲಿನ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಟ್ರಸ್ಟ್ ‘ಶ್ರೀ ಸಿದ್ಧಿವಿನಾಯಕ ಭಾಗ್ಯಲಕ್ಷ್ಮಿ ಯೋಜನೆ’ಯನ್ನು ಅನುಷ್ಠಾನಗೊಳಿಸುತ್ತಿದ್ದೂ ಇದಕ್ಕೆ ‘ನ್ಯಾಸ’ ವ್ಯವಸ್ಥಾಪನಾ ಸಮಿತಿಯು ಅನುಮೋದನೆ ನೀಡಿದೆ. ಮಹಾರಾಷ್ಟ್ರದ ಸರಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ಹೆಣ್ಣು ಮಕ್ಕಳ ಹೆಸರಿನಲ್ಲಿ 10 ಸಾವಿರ ರೂಪಾಯಿಗಳನ್ನು ಠೇವಣಿ ರೂಪದಲ್ಲಿ ಅವರ ತಾಯಿಯ ಬ್ಯಾಂಕ್ ಖಾತೆಗೆ ಜಮಾ ಮಾಡುವ ಯೋಜನೆ ಪ್ರಸ್ತಾಪಿಸಲಾಗಿದೆ. ಸರಕಾರದ ಅನುಮೋದನೆಯ ನಂತರ, ಯೋಜನೆಯ ಮಾನದಂಡಗಳನ್ನು ಘೋಷಿಸಲಾಗುವುದು ಎಂದು ಸಿದ್ಧಿವಿನಾಯಕ ಟ್ರಸ್ಟ್ ತಿಳಿಸಿದೆ.

1. ರಾಜ್ಯದ ಹೆಣ್ಣು ಮಕ್ಕಳ ಜನನವನ್ನು ಉತ್ತೇಜಿಸಲು, ಅವರ ಶಿಕ್ಷಣಕ್ಕೆ ಆರ್ಥಿಕ ಸಹಾಯ ಮಾಡಲು, ಹೆಣ್ಣು ಮಕ್ಕಳನ್ನು ಸಬಲರನ್ನಾಗಿ ಮಾಡಲು ಪ್ರಯತ್ನಿಸಲು ಈ ಉದ್ದೇಶಗಳಿಗೆ ಸಹಾಯವಾಗುವಂತೆ ಶ್ರೀ ಸಿದ್ಧಿವಿನಾಯಕ ಗಣಪತಿ ದೇವಸ್ಥಾನದ ವತಿಯಿಂದ ಹೊಸ ಉಪಕ್ರಮವನ್ನು ಪ್ರಾರಂಭಿಸಲಾಗಿದೆ.

2. ಶ್ರೀ ಸಿದ್ಧಿವಿನಾಯಕ ಗಣಪತಿ ದೇವಸ್ಥಾನ ನ್ಯಾಸದ ವಿಶ್ವಸ್ಥ ಸಮಿತಿಯ ಸಭೆಯು ಮಾರ್ಚ್ 31 ರಂದು ಸಂಸ್ಥೆಯ ಅಧ್ಯಕ್ಷ ಸದಾನಂದ ಸರವಣಕರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

3 .ಶ್ರೀ ಸಿದ್ಧಿವಿನಾಯಕ ಗಣಪತಿ ದೇವಸ್ಥಾನ ನ್ಯಾಸದ 2024-25 ನೇ ವರ್ಷದ ವಾರ್ಷಿಕ ವಿವರಣೆ ಮತ್ತು 2025-25 ನೇ ವರ್ಷದ ಬಜೆಟ್ ಅಂದಾಜುಗಳನ್ನು ಈ ಸಭೆಯಲ್ಲಿ ಮಂಡಿಸಲಾಯಿತು. 2024-25 ನೇ ವರ್ಷದಲ್ಲಿ ನ್ಯಾಸದ ಆದಾಯ 114 ಕೋಟಿ ರೂಪಾಯಿ ಎಂದು ನಿರೀಕ್ಷಿಸಲಾಗಿತ್ತು. ಅದು ದಾಖಲೆಯ 133 ಕೋಟಿ ರೂಪಾಯಿಗಳಿಗೆ ಏರಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು 15 ಪ್ರತಿಶತ ಹೆಚ್ಚಳವಾಗಿದೆ.

4. ಈಗ ಮುಂದಿನ ಆದಾಯವನ್ನು 154 ಕೋಟಿ ರೂಪಾಯಿ ಎಂದು ಪರಿಗಣಿಸಲಾಗಿದೆ. ಸಂಸ್ಥೆಯ ಬಜೆಟ್‌ನಲ್ಲಿ, ಮಹಾರಾಷ್ಟ್ರದ ಸರಕಾರಿ ಆಸ್ಪತ್ರೆಗಳಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನದಂದು ಮಾರ್ಚ್ 8 ರಂದು ಜನಿಸಿದ ನವಜಾತ ಹೆಣ್ಣು ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ‘ಶ್ರೀ ಸಿದ್ಧಿವಿನಾಯಕ ಭಾಗ್ಯಲಕ್ಷ್ಮಿ ಯೋಜನೆ’ಯನ್ನು ಅನುಷ್ಠಾನಗೊಳಿಸುವ ಪ್ರಸ್ತಾಪವನ್ನು ಸರಕಾರದ ಅನುಮೋದನೆಗೆ ಸಲ್ಲಿಸುವ ಬಗ್ಗೆ ಅಧ್ಯಕ್ಷ ಸದಾನಂದ ಸರವಣಕರ್ ಅವರ ಉಪಸ್ಥಿತಿಯಲ್ಲಿ ಘೋಷಿಸಲಾಯಿತು.

ಸಂಪಾದಕೀಯ ನಿಲುವು

  • ದೇವಸ್ಥಾನದ ಸರಕಾರೀಕರಣದ ದುಷ್ಪರಿಣಾಮಗಳನ್ನು ತಿಳಿಯಿರಿ! ಸರಕಾರೀಕರಣದಿಂದ ಭಕ್ತರು ಮತ್ತು ದೇವಸ್ಥಾನದ ಅಭಿವೃದ್ಧಿಗೆ ಭಕ್ತರ ಹಣವನ್ನು ಬಳಸದೆ, ಸರಕಾರವು ಅನುಷ್ಠಾನಗೊಳಿಸಬೇಕಾದ ಯೋಜನೆಗಳಿಗೆ ಖರ್ಚು ಮಾಡಲಾಗುತ್ತದೆ, ಇದು ಆತಂಕಕಾರಿಯಾಗಿದೆ!
  • ಇಂತಹ ಯೋಜನೆಗಳ ದುರುಪಯೋಗವನ್ನು ಅಲ್ಪಸಂಖ್ಯಾತರು ತಮ್ಮ ಹೆಣ್ಣುಮಕ್ಕಳಿಗೂ ಪಡೆಯಬಹುದು. ಈ ಕಾರಣಕ್ಕಾಗಿ ಭಕ್ತರು ಇಂತಹ ಯೋಜನೆಗಳನ್ನು ಬಲವಾಗಿ ವಿರೋಧಿಸಬೇಕು ಮತ್ತು ಯೋಜನೆಗಳನ್ನು ಸ್ಥಗಿತಗೊಳಿಸಲು ಮತ್ತು ದೇವಸ್ಥಾನದ ಸರಕಾರೀಕರಣದ ವಿರುದ್ಧ ಹೋರಾಡಲು ಸಿದ್ಧರಾಗಬೇಕು!