Indian Consulate Vandalized : ಮೆಲ್ಬೋರ್ನ್ ನಲ್ಲಿ ಅಪರಿಚಿತರಿಂದ ಭಾರತೀಯ ರಾಯಭಾರಿ ಕಚೇರಿಯಲ್ಲಿ ಧ್ವಂಸ

ಪ್ರವೇಶ ದ್ವಾರದಲ್ಲಿ ಆಕ್ಷೇಪಾರ್ಹ ಘೋಷಣೆಗಳ ಬರಹ

ಮೆಲ್ಬೋರ್ನ (ಆಸ್ಟ್ರೇಲಿಯಾ) – ಇಲ್ಲಿನ ಭಾರತೀಯ ರಾಯಭಾರಿ ಕಚೇರಿಯನ್ನು ಏಪ್ರಿಲ್ 10 ರ ಮಧ್ಯರಾತ್ರಿ ಅಪರಿಚಿತರು ಧ್ವಂಸಗೊಳಿಸಿದ್ದಾರೆ. ಅಲ್ಲದೆ ಮುಖ್ಯ ಪ್ರವೇಶ ದ್ವಾರದ ಗೋಡೆಯ ಮೇಲೆ ಆಕ್ಷೇಪಾರ್ಹ ಘೋಷಣೆಗಳನ್ನು ಬರೆಯಲಾಗಿದೆ. ಈ ಘಟನೆಯ ನಂತರ, ಕ್ಯಾನಬೆರಾದಲ್ಲಿನ ಭಾರತೀಯ ಹೈಕಮೀಷನ್ಆ ಸ್ಟ್ರೇಲಿಯಾದ ಸರಕಾರಿ ಅಧಿಕಾರಿಗಳೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿದೆ. ಈ ಹಿಂದೆ ಈ ರಾಯಭಾರಿ ಕಚೇರಿಯ ಮೇಲೆ ಇಂತಹ ದಾಳಿಗಳು ನಡೆದಿವೆ.

‘ಜನರ ಬಳಿ ಯಾವುದೇ ಮಾಹಿತಿ ಇದ್ದರೆ, ಅದನ್ನು ನಮಗೆ ನೀಡಿ!’ – ಪೊಲೀಸರು

ಈ ಪ್ರಕರಣದಲ್ಲಿ ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ. ಈ ಘಟನೆಯ ಬಗ್ಗೆ ಯಾರಿಗಾದರೂ ಯಾವುದೇ ಮಾಹಿತಿ ಇದ್ದರೆ ಅವರು ಮುಂದೆ ಬಂದು ನೀಡಬೇಕೆಂದು ಪೊಲೀಸರ ವಕ್ತಾರರು ಕರೆ ನೀಡಿದ್ದಾರೆ. (ಆಸ್ಟ್ರೇಲಿಯಾದ ಪೊಲೀಸರು ಉದ್ದೇಶಪೂರ್ವಕವಾಗಿ ಇಂತಹ ಘಟನೆಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಈ ಹಿಂದೆ ಹಿಂದೂ ದೇವಸ್ಥಾನಗಳ ಮೇಲಿನ ದಾಳಿಗಳ ಪ್ರಕರಣದಲ್ಲೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಇಲ್ಲಿ ಖಲಿಸ್ತಾನಿ ಜನರು ಹಿಂದೂಗಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸುತ್ತಿದ್ದಾರೆ! – ಸಂಪಾದಕರು)

ರಾಯಭಾರಿ ಕಚೇರಿಗಳ ಸುರಕ್ಷತೆಗಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ! – ಭಾರತೀಯ ಹೈಕಮೀಷನ್

ಈ ಘಟನೆಯ ಬಗ್ಗೆ ಭಾರತೀಯ ಹೈಕಮಿಷನ್ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದು, ಆಸ್ಟ್ರೇಲಿಯಾದಲ್ಲಿನ ಭಾರತೀಯ ರಾಯಭಾರಿ ಮತ್ತು ಕಾನ್ಸುಲೇಟ್ ಕಚೇರಿಗಳ ಕಟ್ಟಡಗಳು ಮತ್ತು ಸಿಬ್ಬಂದಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದೆ.

ನಮ್ಮನ್ನು ಹೆದರಿಸುವ ಪ್ರಯತ್ನ! – ಆಸ್ಟ್ರೇಲಿಯಾದಲ್ಲಿನ ಭಾರತೀಯರು

ಈ ಘಟನೆಯ ಬಗ್ಗೆ ಇಲ್ಲಿನ ಭಾರತೀಯ ನಾಗರಿಕರು ಪ್ರತಿಕ್ರಿಯಿಸಿದ್ದು, ಇವು ಕೇವಲ ಗೋಡೆಯ ಮೇಲಿನ ಗುರುತುಗಳಲ್ಲ, ಬದಲಿಗೆ ಭಾರತೀಯರನ್ನು ಹೆದರಿಸುವ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.

ಹಿಂದೂ ದೇವಾಲಯಗಳ ಮೇಲೂ ದಾಳಿಗಳು ನಡೆದಿವೆ

2023 ರಲ್ಲಿ ಆಸ್ಟ್ರೇಲಿಯಾದ ಅನೇಕ ದೇವಸ್ಥಾನಗಳಲ್ಲಿ ಧ್ವಂಸಗೊಳಿಸುವ ಘಟನೆಗಳು ನಡೆದಿವೆ. ಬ್ರಿಸ್ಬೇನ ಇಲ್ಲಿನ ಶ್ರೀ ಲಕ್ಷ್ಮಿ ನಾರಾಯಣ ದೇವಾಲಯದ ಗೋಡೆಯನ್ನು ಧ್ವಂಸಗೊಳಿಸಲಾಗಿತ್ತು. ಅಲ್ಲದೆ ದೇವಸ್ಥಾನದ ಗೋಡೆಯ ಮೇಲೆ ಖಲಿಸ್ತಾನ ಪರ ಮತ್ತು ಭಾರತದ ವಿರುದ್ಧ ಘೋಷಣೆಗಳನ್ನು ಬರೆಯಲಾಗಿತ್ತು. ಈ ಹಿಂದೆ ಮೆಲ್ಬೋರ್ನನಲ್ಲಿ ಹಿಂದೂ ದೇವಾಲಯದ ಮೇಲೆ ದಾಳಿ ನಡೆಸಿ ಅದರ ಮೇಲೆ ಖಲಿಸ್ತಾನ ಪರ ಘೋಷಣೆಗಳನ್ನು ಬರೆಯಲಾಗಿತ್ತು.

ಸಂಪಾದಕೀಯ ನಿಲುವು

ಈ ಹಿಂದೆ ಖಲಿಸ್ತಾನ ಬೆಂಬಲಿಗರು ಇಲ್ಲಿ ಧ್ವಂಸಗೊಳಿಸಿದ್ದರಿಂದ ಈಗಲೂ ಅವರೇ ಧ್ವಂಸಗೊಳಿಸಿದ್ದಾರೆ ಎಂದು ತಿಳಿದುಬರುತ್ತದೆ. ಆಸ್ಟ್ರೇಲಿಯಾದ ಸರಕಾರ ಖಲಿಸ್ತಾನ ಬೆಂಬಲಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿರುವುದೇ ಇದರ ಪರಿಣಾಮವಾಗಿದೆ!