ಪುಣೆಯಲ್ಲಿ ‘ಹೆಚ್ಚುತ್ತಿರುವ ಅರ್ಬನ್ ನಕ್ಸಲಿಸಂ ಮತ್ತು ಜನಸುರಕ್ಷಾ ಕಾನೂನು’ ಎಂಬ ವಿಷಯದ ಕುರಿತು ನಡೆದ ವಿಶೇಷ ವಿಚಾರ ಸಂಕಿರಣದಲ್ಲಿ 1,000 ಕ್ಕೂ ಹೆಚ್ಚು ದೇಶಭಕ್ತರ ಸಹಭಾಗ!

ಪುಣೆ, ಆಗಸ್ಟ್ 20 (ವಾರ್ತೆ) – 1942ರಲ್ಲಿ ಸ್ವಾತಂತ್ರ್ಯ ಹೋರಾಟ ಯಶಸ್ವಿಯಾಗಬಾರದೆಂದು ಕಮ್ಯುನಿಸ್ಟರು ಬ್ರಿಟಿಷರೊಂದಿಗೆ ಕೈಜೋಡಿಸಿದ್ದರು ಎಂಬುದನ್ನು ಇತಿಹಾಸದಲ್ಲಿ ದಾಖಲಿಸಲಾಗಿದೆ. ನಂತರ, ಸ್ವಾತಂತ್ರ್ಯದ ನಂತರ, ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅಂತಹ ಬ್ರಿಟಿಷ್ ಏಜೆಂಟ್‌ಗಳಿಗೆ ಗೌರವ ನೀಡಿದರು. ಅದು ಬಂಗಾಳದಲ್ಲಿ ನಕ್ಸಲಿಸಂ ಆಗಿರಲಿ ಅಥವಾ ಪಂಜಾಬ್‌ನಲ್ಲಿ ಖಲಿಸ್ತಾನಿ ಸಮಸ್ಯೆಯಾಗಿರಲಿ, ಕಾಂಗ್ರೆಸ್ ಎಂದಿಗೂ ಈ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಿಲ್ಲ. ದೇಶ ಎದುರಿಸುತ್ತಿರುವ ಅರ್ಬನ್ ನಕ್ಸಲಿಸಂ ಸಮಸ್ಯೆಯ ನಿಜವಾದ ಮೂಲ ಕಾಂಗ್ರೆಸ್ ಎಂದು ಭಾಜಪ ಹಿರಿಯ ಮುಖಂಡ ಮತ್ತು ವಕ್ತಾರ ಶ್ರೀ. ಮಾಧವ ಭಂಡಾರಿ ಅಭಿಪ್ರಾಯಪಟ್ಟರು. ಪುಣೆಯ ತಿಲಕ್ ಸ್ಮಾರಕ ಮಂದಿರದಲ್ಲಿ ಆಗಸ್ಟ್ 19 ರಂದು ‘ರಾಷ್ಟ್ರಭಕ್ತ ವಕೀಲರ ಸಮಿತಿ’ಯಿಂದ ‘ವಾರ್ಷಿಕ ಅರ್ಬನ್ ನಕ್ಸಲಿಸಂ ಮತ್ತು ಜನಸುರಕ್ಷಾ ಕಾನೂನು’ ಎಂಬ ವಿಷಯದ ಕುರಿತು ವಿಶೇಷ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು. ಈ ವಿಚಾರ ಸಂಕಿರಣದಲ್ಲಿ ಅವರು ಮಾತನಾಡುತ್ತಿದ್ದರು.
