Durga Prasai Arrested : ನೇಪಾಳದಲ್ಲಿ ರಾಜಪ್ರಭುತ್ವದ ಬೆಂಬಲಿಗರಾದ ಶ್ರೀ ದುರ್ಗಾ ಪ್ರಸಾಯಿ ಇವರ ಬಂಧನ!

ಶ್ರೀ ದುರ್ಗಾ ಪ್ರಸಾಯಿ

ಕಠ್ಮಂಡು (ನೇಪಾಳ) – ದೇಶದಲ್ಲಿ ರಾಜಪ್ರಭುತ್ವವನ್ನು ಪುನಃಸ್ಥಾಪಿಸಬೇಕೆಂದು ಒತ್ತಾಯಿಸಿ ಪ್ರತಿಭಟನಾಕಾರರು ನಡೆಸಿದ ಹಿಂಸಾತ್ಮಕ ಪ್ರತಿಭಟನೆಗಳ ಪ್ರಕರಣದಲ್ಲಿ, ಶ್ರೀ ದುರ್ಗಾ ಪ್ರಸಾಯಿ ಅವರನ್ನು ನೇಪಾಳ ಪೊಲೀಸರು ಬಂಧಿಸಿದ್ದಾರೆ. ಈ ಪ್ರತಿಭಟನೆ ಮಾರ್ಚ್ 8 ರಂದು ನಡೆದಿತ್ತು. ಭಾರತದ ಗಡಿಯಲ್ಲಿನ ಝಾಪಾ ಜಿಲ್ಲೆಯಿಂದ ದುರ್ಗಾ ಪ್ರಸಾಯಿ ಮತ್ತು ಆಕೆಯ ಅಂಗರಕ್ಷಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

1. ಇದಕ್ಕೂ ಮುನ್ನ, ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ರಾಷ್ಟ್ರೀಯ ಪ್ರಜಾತಂತ್ರ ಪಕ್ಷದ ಪ್ರಧಾನ ಕಾರ್ಯದರ್ಶಿ ಧವಲ್ ಶಂಶೇರ್ ರಾಣಾ ಮತ್ತು ಉಪಾಧ್ಯಕ್ಷ ರವೀಂದ್ರ ಮಿಶ್ರಾ ಸೇರಿದಂತೆ 60 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿತ್ತು.

2. ಕಠ್ಮಂಡು ಜಿಲ್ಲಾ ನ್ಯಾಯಾಲಯದ ಆದೇಶದಂತೆ, ಪೊಲೀಸರು ಅವರ ವಿರುದ್ಧ ‘ರಾಜ್ಯ ಅಪರಾಧಗಳು ಮತ್ತು ಸಂಘಟಿತ ಅಪರಾಧ’ದ ಅಡಿಯಲ್ಲಿ ಕಾನೂನು ರೀತ್ಯಾ ಕ್ರಮಗಳನ್ನು ಪ್ರಾರಂಭಿಸಿದ್ದಾರೆ ಮತ್ತು ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.

3. ಕಳೆದ ತಿಂಗಳಲ್ಲಿ, ನೇಪಾಳದಲ್ಲಿ ನಡೆದ ಹಿಂಸಾಚಾರದಲ್ಲಿ ಓರ್ವ ಪತ್ರಕರ್ತ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದರು. ನೇಪಾಳದಲ್ಲಿ ರಾಜಪ್ರಭುತ್ವವನ್ನು ಪುನಃಸ್ಥಾಪಿಸುವ ಬೇಡಿಕೆಗಳ ಸಂದರ್ಭದಲ್ಲಿ ಈ ಹಿಂಸಾಚಾರ ಸಂಭವಿಸಿತ್ತು.

4. ಸಾಂವಿಧಾನಿಕ ರಾಜಪ್ರಭುತ್ವ ಮತ್ತು ಹಿಂದೂ ರಾಷ್ಟ್ರದ ಪುನಃಸ್ಥಾಪನೆಯು (ಪುನರ್ ಸ್ಥಾಪನೆಯು) ಈ ದೇಶದ ಸಮಸ್ಯೆಗಳಿಗೆ ಪರಿಹಾರವಾಗಿದೆ, ಎಂದು ಪ್ರತಿಭಟನೆ ಮಾಡುವವರ ವಾದವಾಗಿದೆ. 2008 ರಲ್ಲಿ, ನೇಪಾಳದಲ್ಲಿ 240 ವರ್ಷಗಳ ರಾಜವಂಶದ ರಾಜಪ್ರಭುತ್ವ ಕೊನೆಗೊಂಡಿತ್ತು. ಈಗ ರಾಜಪ್ರಭುತ್ವವನ್ನು ಮರಳಿ ತರಬೇಕೆಂಬ ಬೇಡಿಕೆಯಿಂದ ಮತ್ತೆ ವೇಗ ಪಡೆದುಕೊಂಡಿದೆ.