ಲಂಡನ್‌ನಲ್ಲಿ ವಿಶ್ವದ ಅತಿದೊಡ್ಡ ವಿಠ್ಠಲ-ರುಕ್ಮಿಣಿ ದೇವಾಲಯ ನಿರ್ಮಾಣ!

  • ಪಂಢರಪುರದಿಂದ ಲಂಡನ್‌ವರೆಗೆ ೨೨ ದೇಶಗಳ ಮೂಲಕ ಭವ್ಯವಾದ ದಿಂಡಿ ಯಾತ್ರೆ

  • ೭೦ ದಿನಗಳಲ್ಲಿ ೧೮ ಸಾವಿರ ಕಿ.ಮೀ. ಪಯಣ!

ನಾಗಪುರ – ಲಂಡನ್‌ನಲ್ಲಿ ವಿಠ್ಠಲ-ರುಕ್ಮಿಣಿಯ ಭವ್ಯವಾದ ದೇವಾಲಯವನ್ನು ನಿರ್ಮಿಸಲಾಗುವುದು. ಈ ನಿಮಿತ್ತ ಏಪ್ರಿಲ್ ೧೫ ರಂದು ಪಂಢರಪುರದಿಂದ ಲಂಡನ್‌ವರೆಗೆ ವಿಶ್ವದ ಅತಿದೊಡ್ಡ ಅಂತರರಾಷ್ಟ್ರೀಯ ದಿಂಡಿ ಯಾತ್ರೆ ಹೊರಡಲಿದೆ. ಈ ದಿಂಡಿ ಯಾತ್ರೆಯು ಏಪ್ರಿಲ್ ೧೬ ರಂದು ನಾಗಪುರವನ್ನು ತಲುಪಲಿದೆ.

ಸಂಜೆ ೫ ಗಂಟೆಗೆ ಬಜಾಜನಗರದ ‘ವಿಷ್ಣುಜೀ ಕಿ ರಸೋಯಿ’ಯಲ್ಲಿ ಪಲ್ಲಕ್ಕಿಯಲ್ಲಿರುವ ಶ್ರೀ ವಿಠ್ಠಲನ ವಿಗ್ರಹವನ್ನು ಭಕ್ತರ ದರ್ಶನಕ್ಕಾಗಿ ಇರಿಸಲಾಗುವುದು ಎಂದು ಅಂತರರಾಷ್ಟ್ರೀಯ ಖ್ಯಾತಿಯ ಬಾಣಸಿಗ ವಿಷ್ಣು ಮನೋಹರ್ ತಿಳಿಸಿದ್ದಾರೆ. ಏಪ್ರಿಲ್ ೧೮ ರಂದು ಭಾರತದಿಂದ ಹೊರಡುವ ಈ ದಿಂಡಿ ಯಾತ್ರೆಯು ನೇಪಾಳ, ಚೀನಾ, ರಷ್ಯಾ ಮತ್ತು ಯುರೋಪ್ ಸೇರಿದಂತೆ ೨೨ ದೇಶಗಳ ಮೂಲಕ ಪ್ರಯಾಣಿಸಲಿದೆ.

೧. ವಿಷ್ಣು ಮನೋಹರ್ ಮತ್ತು ಎಲ್.ಐ.ಟಿ. ವಿಶ್ವವಿದ್ಯಾಲಯದ ಪ್ರಧಾನ ಸಲಹೆಗಾರ ಮೋಹನ ಪಾಂಡೆ ಅವರು ದೇವಾಲಯ ಸಮಿತಿಯ ಸದಸ್ಯರಾಗಿದ್ದು, ಭಾರತದ ಸಂಯೋಜಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

೨. ವಿಷ್ಣು ಮನೋಹರ್ ಅವರ ಪ್ರಕಾರ, ವಿದೇಶಗಳಲ್ಲಿ ಇಸ್ಕಾನ್, ಅಕ್ಷರಧಾಮ ಮತ್ತು ಬಾಲಾಜಿ ದೇವಾಲಯಗಳಿವೆ; ಆದರೆ ಸಮೃದ್ಧ ಸಂತ ಪರಂಪರೆಯನ್ನು ಹೊಂದಿರುವ ಶ್ರೀ ವಿಠ್ಠಲ ದೇವಾಲಯವಿಲ್ಲ.

೩. ಮೋಹನ್ ಪಾಂಡೆ ಅವರು ಮಾತನಾಡಿ, ಶ್ರೀ ವಿಠ್ಠಲನ ಪಾದುಕೆಗಳನ್ನು ನೇರವಾಗಿ ವಿಮಾನದ ಮೂಲಕ ಕೊಂಡೊಯ್ಯುವುದು ಸಾಧ್ಯವಿದ್ದರೂ, ವಾರಕರಿ ಸಂಪ್ರದಾಯದಂತೆ ಕಾಲ್ನಡಿಗೆಯಲ್ಲಿ ಪ್ರಯಾಣಿಸಲು ನಿರ್ಧರಿಸಲಾಗಿದೆ. ದಿಂಡಿ ಯಾತ್ರೆಯು ೭೦ ದಿನಗಳಲ್ಲಿ ೧೮ ಸಾವಿರ ಕಿಲೋಮೀಟರ್ ಪ್ರಯಾಣಿಸಲಿದೆ. ಈ ಉಪಕ್ರಮಕ್ಕೆ ಪಂಢರಪುರದ ವಿಠ್ಠಲ-ರುಕ್ಮಿಣಿ ದೇವಾಲಯ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ರಾಜೇಂದ್ರ ಶೆಳಕೆ, ಅಧ್ಯಕ್ಷ ಗಹಿನಿನಾಥ ಮಹಾರಾಜ್ ಔಸೆಕರ್ ಮತ್ತು ಚೈತನ್ಯ ಉತ್ಪಾತ್ ಸಹಕರಿಸಿದ್ದಾರೆ.