Hindu Temple Vandalized : ಜೈಪುರ (ರಾಜಸ್ಥಾನ) ಇಲ್ಲಿನ ವೀರ ತೇಜಾಜಿ ದೇವಸ್ಥಾನದ ಮೂರ್ತಿಯ ಧ್ವಂಸ

ಭಕ್ತರಿಂದ ರಸ್ತೆ ತಡೆ ಪ್ರತಿಭಟನೆ

(ಈ ಚಿತ್ರವನ್ನು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸಲು ಮಾತ್ರ ಹಾಕಲಾಗಿದೆಯೇ ಹೊರತು ಯಾರ ಭಾವನೆಗಳಿಗೂ ನೋವುಂಟು ಮಾಡುವುದಕ್ಕಲ್ಲ.)

ಜೈಪುರ (ರಾಜಸ್ಥಾನ) – ಇಲ್ಲಿನ ಪ್ರತಾಪನಗರದಲ್ಲಿರುವ ವೀರ ತೇಜಾಜಿ ದೇವಸ್ಥಾನದ ಮೂರ್ತಿಯನ್ನು ಅಜ್ಞಾತ ವ್ಯಕ್ತಿಗಳು ರಾತ್ರಿ ಧ್ವಂಸಗೊಳಿಸಿದ ಕಾರಣ ವಾತಾವರಣ ಉದ್ವಿಗ್ನತೆಯಿಂದ ಕೂಡಿದೆ. ವಿಶ್ವ ಹಿಂದೂ ಪರಿಷತ್ತು ಮತ್ತು ಬಜರಂಗದಳ ಕಾರ್ಯಕರ್ತರು ಸೇರಿದಂತೆ ಭಕ್ತರು ‘ರಸ್ತೆ ತಡೆ’ ಪ್ರತಿಭಟನೆ ನಡೆಸಿದರು. ಅವರು ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿದರು. `ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಯೋಜಿತ ಪಿತೂರಿಯ ಭಾಗವಾಗಿ ಈ ಘಟನೆ ನಡೆದಿದೆ. ಆದ್ದರಿಂದ, ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ತಪ್ಪಿತಸ್ಥರನ್ನು ಬಂಧಿಸುವವರೆಗೆ ಪ್ರತಿಭಟನೆ ಮುಂದುವರಿಯುತ್ತದೆ ಎಂದು ಸ್ಥಳೀಯ ನಾಗರಿಕರು ಎಚ್ಚರಿಸಿದ್ದಾರೆ. ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ರಾಜಸ್ಥಾನದಲ್ಲಿ ಭಾಜಪ ಸರಕಾರ ಇರುವಾಗ ಇಂತಹ ಘಟನೆ ನಡೆಯಬಾರದೆಂದು ನಿರೀಕ್ಷಿಸಲಾಗಿದೆ!