🇮🇳 Despite heavy rains, 1,000+ patriots gathered in Pune for a seminar on Rising Urban Naxalism & Public Security Act – organised by @AdhivaktaSamiti
🗣️ Key takeaways:
👉 Leftist agenda = destroy institutions of thought👉 Need stricter Public Security Act
👉 Hindus must build… pic.twitter.com/smIG1i7qpf
— Sanatan Prabhat (@SanatanPrabhat) August 20, 2025

ಮಾನ್ಯರ ಭಾಷಣಗಳಿಗೆ ಸ್ವಯಂಸ್ಫೂರ್ತಿಯ ಚಪ್ಪಾಳೆಗಳ ಮೂಲಕ ಬೆಂಬಲ!ವಿಚಾರ ಸಂಕಿರಣದಲ್ಲಿ ಮಂಡಿಸಲಾದ ವಿಷಯಗಳು ಮತ್ತು ಎಡಪಂಥೀಯರ ಸಿದ್ಧಾಂತಗಳನ್ನು ಬಹಿರಂಗಪಡಿಸಿದ ಭಾಷಣಕಾರರಿಗೆ ಉಪಸ್ಥಿತ ಸಭಿಕರು ಸ್ವಯಂಸ್ಫೂರ್ತಿಯಿಂದ ಚಪ್ಪಾಳೆಗಳನ್ನು ಹೊಡೆದು, ‘ಜೈ ಶ್ರೀರಾಮ್’, ‘ಜಯತು ಜಯತು ಹಿಂದೂರಾಷ್ಟ್ರಂ’ ಮತ್ತು ಇತರ ಘೋಷಣೆಗಳೊಂದಿಗೆ ಬೆಂಬಲ ಸೂಚಿಸಿದರು. |
🎙️‘वाढता अर्बन नक्षलवाद आणि जनसुरक्षा कायदा’ विषयावर Pune येथे विशेष परिसंवादासाठी एक हजारांहून अधिक राष्ट्रप्रेमींची उपस्थिती !
⚖️ राष्ट्रभक्त अधिवक्ता समिती : राष्ट्रभक्त अधिवक्त्यांची सक्रिय संघटना !
Contact us @ 8983335517 pic.twitter.com/mRoNacXQkX
— Rashtrabhakta Adhivakta Samiti (@AdhivaktaSamiti) August 20, 2025
ಈ ವಿಚಾರ ಸಂಕಿರಣದಲ್ಲಿ ‘ಅಸತ್ಯಮೇವ ಜಯತೆ’ ಮತ್ತು ‘ಡಾವಿ ವಾಳವಿ’ ಪುಸ್ತಕಗಳ ಪ್ರಸಿದ್ಧ ಲೇಖಕರಾದ ಶ್ರೀ. ಅಭಿಜಿತ್ ಜೋಗ್, ಹಿಂದೂ ವಿಧಿಜ್ಞ ಪರಿಷತ್ ಅಧ್ಯಕ್ಷ ವಕೀಲ ವೀರೇಂದ್ರ ಇಚಲಕರಂಜೀಕರ್, ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ರಾಜ್ಯ ಸಂಘಟಕ ಶ್ರೀ. ಸುನೀಲ್ ಘನವಟ್, ಲೇಖಕ-ಚಿಂತಕ ಶ್ರೀ. ವಿಕ್ರಮ್ ಭಾವೆ ಮತ್ತು ಹಿರಿಯ ಪತ್ರಕರ್ತ ಶ್ರೀ. ಪ್ರಸಾದ್ ಕಾಥೆ ಭಾಗವಹಿಸಿದ್ದರು. ಪುಣೆ ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ವಿವಿಧ ಕ್ಷೇತ್ರಗಳ ವಿದ್ವಾಂಸರು, ಹಿಂದೂಪರರು ಮತ್ತು ಧಾರ್ಮಿಕ ವ್ಯಕ್ತಿಗಳು ಸೇರಿದಂತೆ 1,000ಕ್ಕೂ ಹೆಚ್ಚು ದೇಶಭಕ್ತರು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು. ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಸತೀಶ್ ಕೊಚ್ರೇಕರ್ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು ಮತ್ತು ಶ್ರೀ. ಚೈತನ್ ತಾಗಡೆ ಕಾರ್ಯಕ್ರಮ ನಿರ್ವಹಿಸಿದರು.
ಮಾಧವ್ ಭಂಡಾರಿ ಮಾತು ಮುಂದುವರೆಸಿ,

1. ನಾನು ಅನೇಕ ವರ್ಷಗಳಿಂದ ಎಡಪಂಥೀಯರು, ಕಮ್ಯುನಿಸ್ಟರ ಕಪಟತನವನ್ನು ನೋಡುತ್ತಿದ್ದೇನೆ. ಸಮಾಜವಾದಿಗಳು ಎಂದಿಗೂ ಪ್ರಾಮಾಣಿಕವಾಗಿ ವರ್ತಿಸುವುದಿಲ್ಲ. ಅವರು ಒಂದು ಮಾತು ಹೇಳುತ್ತಾರೆ ಮತ್ತು ಇನ್ನೊಂದು ರೀತಿಯಲ್ಲಿ ವರ್ತಿಸುತ್ತಾರೆ. ಅವರ ಮನೆಗಳಲ್ಲಿ ದೇವಸ್ಥಾನ ಇರುತ್ತದೆ. ಅವರು ಮನೆಯಲ್ಲಿ ಪೂಜೆ ಮಾಡುತ್ತಾರೆ ಮತ್ತು ಹೊರಗೆ ಹಿಂದೂ ಧರ್ಮ, ದೇವರುಗಳನ್ನು ಟೀಕಿಸುತ್ತಾರೆ.
