3 Terrorist Killed Kashmir : ಕಾಶ್ಮೀರದಲ್ಲಿ 3 ಭಯೋತ್ಪಾದಕರ ಹತ್ಯೆ ಹಾಗೂ ಒಬ್ಬ ಸೇನಾ ಅಧಿಕಾರಿ ವೀರಮರಣ

ವೀರ ಮರಣ ಹೊಂದಿದ ಸುಬೇದಾರ್ ಕುಲದೀಪ್ ಚಂದ್

ಕಿಶ್ತ್ವಾಡ್ (ಜಮ್ಮು- ಕಾಶ್ಮೀರ) – ಇಲ್ಲಿ ನುಸುಳಲು ಯತ್ನಿಸುತ್ತಿದ್ದ ಭಯೋತ್ಪಾದಕರೊಂದಿಗಿನ ನಡೆದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು 3 ಭಯೋತ್ಪಾದಕರನ್ನು ಕೊಂದರು; ಆದರೆ ಸುಬೇದಾರ್ ಕುಲದೀಪ್ ಚಂದ್ ವೀರ ಮರಣ ಹೊಂದಿದರು. ಸುಂದರಬನಿಯ ಕೇರಿ-ಬಟ್ಟಲ್ ಪ್ರದೇಶದ ವಾಸ್ತವಿಕ ನಿಯಂತ್ರಣ ರೇಖೆಯ ಬಳಿ ಈ ಘಟನೆ ನಡೆದಿದೆ. ಭಯೋತ್ಪಾದಕರಿಂದ 4 ರೈಫಲ್‌ಗಳಲ್ಲದೆ, ಅಪಾರ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ 2 ದಿನಗಳಿಂದ ಕಿಶ್ತ್ವಾಡ್ ಜಿಲ್ಲೆಯಲ್ಲಿ ‘ಆಪರೇಷನ್ ಛತ್ರು’ ನಡೆಯುತ್ತಿರುವಾಗ ಈ ಎನ್‌ಕೌಂಟರ್ ನಡೆದಿದೆ.

ಸಂಪಾದಕೀಯ ನಿಲುವು

ಭಯೋತ್ಪಾದನೆ ನಾಶಮಾಡಲು, ಅದರ ಮೂಲ ಅಂದರೆ ಪಾಕಿಸ್ತಾನವನ್ನು ನಾಶಮಾಡಿ!