ಹಿಂದೂ ಧಾರ್ಮಿಕ ತಿಲಕದ ಬಗ್ಗೆ ನಾಲಿಗೆ ಹರಿಬಿಟ್ಟ ತಮಿಳುನಾಡಿನ ಸಚಿವ ಪೊನಮುಡಿ

ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾ!

ಚೆನ್ನೈ (ತಮಿಳುನಾಡು) – ತಮಿಳುನಾಡಿನ ಅರಣ್ಯ ಸಚಿವ ಮತ್ತು ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದ ಹಿರಿಯ ನಾಯಕ ಕೆ. ಪೊನಮಡಿ ಅವರು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹಣೆಯ ಮೇಲಿನ ಧಾರ್ಮಿಕ ತಿಲಕದ ಬಗ್ಗೆ ಅಶ್ಲೀಲ ಹಾಸ್ಯ ಮಾಡಿದ ನಂತರ ಅವರನ್ನು ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ತೆಗೆದು ಹಾಕಲಾಗಿದೆ; ಆದರೆ ಅವರು ಇನ್ನೂ ಸಚಿವ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಈ ಹೇಳಿಕೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾದ ನಂತರ ರಾಜ್ಯಾದ್ಯಂತ ಅವರ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ.

ಪೊನಮಡಿ ಅವರು ಹೇಳಿದ್ದೇನು?

ಸಚಿವ ಪೊನಮಡಿ ಅವರು ತಮಾಷೆ ಮಾಡುತ್ತಾ, ಮಹಿಳೆಯರು ತಪ್ಪು ತಿಳಿಯಬಾರದು. ನಾನು ನಿಮಗೆ ಒಂದು ಕಥೆ ಹೇಳುತ್ತೇನೆ. ಒಬ್ಬ ಪುರುಷ ವೇಶ್ಯೆಯ ಬಳಿ ಹೋಗುತ್ತಾನೆ. ಆಕೆ ಆ ಪುರುಷನನ್ನು ‘ನೀವು ಶೈವನಾ ಅಥವಾ ವೈಷ್ಣವನಾ?’ ಎಂದು ಕೇಳುತ್ತಾಳೆ. ಆ ವ್ಯಕ್ತಿಗೆ ಅರ್ಥವಾಗದಿದ್ದಾಗ, ಆಕೆ ಅವನ ಹಣೆಯ ಮೇಲಿನ ತಿಲಕದ ಬಗ್ಗೆ ಹೇಳಿ, ‘ನೀವು ಪಟ್ಟೈ (ಅಡ್ಡ ತಿಲಕ) ಹಚ್ಚುತ್ತೀರಾ ಅಥವಾ ನಾಮ (ನೇರ ಉದ್ದನೆಯ ತಿಲಕ) ಹಚ್ಚುತ್ತೀರಾ?’ ಎಂದು ಕೇಳುತ್ತಾಳೆ. ನೀವು ಶೈವರಾಗಿದ್ದರೆ, ನಿಮ್ಮ ಸ್ಥಿತಿ ಅಡ್ಡಲಾಗಿ ಮಲಗುವುದು ಮತ್ತು ನೀವು ವೈಷ್ಣವರಾಗಿದ್ದರೆ, ನಿಂತುಕೊಳ್ಳುವ ಸ್ಥಿತಿ ಆಗಿದೆ’ ಎಂದು ಹೇಳಿಕೆ ನೀಡಿದ್ದರು.