ಎಡಪಂಥೀಯರಿಗೆ ಭಾರತವು ಒಂದು ‘ದೇಶ’ ಎಂದು ಅನಿಸುವುದಿಲ್ಲ! – ಮಾಧವ್ ಭಂಡಾರಿಈ ಸಂದರ್ಭದಲ್ಲಿ ಶ್ರೀ. ವಿಕ್ರಮ್ ಭಾವೆ ಅವರು ಮಾತನಾಡಿ, “ನಾನು ಜೈಲಿನಲ್ಲಿದ್ದಾಗ, ಕೋರೆಗಾಂವ್ ಭೀಮಾ ಪ್ರಕರಣದಲ್ಲಿ ಬಂಧಿತರಾಗಿದ್ದ ಒಬ್ಬ ನಕ್ಸಲ್ ಕಾರ್ಯಕರ್ತನ ಆರೋಪಪತ್ರವನ್ನು ನೋಡಿದೆ. ಈ ಆರೋಪಪತ್ರಕ್ಕೆ ಅವನ ಒಂದು ಸಣ್ಣ ನೋಟ್‌ಬುಕ್ ಜೋಡಿಸಲಾಗಿತ್ತು. ಈ ನೋಟ್‌ಬುಕ್‌ನಲ್ಲಿ ಕಾಡಿನಲ್ಲಿರುವ ನಕ್ಸಲರಿಗೆ ಎಷ್ಟು ಉಪಾಹಾರ, ಊಟ ನೀಡಬೇಕು ಎಂಬುದರಿಂದ ಹಿಡಿದು ‘ಬಾಬರಿ ಪತನವನ್ನು ವಿರೋಧದ ದಿನವನ್ನಾಗಿ ಆಚರಿಸಬೇಕು’ ಎಂಬ ಉಲ್ಲೇಖವಿತ್ತು. ಈ ಪುಸ್ತಕದಲ್ಲಿ ನಾವು ಊಹಿಸಲೂ ಸಾಧ್ಯವಿಲ್ಲದಂತಹ ಅನೇಕ ಆಘಾತಕಾರಿ ವಿಷಯಗಳಿದ್ದವು” ಎಂದರು. ಈ ವಿಷಯದ ಬಗ್ಗೆ ಶ್ರೀ. ಮಾಧವ್ ಭಂಡಾರಿ ಅವರು, “ಎಡಪಂಥೀಯರಿಗೆ ‘ಭಾರತ’ ಒಂದು ದೇಶ ಎಂದು ಅನಿಸುವುದಿಲ್ಲ, ಅಷ್ಟೊಂದು ಭೀಕರ ಪರಿಸ್ಥಿತಿ ಇದೆ. ಈ ಎಲ್ಲಾ ಎಡಪಂಥೀಯರು ಮತ್ತು ಕಮ್ಯುನಿಸ್ಟರ ಆದರ್ಶ ಚೀನಾದ ‘ಮಾವೊ’ ಆಗಿದ್ದು, ಅವರ ಸಾಹಿತ್ಯದ ಆಧಾರದ ಮೇಲೆ ಇಲ್ಲಿನ ನಕ್ಸಲರು ಮತ್ತು ಕಮ್ಯುನಿಸ್ಟರು ತಮ್ಮ ಸಾಹಿತ್ಯವನ್ನು ರಚಿಸುತ್ತಾರೆ” ಎಂದು ಹೇಳಿದರು. |
2. ಹಿಂದೆ ಹಳ್ಳಿಗಳು ಮತ್ತು ಕಾಡುಗಳಿಗೆ ಸೀಮಿತವಾಗಿದ್ದ ನಕ್ಸಲಿಸಂ ಈಗ ಅದಕ್ಕಿಂತ ಹೆಚ್ಚು ಅಪಾಯಕಾರಿಯಾಗಿದ್ದು, ಅದು ನಗರಗಳಲ್ಲಿನ ಬುದ್ಧಿಜೀವಿಗಳ ವಲಯದಲ್ಲಿ ಹರಡಿದೆ.
