ದೇವಸ್ಥಾನ ಸಂಸ್ಕೃತಿಯ ಮೇಲಾಗುತ್ತಿರುವ ವಿವಿಧ ಆಘಾತಗಳು !

ದೇವಸ್ಥಾನಗಳಲ್ಲಿ ನಿತ್ಯೋಪಚಾರಗಳ (ನಿತ್ಯದ ಪೂಜೆ-ಉಪಚಾರಗಳ) ಸ್ಥಿತಿ ಹದಗೆಟ್ಟಿತು. ಅಲ್ಲಿ ಮನಸ್ಸಿಗೆ ತೋಚಿದಂತೆ ಆಡಳಿತ ಆರಂಭವಾಯಿತು.ಅರ್ಚಕರ ನಡುವೆ ವಾಗ್ವಾದಗಳು ನಡೆಯುತ್ತಿದ್ದುದರಿಂದ ಪೂಜೆ  ಅರ್ಚನೆ ಮಾಡುವಾಗ ಅದರ ಪಾವಿತ್ರ್ಯಕ್ಕೆ ಹಾನಿಯಾಯಿತು.

ಸಾಂಸ್ಕೃತಿಕ ಕಾರ್ಯ ಸಚಿವ ಆಶಿಶ್ ಶೆಲಾರ್ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಮಂಗಲ ಪ್ರಭಾತ್ ಲೋಧಾ ಅವರಿಗೆ ಶ್ರೀ ರಾಜಮಾತಂಗಿ ಮಹಾಯಜ್ಞದ ಆಮಂತ್ರಣ !

ಮಹಾರಾಷ್ಟ್ರದ ಸಾಂಸ್ಕೃತಿಕ ಕಾರ್ಯ ಸಚಿವ ಆಶಿಶ್ ಶೆಲಾರ್ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಮಂಗಲ ಪ್ರಭಾತ್ ಲೋಧಾ ಅವರಿಗೆ ಸನಾತನ ಸಂಸ್ಥೆಯ ವತಿಯಿಂದ ಮುಂಬಯಿನಲ್ಲಿ ನಡೆಯಲಿರುವ ಶ್ರೀ ರಾಜಮಾತಂಗಿ ಮಹಾಯಜ್ಞದ ಆಮಂತ್ರಣವನ್ನು ನೀಡಲಾಯಿತು.

ದೇವಸ್ಥಾನಗಳ ರಕ್ಷಣೆ ಮತ್ತು ಸುಸ್ಥಿತಿಗಾಗಿ ‘ಮಂದಿರ ಮಹಾಸಂಘ ಛತ್ತೀಸ್‌ಗಢ’ ಸ್ಥಾಪನೆ

ರಾಜ್ಯದ ದೇವಾಲಯಗಳ ಟ್ರಸ್ಟಿಗಳು ಮತ್ತು ಅರ್ಚಕರಿಗಾಗಿ ವಿಶೇಷ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಿ, ದೇವಾಲಯ ನಿರ್ವಹಣೆ ಮತ್ತು ಧಾರ್ಮಿಕ ವಿಧಿವಿಧಾನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲು ಮುಂದಿನ ದಿನಗಳಲ್ಲಿ ಮಂದಿರ ಮಹಾಸಂಘ ಛತ್ತೀಸ್‌ಗಢ ಕಾರ್ಯನಿರ್ವಹಿಸಲಿದೆ.

ದೇವಸ್ಥಾನಗಳಲ್ಲಿ ‘ಸಶುಲ್ಕ ದರ್ಶನ’ ಸೌಲಭ್ಯ ಮತ್ತು ರಾಜಕೀಯ ನೇಮಕಾತಿಗಳನ್ನು ನಿಲ್ಲಿಸಿ! – ಸುನೀಲ್ ಘನವಟ್, ರಾಷ್ಟ್ರೀಯ ಸಂಘಟಕರು, ಮಹಾರಾಷ್ಟ್ರ ಮಂದಿರ ಮಹಾಸಂಘ

