ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ

  • ​ಶ್ರೀರಾಮ ಮಂದಿರದ ದೇಣಿಗೆ ಕಳ್ಳತನಕ್ಕಿಂತಲೂ ದೊಡ್ಡ ಹಗರಣ ನಡೆದಿದೆ ಎಂದು ಆರೋಪ

  • ​ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದು ತನಿಖೆಗೆ ಒತ್ತಾಯ

​(ಮೌಲಾನಾ ಎಂದರೆ ಇಸ್ಲಾಂ ಧರ್ಮದ ಅಧ್ಯಯನಕಾರರು)

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಪ್ರಸ್ತುತ ಶ್ರೀರಾಮ ಮಂದಿರದ ದೇಣಿಗೆ ಕಳ್ಳತನದ ಬಗ್ಗೆ ಸತತವಾಗಿ ಮಾತನಾಡುತ್ತಿದ್ದಾರೆ; ಆದರೆ ವಾಸ್ತವವೇನೆಂದರೆ, ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಅಧಿಕಾರದಲ್ಲಿದ್ದಾಗ, ‘ವಕ್ಫ್ ಮಂಡಳಿ’ಯಲ್ಲಿ ಶತಕೋಟಿ ರೂಪಾಯಿಗಳ ಹಗರಣ ನಡೆದಿದೆ ಎಂದು ಬರೇಲಿಯ ‘ಆಲ್ ಇಂಡಿಯಾ ಮುಸ್ಲಿಂ ಜಮಾತ್’ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಿಜ್ವಿ ಬರೇಲವಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

​ಶಹಾಬುದ್ದೀನ್ ಅವರು ಮಾತನ್ನು ಮುಂದುವರೆಸುತ್ತಾ,

‘‘ಸುನ್ನಿ ವಕ್ಫ್ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರ ಹುದ್ದೆಗಳಿಗೆ ಕೇವಲ ಅಂದಿನ ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಮತ್ತು ಹಜ್ ಸಚಿವ ಆಜಂ ಖಾನ್ ಅವರ ನೆಚ್ಚಿನ ಜನರನ್ನು ಮಾತ್ರ ನೇಮಿಸಲಾಗುತ್ತಿತ್ತು. ಮಂಡಳಿಯ ಸದಸ್ಯರು ಅಥವಾ ಪದಾಧಿಕಾರಿಗಳು ತಮ್ಮ ಭಾಗದ ವಕ್ಫ್ ಭೂಮಿಯನ್ನು ವಿಭಜಿಸಿ ಆಸ್ತಿ ದುರುಪಯೋಗಪಡಿಸಿಕೊಂಡಿದ್ದಾರೆ. ಒಂದು ವೇಳೆ ವಕ್ಫ್ ಮಂಡಳಿಯ ಸೂಕ್ತ ತನಿಖೆ ನಡೆದರೆ, ಶ್ರೀರಾಮ ಮಂದಿರದ ದೇಣಿಗೆ ಕಳ್ಳತನಕ್ಕಿಂತಲೂ ದೊಡ್ಡ ಹಗರಣ ಬಯಲಿಗೆ ಬರಲಿದೆ’’ ಎಂದು ಹೇಳಿದರು. ​ಈ ಪ್ರಕರಣದಲ್ಲಿ ಮೌಲಾನಾ ಬರೇಲವಿ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದು ಈ ಇಡೀ ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದ್ದಾರೆ.

ಸಂಪಾದಕೀಯ ನಿಲುವು

  • ಶ್ರೀರಾಮ ಮಂದಿರದ ದೇಣಿಗೆ ಕಳ್ಳತನದ ಪ್ರಕರಣದಲ್ಲಿ ವಿಷ ಕಾರುವ ಸಮಾಜವಾದಿ ಪಕ್ಷದ ನಾಯಕರು ತಮ್ಮ ಮೇಲಿನ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಅನುಕೂಲಕರವಾಗಿ ಮೌನ ವಹಿಸುತ್ತಾರೆ!
  • ಮೌಲಾನಾ ಅವರು ‘ವಕ್ಫ್ ಮಂಡಳಿ’ಯ ಈ ಹಗರಣವನ್ನು ಇಷ್ಟು ವರ್ಷಗಳ ಕಾಲ ಜನರಿಂದ ಏಕೆ ಮುಚ್ಚಿಟ್ಟಿದ್ದರು?