3. ಈ ನಕ್ಸಲಿಸಂ ಬೌದ್ಧಿಕ ಹಿಂಸಾಚಾರಕ್ಕೆ ಕಾರಣವಾಗುತ್ತದೆ, ಆದ್ದರಿಂದ ಪ್ರಸ್ತುತ ‘ಜನಸುರಕ್ಷಾ ಕಾನೂನು’ ಅತ್ಯಂತ ಅಗತ್ಯವಾಗಿದೆ.
ಮಾನವ ಮನಸ್ಸಿನ ಮೇಲೆ ಪ್ರಭಾವ ಬೀರುವ ಸಂಸ್ಥೆಗಳನ್ನು ನಾಶಪಡಿಸುವುದು ಎಡಪಂಥೀಯರ ಅಜೇಂಡಾ! – ಅಭಿಜಿತ ಜೋಗ, ಪ್ರಸಿದ್ಧ ಲೇಖಕರು

ಮಾನವ ಮನಸ್ಸಿನ ಮೇಲೆ ಪ್ರಭಾವ ಬೀರುವ ಸಂಸ್ಥೆಗಳನ್ನು ನಾಶಪಡಿಸುವುದು ಮತ್ತು ಅವುಗಳನ್ನು ಎಡಪಂಥೀಯ ಸಿದ್ಧಾಂತದಿಂದ ದುರ್ಬಲಗೊಳಿಸುವುದು ಎಡಪಂಥೀಯರ ಉದ್ದೇಶವಾಗಿದೆ. ಶಿಕ್ಷಣ ಸಂಸ್ಥೆಗಳು, ಚಲನಚಿತ್ರಗಳು, ಕುಟುಂಬ ವ್ಯವಸ್ಥೆ, ಜಾತಿ ವ್ಯವಸ್ಥೆ ಮತ್ತು ಯುವ ಮನಸ್ಸಿನಲ್ಲಿ ಭ್ರಮೆಗಳನ್ನು ಸೃಷ್ಟಿಸುವುದೇ ಅವರ ಕಾರ್ಯವಾಗಿದೆ. ಸಮಾಜದಲ್ಲಿ ನಿರಂತರವಾಗಿ ಅರಾಜಕತೆ ಸೃಷ್ಟಿಸುವುದು ಕಮ್ಯುನಿಸ್ಟರ ನಿರಂತರ ಕೆಲಸವಾಗಿದೆ. ಇದರಲ್ಲಿ ಮುಖ್ಯವಾಗಿ ಬಡವರು-ಶ್ರೀಮಂತರ ನಡುವೆ ಭೇದ, ಸ್ತ್ರೀ-ಪುರುಷರ ನಡುವೆ ವಿವಾದ, ಮತ್ತು ಈ ಅಥವಾ ಆ ಕಾರಣದಿಂದ ಸಮಾಜದಲ್ಲಿ ನಿರಂತರ ಸಂಘರ್ಷ ಸೃಷ್ಟಿಸಲು ಅವರು ಪ್ರಯತ್ನಿಸುತ್ತಾರೆ. ಕಮ್ಯುನಿಸ್ಟರು ನಿರಂತರವಾಗಿ ಭಾರತೀಯ ಸಂಸ್ಕೃತಿಯ ಮೇಲೆ ಆಕ್ರಮಣ ಮಾಡುತ್ತಾರೆ. ಆದ್ದರಿಂದ, ಈ ಹೋರಾಟವನ್ನು ನಾವು ಸೈದ್ಧಾಂತಿಕ ಮಟ್ಟದಲ್ಲಿ ನಡೆಸಬೇಕಾಗಿದೆ. ದೇಶದ ಹಿತಾಸಕ್ತಿ ಮತ್ತು ಸಂಸ್ಕೃತಿಯ ಬಗ್ಗೆ ಯೋಚಿಸುವ ಮನಸ್ಥಿತಿಯನ್ನು ನಾವು ಬೆಳೆಸಿಕೊಳ್ಳಬೇಕೆಂದು ಅವರು ಕರೆ ನೀಡಿದರು.