ಮುಂದಿನ ದಿನಗಳಲ್ಲಿ ಇಂತಹ ಘಟನೆಗಳನ್ನು ತಡೆಯಲು ದೇವಸ್ಥಾನಗಳಲ್ಲಿ ‘ವಿಶ್ವಸ್ತ’ರಾಗಿ ಯಾವುದೇ ರಾಜಕೀಯ ಪಕ್ಷದ ಪದಾಧಿಕಾರಿಗಳನ್ನು ನೇಮಿಸುವ ಬದಲು, ಭಕ್ತರನ್ನು ನೇಮಿಸುವುದು ಅತ್ಯಗತ್ಯವಾಗಿದೆ. ದೇವಸ್ಥಾನದ ನಿಯಮಾವಳಿಗಳಲ್ಲಿ ಈ ರೀತಿಯ ಬದಲಾವಣೆಯನ್ನು ತರಬೇಕು.

ಕೋಟೆ-ಕೊತ್ತಲಗಳ ಮೇಲಿನ ಅತಿಕ್ರಮಣಗಳನ್ನು ಬುಲ್ಡೋಜರ್ ಮೂಲಕ ಧ್ವಂಸಗೊಳಿಸಲಾಗುವುದು! – ಉದ್ಯೋಗ ಖಾತರಿ ಮತ್ತು ತೋಟಗಾರಿಕಾ ಸಚಿವ ಭರತಶೇಠ ಗೋಗಾವಲೆ

ಮಹಾರಾಷ್ಟ್ರವು ಸಂತರು ಮತ್ತು ದೇವಸ್ಥಾನಗಳ ಪುಣ್ಯಭೂಮಿಯಾಗಿದೆ. ದೇವಸ್ಥಾನಗಳ ಭೂಮಿಯ ಮೇಲೆ ಕಣ್ಣಿಟ್ಟಿರುವ ಅಥವಾ ಅಲ್ಲಿ ಅನಧಿಕೃತ ಅತಿಕ್ರಮಣ ಮಾಡಲು ಪ್ರಯತ್ನಿಸಿದವರಿಗೆ ಈ ಆಡಳಿತವು ಬಿಸಿ ಮುಟ್ಟಿಸದೇ ಬಿಡುವುದಿಲ್ಲ.

ಕೊನೆಗೂ ಹಿಂದೂ ಸಂಘಟನೆಗಳ ಬೇಡಿಕೆಗೆ ಮನ್ನಣೆ; ‘ಧರ್ಮ ಸ್ವಾತಂತ್ರ್ಯ ವಿಧೇಯಕ’ ಅಂಗೀಕಾರ! – ಹಿಂದೂ ಜನಜಾಗೃತಿ ಸಮಿತಿ

ರಾಜ್ಯ ಸರಕಾರವು ವಿಧಾನಮಂಡಲ ಅಧಿವೇಶನದ ಎರಡೂ ಸದನಗಳಲ್ಲಿ ‘ಮಹಾರಾಷ್ಟ್ರ ಧರ್ಮ ಸ್ವಾತಂತ್ರ್ಯ ವಿಧೇಯಕ 2026’ ಅನ್ನು ಅಂಗೀಕರಿಸಿದೆ. ಈ ಶ್ಲಾಘನೀಯ ನಿರ್ಧಾರಕ್ಕಾಗಿ ಹಿಂದೂ ಜನಜಾಗೃತಿ ಸಮಿತಿಯು ರಾಜ್ಯ ಸರಕಾರವನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ.

ನವರಾತ್ರಿಯಲ್ಲಿ ತುಳಜಾ ಭವಾನಿ ದೇವಿಯ ದರ್ಶನಕ್ಕಾಗಿ ದೇಣಿಗೆ ‘ದರ್ಶನ ಪಾಸ್’ ಶುಲ್ಕ ಹೆಚ್ಚಳ!

