ಜನವರಿ 2 ರಂದು ನಡೆದ ಘಟನೆಯ ತೀರ್ಪು ಏಪ್ರಿಲ್ 11 ಕ್ಕೆ ಪ್ರಕಟ !
ಭೋಪಾಲ್ (ಮಧ್ಯಪ್ರದೇಶ) – ಮಧ್ಯಪ್ರದೇಶದಲ್ಲಿನ ಸಿವನಿ ಮಾಲ್ವಾದಲ್ಲಿ 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಅವಳ ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿ ಅಜಯ ವಾಡಿಬಾಲಾಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಅಲ್ಲದೆ, 3 ಸಾವಿರ ರೂಪಾಯಿ ದಂಡ ಕಟ್ಟುವುದರ ಜೊತೆಗೆ ಸಂತ್ರಸ್ಥೆಯ ಕುಟುಂಬಕ್ಕೆ
4 ಲಕ್ಷ ರೂಪಾಯಿಗಳ ನಷ್ಟ ತುಂಬುವಂತೆ ಆದೇಶ ನೀಡಿದೆ. ಈ ಘಟನೆ ಜನವರಿ 2, 2025 ರಂದು ನಡೆದಿತ್ತು. ಅಜಯನು ಬಾಲಕಿಯನ್ನು ಅಪಹರಿಸಿ, ಪೊದೆಗೆ ಕರೆದೊಯ್ದು ಅತ್ಯಾಚಾರ ಮಾಡಿದನು. ಅವಳು ಕಿರುಚಾಡಲು ಪ್ರಯತ್ನಿಸಿದಾಗ, ಅವಳ ಕತ್ತು ಹಿಸುಕಿ ಕೊಂದು, ಅಲ್ಲಿಯೇ ಮೃತದೇಹವನ್ನು ಎಸೆದಿದ್ದನು.
ಸಂಪಾದಕೀಯ ನಿಲುವುಪ್ರತಿಯೊಂದು ಅತ್ಯಾಚಾರದ ಘಟನೆಗಳಲ್ಲಿ ಇದೇ ರೀತಿಯ ಶಿಕ್ಷೆಗಳನ್ನು ತ್ವರಿತ ಗತಿಯಲ್ಲಿ ವಿಧಿಸಿದರೆ, ದೇಶದಲ್ಲಿ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗುವುದರಲ್ಲಿ ಸಂದೇಹವಿಲ್ಲ! |