ವಾರಿ ಉತ್ಸವದಲ್ಲಿ ಸಂವಿಧಾನ ದಿಂಡಿ ನಡೆಸುವ ರೀತಿಯಲ್ಲಿ ‘ತಾಬೂತ್’ ಮೆರವಣಿಗೆಯಲ್ಲೂ ಸಂವಿಧಾನ ದಿಂಡಿ ನಡೆಸಬೇಕು! – ವಿಚಾರ ಸಂಕಿರಣದಲ್ಲಿ ಕರೆ(ತಾಬೂತ್ ಅಥವಾ ತಾಜಿಯಾ ಎಂಬುದು ಮುಸ್ಲಿಮರ ಇಮಾಮ್ ಹುಸೇನ್ ಅವರ ಗೋರಿಯ ಒಂದು ಪ್ರತಿಕೃತಿ. ಅದನ್ನು ಅನೇಕ ರೂಪ ಮತ್ತು ಗಾತ್ರಗಳಲ್ಲಿ ಮೆರವಣಿಗೆಯಲ್ಲಿ ಕೈಯಲ್ಲಿ ಹಿಡಿದು ಸಾಗಿಸಲಾಗುತ್ತದೆ.) ವಿಚಾರ ಸಂಕಿರಣದಲ್ಲಿ ಶ್ರೀ. ಅಭಿಜಿತ್ ಜೋಗ್ ಅವರು ಮಾತನಾಡಿ, “ವಾರ್ಕರಿಗಳ ಆಷಾಢ ಯಾತ್ರೆಯು ಒಂದು ಧಾರ್ಮಿಕ ಘಟಕವಾಗಿದ್ದರೂ, ಅದರಲ್ಲಿ ಅಂಧಃ ಶ್ರದ್ಧಾ ನಿರ್ಮೂಲನ ಸಮಿತಿ ಮತ್ತು ಕಮ್ಯುನಿಸ್ಟರು ‘ಸಂವಿಧಾನ ದಿಂಡಿ’ಯನ್ನು ತಂದು ವಾರ್ಕರಿಗಳನ್ನು ದಾರಿ ತಪ್ಪಿಸುತ್ತಾರೆ. ಅದೇ ಕಮ್ಯುನಿಸ್ಟರು ಇದೇ ಪ್ರಯೋಗವನ್ನು ತಾಬೂತ್ ಮೆರವಣಿಗೆಯಲ್ಲೂ ಮಾಡಬೇಕು” ಎಂದು ಜೋಗ್ ಟೀಕಿಸಿದರು. ಕಮ್ಯುನಿಸ್ಟರು ತಾಬೂತ್ ಮೆರವಣಿಗೆಯಲ್ಲಿ ಸಂವಿಧಾನ ದಿಂಡಿಯನ್ನು ನಡೆಸಬೇಕು ಎಂದು ನಾವು ಅವರಿಗೆ ಕರೆ ನೀಡಬೇಕು ಎಂದು ಶ್ರೀ.ಮಾಧವ್ ಭಂಡಾರಿ ಅವರು ಕೂಡ ಅಭಿಪ್ರಾಯಪಟ್ಟರು. |
ಜನಸುರಕ್ಷಾ ಕಾನೂನಿನ ವ್ಯಾಪ್ತಿಯನ್ನು ಹೆಚ್ಚಿಸಲು ಮತ್ತು ಅದರ ವಿಭಾಗಗಳು ಹಾಗೂ ಶಿಕ್ಷೆಗಳನ್ನು ಕಠಿಣಗೊಳಿಸಲು ಪ್ರಯತ್ನಿಸಬೇಕು – ಹಿಂದೂ ವಿಧಿಜ್ಞ ಪರಿಷತ್ ಅಧ್ಯಕ್ಷರು, ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ್

