|
ವಾಷಿಂಗ್ಟನ್ (ಅಮೇರಿಕ) – ನವೆಂಬರ್ 26, 2008 ರಂದು ಮುಂಬೈ ಮೇಲೆ ನಡೆದ ಜಿಹಾದಿ ಭಯೋತ್ಪಾದಕ ದಾಳಿಯ ಸೂತ್ರಧಾರ ತಹವ್ವೂರ್ ರಾಣಾ (ವಯಸ್ಸು 64) ನನ್ನು ಅಮೇರಿಕವು ಭಾರತಕ್ಕೆ ಹಸ್ತಾಂತರಿಸಿದ ನಂತರ ಅಮೇರಿಕದ ನ್ಯಾಯ ಇಲಾಖೆ ಗಂಭೀರ ಮಾಹಿತಿ ನೀಡಿದೆ. ಈ ದಾಳಿಯ ನಂತರ, ತಹಾವೂರ್ ತನ್ನ ಸಹಯೋಗಿ ಡೇವಿಡ್ ಹೆಡ್ಲಿಗೆ ಹೀಗೆ ಹೇಳಿದ್ದನು, ‘ಭಾರತೀಯರ ಮೇಲೆ ದಾಳಿ ಮಾಡುವುದು ಯೋಗ್ಯವಾಗಿದೆ. ಅವರು ಅದಕ್ಕೆ ಅರ್ಹರಿದ್ದಾರೆ. ಅಷ್ಟೇ ಅಲ್ಲ, ಈ ದಾಳಿಯಲ್ಲಿ ಸಾವನ್ನಪ್ಪಿದ 9 ಭಯೋತ್ಪಾದಕರಿಗೆ ಪಾಕಿಸ್ತಾನದ ಅತ್ಯುನ್ನತ ಪ್ರಶಸ್ತಿ ‘ನಿಶಾನ್-ಎ-ಹೈದರ್’ ನೀಡಬೇಕು ಎಂಬುದು ಅವನ ಬಯಕೆಯಾಗಿತ್ತು. ಯುದ್ಧದಲ್ಲಿ ಮಡಿದ ಪಾಕಿಸ್ತಾನಿ ಸೈನಿಕರಿಗೆ ಈ ಅತ್ಯುನ್ನತ ಗೌರವ ನೀಡಲಾಗುತ್ತದೆ.
ತಹವ್ವೂರ್ ರಾಣಾ ವಿಚಾರಣೆಯ ಸಮಯದಲ್ಲಿ ರಾಣಾ ಮತ್ತು ಡೇವಿಡ್ ಹೆಡ್ಲಿ ನಡುವಿನ ಸಂಭಾಷಣೆಯ ವೇಳೆ ಈ ಮಾತುಕತೆ ನಡೆದಿರುವುದು ಹೊರಬಂದಿದೆ. ತಹವೂರ್ ನನ್ನು ಭಾರತಕ್ಕೆ ಕರೆತಂದ ನಂತರ, ನ್ಯಾಯಾಲಯವು ಅವನನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) 18 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.