ಅವರನ್ನು ಸಚಿವ ಸ್ಥಾನದಿಂದ ತೆಗೆದುಹಾಕುವ ಧೈರ್ಯವಿಲ್ಲವೇ? – ಭಾಜಪ

ಈ ಪ್ರಕರಣದಲ್ಲಿ ನಟಿ ಮತ್ತು ಭಾಜಪ ನಾಯಕಿ ಖುಷ್ಬೂ ಸುಂದರ್ ಅವರು ರಾಜ್ಯದ ಮುಖ್ಯಮಂತ್ರಿ ಸ್ಟಾಲಿನ್ ಅವರನ್ನು ಟೀಕಿಸಿ, ‘ಪೊನಮಡಿ ಅವರನ್ನು ಸಚಿವ ಸ್ಥಾನದಿಂದ ತೆಗೆದುಹಾಕುವ ಧೈರ್ಯ ನಿಮಗಿದೆಯೇ? ಅಥವಾ ನಿಮ್ಮ ಪಕ್ಷ ಮಹಿಳೆಯರು ಮತ್ತು ಹಿಂದೂ ಧರ್ಮವನ್ನು ಅವಮಾನಿಸುವುದನ್ನು ಆನಂದಿಸುತ್ತದೆಯೇ?’ ಎಂದು ಪ್ರಶ್ನಿಸಿದ್ದಾರೆ.
ತಮಿಳುನಾಡಿನ ಗಾಯಕಿ ಚಿನ್ಮಯಿ ಶ್ರೀಪಾದ ಅವರು ಟೀಕಿಸುತ್ತಾ, ಅವರನ್ನು ಶಿಕ್ಷಿಸುವ ಮತ್ತು ನಾಶಮಾಡುವ ದೇವರು ಅಥವಾ ದೇವತೆ ಯಾರಾದರೂ ಇರಬಹುದು; ಆದರೆ ದೇವರು ಅಸ್ತಿತ್ವದಲ್ಲಿದ್ದಾನೆ ಎಂದು ಅನಿಸುವುದಿಲ್ಲ ಎಂದಿದ್ದಾರೆ. (ದೇವರು ಅಸ್ತಿತ್ವದಲ್ಲಿದ್ದಾನೆಯೇ ಅಥವಾ ಇಲ್ಲವೇ ಎಂಬ ಸಂದೇಹ ಏಕೆ ಬರುತ್ತದೆಯೆಂದರೆ ಹಿಂದೂಗಳಿಗೆ ಧರ್ಮ ಶಿಕ್ಷಣವಿಲ್ಲ. ಪ್ರತಿಯೊಬ್ಬರಿಗೂ ಅವರ ಕರ್ಮಗಳ ಫಲ ಸಿಗುತ್ತದೆ. ಮಾನವರು ಮಾಡಿದ ಕಾನೂನುಗಳಿಂದ ಶಿಕ್ಷೆ ಸಿಗದಿದ್ದರೂ, ದೇವರ ಕರ್ಮಫಲ ನ್ಯಾಯದ ಪ್ರಕಾರ ಅವರಿಗೆ ಈ ಜನ್ಮದಲ್ಲಿ ಇಲ್ಲದಿದ್ದರೆ ಮುಂದಿನ ಜನ್ಮದಲ್ಲಿ ಶಿಕ್ಷೆ ಸಿಕ್ಕೇ ಸಿಗುತ್ತದೆ! – ಸಂಪಾದಕರು).

ಸಂಪಾದಕೀಯ ನಿಲುವು

  • ಸಚಿವ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬ ಹಿಂದೂಗಳ ಧಾರ್ಮಿಕ ತಿಲಕದ ಬಗ್ಗೆ ಅಶ್ಲೀಲ ಹಾಸ್ಯ ಮಾಡುವುದು ಗಂಭೀರ ಅಪರಾಧವಾಗಿದೆ. ಇಂತಹವರ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಜೈಲಿಗೆ ಹಾಕಬೇಕು ಮತ್ತು ಅವರಿಗೆ ಕಠಿಣ ಶಿಕ್ಷೆಯಾಗುವಂತೆ ಪ್ರಯತ್ನಿಸಬೇಕು. ಹಿಂದೂ ಸಂಘಟನೆಗಳು ಇದಕ್ಕಾಗಿ ಒಗ್ಗಟ್ಟಾಗುವುದು ಅವಶ್ಯಕ!
  • ದ್ರಾವಿಡ ಮುನ್ನೇತ್ರ ಕಳಗಂ ಪಕ್ಷವು ಹಿಂದೂದ್ವೇಷಿಯಾಗಿರುವುದರಿಂದ ಅದರ ಮನಸ್ಥಿತಿಯು ಮತಾಂಧ ಮುಸ್ಲಿಮರಿಗಿಂತಲೂ ವಿಕೃತವಾಗಿದೆ ಎಂಬುದು ಇದರಿಂದ ಮತ್ತೊಮ್ಮೆ ಬಹಿರಂಗವಾಗಿದೆ!