ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇವರ ನಿರ್ಣಯ
ಅಮರಾವತಿ (ಆಂಧ್ರ ಪ್ರದೇಶ) – ತಿರುಮಲದ ಏಳು ಬೆಟ್ಟದ ಪರಿಸರದ ಹತ್ತಿರ ಮುಮ್ತಾಜ್ ಹೋಟೆಲಿಗಾಗಿ ಈ ಹಿಂದೆ ಅನುಮತಿ ನೀಡಲಾಗಿತ್ತು. ಹಾಗೂ ಸರಕಾರವು ಈಗ ೩೫.೩೨ ಎಕರೆ ಭೂಮಿಯನ್ನು ಕಟ್ಟಡ ಕಾಮಗಾರಿಗಾಗಿ ಆಯೋಜನೆ ಈ ಹೋಟಲಿನ ಮಾನ್ಯತೆ ರದ್ದು ಪಡಿಸುವ ನಿರ್ಣಯ ತೆಗೆದುಕೊಂಡುದೆ, ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರ ಬಾಬು ನಾಯ್ಡು ಇವರು ಮಾಹಿತಿ ನೀಡಿದರು. ಈ ಹೋಟೆಲ್‌ಗೆ ಆಗುತ್ತಿರುವ ವಿರೋಧವನ್ನು ಗಮನಿಸಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ‘ತಿರುಮಲದ ೭ ಬೆಟ್ಟದ ಹತ್ತಿರ ಯಾವುದೇ ಉದ್ಯಮ ಯೋಜನೆ ಆಗಬಾರದೆಂದು’ ಕೂಡ ಮುಖ್ಯಮಂತ್ರಿ ನಾಯ್ಡು ಇವರು ಹೇಳಿದರು.
೧. ಫೆಬ್ರುವರಿ ೧೨ ರಂದು ಸಾಧು ಮತ್ತು ಅರ್ಚಕರು ಇವರು ‘ಅಲಿಪಿರಿ ಶ್ರೀ ವಾರಿ ಪಂಡಾಲು’ ಈ ಪವಿತ್ರ ಸ್ಥಳದ ಹತ್ತಿರ ಈ ಹೋಟಲಿನ ಕಾಮಗಾರಿಯ ವಿರುದ್ಧ ಉಪವಾಸ ಸತ್ಯಾಗ್ರಹ ಆರಂಭಿಸುವ ಘೋಷಣೆ ಮಾಡಿದ್ದರು. ಈ ಹೋಟಲಿನಿಂದ ತಿರುಮಲ ಪರಿಸರ ಮತ್ತು ಶ್ರೀ ವೆಂಕಟೇಶ್ವರ ದೇವಸ್ಥಾನದ ಆಧ್ಯಾತ್ಮಿಕ ಪಾವಿತ್ರ್ಯತೆಯ ಉಲ್ಲಂಘನೆ ಆಗುವುದು ಎಂದು ಅವರು ಹೇಳಿದ್ದರು.
2. ೨೦೨೧ ರಲ್ಲಿ ಜಗನ್ಮೋಹನ ರೆಡ್ಡಿ ಇವರ ನೇತೃತ್ವದಲ್ಲಿ ಆಂಧ್ರಪ್ರದೇಶ ಸರಕಾರವು ೨೦೨೦ ರಿಂದ ೨೦೨೫ ಪ್ರವಾಸಿ ತಾಣದ ಭಾಗ ಎಂದು ಒಂದು ಸರಕಾರಿ ಆದೇಶ ಪ್ರಸಾರಗೊಳಿಸಿತ್ತು, ಆಗ ಈ ವಿವಾದ ನಿರ್ಮಾಣವಾಗಿತ್ತು. ಈ ಆದೇಶದಲ್ಲಿ ಅಭಿವೃದ್ಧಿಗೆ ಪ್ರೋತ್ಸಾಹದ ಜೊತೆಗೆ ಭಾರಿ ಪ್ರಮಾಣದಲ್ಲಿ ಪ್ರವಾಸಿ ಯೋಜನೆ ಪ್ರಸ್ತಾಪೀತ ಗೊಳಿಸಿತ್ತು. ಓಬೇರಾಯ ಉದ್ಯೋಗ ಸಮೂಹದ ಉಪಕಂಪನಿ ಆಗಿರುವ ಮುಮ್ತಾಜ್ ಹೋಟೆಲ್ ಲಿಮಿಟೆಡ್’ಗೆ ೨೫೦ ಕೋಟಿ ರೂಪಾಯಿಯ ಆರಂಭದ ಹೂಡಿಕೆಯ ಜೊತೆಗೆ ೧೦೦ ‘ಲಗ್ಸರಿ ವಿಲಾ ದ(ಐಶಾರಾಮಿ ಬಂಗಲೆಗಳ) ಸಮಾವೇಶ ಇರುವ ಸಂಕುಲ ನಿರ್ಮಾಣಕ್ಕಾಗಿ ೨೦ ಎಕರೆ ಭೂಮಿ ನೀಡಿದ್ದರು.
ತಿರುಮಲ ದೇವಸ್ಥಾನದಲ್ಲಿ ಕೇವಲ ಹಿಂದುಗಳಿಗೆ ಉದ್ಯೋಗ ! – ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇವರು ಮಾತನಾಡಿ, ತಿರುಮಲ ದೇವಸ್ಥಾನದಲ್ಲಿ ಕೇವಲ ಹಿಂದುಗಳಿಗೆ ಉದ್ಯೋಗ ನೀಡಬೇಕು. ಇತರ ಧರ್ಮದ ಜನರು ಪ್ರಸ್ತುತ ಅಲ್ಲಿ ಕೆಲಸ ಮಾಡುತ್ತಿದ್ದರೆ, ಅವರ ಭಾವನೆಗೆ ನೋವು ಉಂಟಾಗದ ಹಾಗೆ ಅವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಲಾಗುವುದು, ಎಂದು ಹೇಳಿದರು.
ಸಂಪಾದಕೀಯ ನಿಲುವುಹಿಂದುಗಳ ವಿರೋಧದ ಪರಿಣಾಮವಿದು ! ಈ ಯಶಸ್ವಿಗಾಗಿ ಹಿಂದುಗಳು ಭಗವಂತನ ಚರಣಗಳಲ್ಲಿ ಕೃತಜ್ಞತೆ ವ್ಯಕ್ತಪಡಿಸಬೇಕು. ಹಾಗೂ ಭವಿಷ್ಯದಲ್ಲಿ ಯಾವುದೇ ಸರಕಾರವು ದೇವಸ್ಥಾನದ ಪಾವಿತ್ರ್ಯತೆ ನಾಶ ಮಾಡುವ ನಿರ್ಣಯ ತೆಗೆದುಕೊಳ್ಳಬಾರದು, ಹೀಗೆ ಒತ್ತಡ ನಿರ್ಮಾಣ ಮಾಡಬೇಕು! |