ಕೇರಳದಲ್ಲಿ ಅಂಗಿ ಧರಿಸಿ ದೇವಸ್ಥಾನಕ್ಕೆ ಪ್ರವೇಶ ಮಾಡಿದ ಪ್ರತಿಭಟನಾಕಾರರು

ತಿರುವನಂತಪುರಂ (ಕೇರಳ) – ಕೇರಳದ ಪತ್ತನಂತಿಟ್ಟದಲ್ಲಿರುವ ಭಗವಾನ್ ಅಯ್ಯಪ್ಪ ದೇವಸ್ಥಾನದಲ್ಲಿ ಕೆಲವು ಪುರುಷರು ಬಹಳ ಸಮಯದಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವನ್ನು ವಿರೋಧಿಸಿದರು. ಇದಕ್ಕಾಗಿ ಅವರು ಮಾರ್ಚ್ 23 ರಂದು ಅಂಗಿ ತೆಗೆಯದೆ ದೇವಸ್ಥಾನದ ಒಳಗೆ ಪ್ರವೇಶಿಸಿದರು. ಅಯ್ಯಪ್ಪ ದೇವಸ್ಥಾನವನ್ನು ಪ್ರವೇಶಿಸುವ ಮೊದಲು ಪುರುಷ ಭಕ್ತರಿಗೆ ಅಂಗಿ ತೆಗೆಯುವುದು ಕಡ್ಡಾಯವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಚಿತ್ರಗಳು ಹೊರಬಂದಿವೆ, ಇದರಲ್ಲಿ ತಮಿಳುನಾಡು ದೇವಸ್ವಂ ಮಂಡಳಿಯಿಂದ ನಿರ್ವಹಿಸಲ್ಪಡುವ ಪರುನಾಡು ದೇವಸ್ಥಾನದ ಹೊರಗೆ ಸಾಲಿನಲ್ಲಿ ನಿಂತು ಅಂಗಿ ತೆಗೆಯದೆ ಪ್ರಾರ್ಥನೆ ಮಾಡುತ್ತಿರುವುದು ಕಂಡುಬಂದಿದೆ. ಪ್ರತಿಭಟನಾಕಾರರ ಈ ಪ್ರತಿಭಟನೆ ಶಾಂತಿಯುತವಾಗಿ ಕೊನೆಗೊಂಡಿತು, ಏಕೆಂದರೆ ಪೊಲೀಸರು ಅಥವಾ ದೇವಸ್ಥಾನದ ಆಡಳಿತ ಮಂಡಳಿ ಯಾವುದೇ ರೀತಿಯ ಪ್ರತಿರೋಧವನ್ನು ವ್ಯಕ್ತಪಡಿಸಲಿಲ್ಲ.
ಪುರುಷ ಭಕ್ತರು ಅಂಗಿ ತೆಗೆಯುವ ಸಂಪ್ರದಾಯವನ್ನು ಶಾಶ್ವತವಾಗಿ ರದ್ದುಗೊಳಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. “ಪ್ರತಿಭಟನೆ ಶಾಂತಿಯುತವಾಗಿತ್ತು. ಅಂಗಿ ತೆಗೆಯದೆ ಯಾರಾದರೂ ದೇವಸ್ಥಾನವನ್ನು ಪ್ರವೇಶಿಸಿದರೆ ಆಡಳಿತ ಮಂಡಳಿಗೆ ಯಾವುದೇ ತೊಂದರೆಯಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ಈಗಾಗಲೇ ಸ್ಪಷ್ಟಪಡಿಸಿದೆ. ಆದಾಗ್ಯೂ, ಭಕ್ತರು ಈ ಸಂಪ್ರದಾಯವನ್ನು ಅನುಸರಿಸುತ್ತಾರೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಂಪಾದಕೀಯ ನಿಲುವುದೇವಸ್ಥಾನಗಳ ಸಂಪ್ರದಾಯಗಳನ್ನು ವಿರೋಧಿಸುವ ಪ್ರಗತಿ(ಅಧೊಗತಿ)ಪರರು, ಜಾತ್ಯತೀತವಾದಿಗಳು ಮತ್ತು ನಾಸ್ತಿಕರು ಇದ್ದಾರೆಯೇ? ಇದನ್ನು ತನಿಖೆ ಮಾಡಬೇಕು. ಹಿಂದೂ ಧರ್ಮದ ಧಾರ್ಮಿಕ ಸಂಪ್ರದಾಯಗಳನ್ನು ವಿರೋಧಿಸಲು ಪ್ರಯತ್ನಿಸುವವರು ಈ ಮಾಧ್ಯಮಗಳ ಮೂಲಕ ಹಿಂದೂ ಧರ್ಮದ ಮೇಲೆ ದಾಳಿ ಮಾಡುತ್ತಿರುವುದರಿಂದ ಇದನ್ನು ತನಿಖೆ ಮಾಡುವುದು ಅವಶ್ಯಕ! |