ಈ ಶಾರದಾ ನವರಾತ್ರಿ ಉತ್ಸವದಲ್ಲಿ ‘ವಿಐಪಿ’ ದರ್ಶನದ ಹೆಸರಿನಲ್ಲಿ ದೇವಸ್ಥಾನದ ಆಡಳಿತ ಮಂಡಳಿಯು ಹಿಂದಿನ ಶುಲ್ಕದಲ್ಲಿ ಭಾರಿ ಹೆಚ್ಚಳ ಮಾಡಿ, ದೇವಿ ಭಕ್ತರ ಶ್ರದ್ಧೆ ಮತ್ತು ಭಾವನೆಗಳನ್ನು ತುಳಿದು, ಸಾಮಾನ್ಯರಿಂದ ದೇವರನ್ನೇ ಕಸಿದುಕೊಂಡಿದೆ.

ಅರ್ಬನ್ ನಕ್ಸಲಿಸಂ ಸಮಸ್ಯೆಯ ನಿಜವಾದ ಮೂಲ ಕಾಂಗ್ರೆಸ್! – ಮಾಧವ ಭಂಡಾರಿ, ಭಾಜಪ ಹಿರಿಯ ಮುಖಂಡ ಮತ್ತು ವಕ್ತಾರ

1942ರಲ್ಲಿ ಸ್ವಾತಂತ್ರ್ಯ ಹೋರಾಟ ಯಶಸ್ವಿಯಾಗಬಾರದೆಂದು ಕಮ್ಯುನಿಸ್ಟರು ಬ್ರಿಟಿಷರೊಂದಿಗೆ ಕೈಜೋಡಿಸಿದ್ದರು ಎಂಬುದನ್ನು ಇತಿಹಾಸದಲ್ಲಿ ದಾಖಲಿಸಲಾಗಿದೆ. ನಂತರ, ಸ್ವಾತಂತ್ರ್ಯದ ನಂತರ, ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅಂತಹ ಬ್ರಿಟಿಷ್ ಏಜೆಂಟ್‌ಗಳಿಗೆ ಗೌರವ ನೀಡಿದರು.

ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ವಿಕೃತ ಮಾಹಿತಿಯನ್ನು ನೀಡುವ ‘ಖಾಲಿದ್ ಕಾ ಶಿವಾಜಿ’ ಚಲನ ಚಿತ್ರದ ಮೇಲೆ ನಿಷೇಧ ಹೇರಿ! – ಹಿಂದೂ ಜನಜಾಗೃತಿ ಸಮಿತಿ

ವಾಸ್ತವವಾಗಿ ಇಂತಹ ಬೇಡಿಕೆಯನ್ನು ಹಿಂದುತ್ವನಿಷ್ಠ ಸಂಘಟನೆ ಮಾಡುವ ಪ್ರಸಂಗ ಬರಬಾರದಿತ್ತು. ಸರಕಾರವೇ ಸ್ವಯಂಪ್ರೇರಿತವಾಗಿ ಇದರ ಬಗ್ಗೆ ಗಮನಹರಿಸುವುದು ಅವಶ್ಯಕ!

ಹಿಂದೂ ಜನಜಾಗೃತಿ ಸಮಿತಿಯ ಸುನಿಲ್ ಘನವಟ್ ಹೆಸರಿನಲ್ಲಿ ಪ್ರಧಾನಿ ಕಚೇರಿಗೆ ದೂರು ಪ್ರಕರಣ – 3 ಶಂಕಿತರು ಪೊಲೀಸರ ವಶಕ್ಕೆ!

ಬಿಜೆಪಿ ನಾಯಕ ರಾಹುಲ್ ಹರಿತ್ವಾಲ್ ಅವರಿಗೆ ಈ ಕುರಿತು ಮೊದಲ ಮಾಹಿತಿ ಲಭಿಸಿತು. ಅವರು ತಕ್ಷಣ ಶ್ರೀ. ಸುನಿಲ್ ಘನವಟ್ ಅವರನ್ನು ಸಂಪರ್ಕಿಸಿದರು. ಶ್ರೀ. ಘನವಟ್ ಅವರು ಅಂತಹ ಯಾವುದೇ ದೂರುಗಳೊಂದಿಗೆ ತಮ್ಮ ಸಂಬಂಧವನ್ನು ನಿರಾಕರಿಸಿದರು