ಎಷ್ಟೇ ಹೊಸ ಕಾನೂನುಗಳನ್ನು ರೂಪಿಸಿದರೂ, ವ್ಯವಸ್ಥೆಯ ಮನಸ್ಥಿತಿಯನ್ನು ಬದಲಾಯಿಸುವುದು ಅವಶ್ಯಕವಾಗಿದೆ. ಹಿಂದೂಗಳು ತಮ್ಮ ಧರ್ಮ ಮತ್ತು ದೇವರ ಮೇಲೆ ನಂಬಿಕೆ ಇಟ್ಟು ಕಾರ್ಯ ನಿರ್ವಹಿಸಬೇಕು. ಹಿಂದೂಗಳಿಗೆ ದೈವೀಕ ಅನುಭವಗಳ ವರ ಇದೆ. ಅದರ ಪ್ರಯೋಜನ ಪಡೆಯಲು, ಪ್ರತಿ ಕೆಲಸದಲ್ಲೂ ದೈವೀಕತೆಯನ್ನು ಇರಿಸಿಕೊಳ್ಳುವ ಅಭ್ಯಾಸ ಮಾಡಿಕೊಳ್ಳಬೇಕು. ವಿರೋಧಿಗಳ ಷಡ್ಯಂತ್ರಗಳಿಗೆ ಬಲಿಯಾಗುವ ಬದಲು, ಅವರ ದೌರ್ಬಲ್ಯಗಳನ್ನು ಗುರುತಿಸಿ ಅವುಗಳನ್ನು ಬಯಲು ಮಾಡುವುದು ಮಹತ್ವದ್ದಾಗಿದೆ. ಭಾರತದ ವ್ಯವಸ್ಥೆಯನ್ನು ನೋಡುವಾಗ ನಮ್ಮ ದೃಷ್ಟಿ ಜಾಗೃತವಾಗಿರಬೇಕು. ಈಗ ಜನಸುರಕ್ಷಾ ಕಾನೂನಿನ ವ್ಯಾಪ್ತಿ ಸೀಮಿತವಾಗಿದೆ, ಅದರ ವ್ಯಾಪ್ತಿಯನ್ನು ಹೆಚ್ಚಿಸಲು ಮತ್ತು ವಿಭಾಗಗಳು ಹಾಗೂ ಶಿಕ್ಷೆಗಳನ್ನು ಕಠಿಣಗೊಳಿಸಲು ಪ್ರಯತ್ನಿಸಬೇಕಾಗಿದೆ.
ನಕ್ಸಲ್ ವಿರೋಧಿ ಹೋರಾಟಕ್ಕೆ ಹಿಂದೂಗಳ ಕಾರ್ಯವಿಧಾನವನ್ನು ರೂಪಿಸಬೇಕು – ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ರಾಜ್ಯ ಸಂಘಟಕ, ಸುನೀಲ ಘನವಟ

ಅಂಧಃ ಶ್ರದ್ಧಾ ನಿರ್ಮೂಲನ ಸಮಿತಿಯ ಟ್ರಸ್ಟ್‌ನಲ್ಲಿ ಎಷ್ಟೊಂದು ಹಗರಣಗಳಾಗಿವೆ, ಆ ಸಮಿತಿಗೆ ಒಬ್ಬ ಆಡಳಿತಾಧಿಕಾರಿಯನ್ನು ನೇಮಿಸಿ ಅವರ ನಿಜ ಸ್ವರೂಪವನ್ನು ಹೊರತರಬೇಕು. ಅಂಧಃಶ್ರದ್ಧಾ ನಿರ್ಮೂಲನ ಸಮಿತಿಗೆ ಯಾವುದೇ ಕಡೆಯಿಂದ ಹಣಕಾಸು ನೆರವು ಸಿಗುತ್ತಿಲ್ಲ ಎಂದು ಅವರು ಹೇಳಿದ್ದರು; ಆದರೆ ಹಿಂದೂ ಜನಜಾಗೃತಿ ಸಮಿತಿಯು ಪುರಾವೆಗಳೊಂದಿಗೆ ವಿದೇಶಿ ಸಂಸ್ಥೆಗಳಿಂದ ಅಂಧಃ ಶ್ರದ್ಧಾ ನಿರ್ಮೂಲನ ಸಮಿತಿಗೆ ಹಣ ದೊರೆತಿರುವುದನ್ನು ಬಹಿರಂಗಪಡಿಸಿದೆ. ಡಾ.ನರೇಂದ್ರ ದಾಭೋಲ್ಕರ್ ಇಂದು ಜೀವಂತ ಇದ್ದಿದ್ದರೆ, ಅವರ ಟ್ರಸ್ಟ್‌ನ ಹಗರಣಗಳು ಮತ್ತು ಅಕ್ರಮಗಳಿಂದ ಅವರು ಜೈಲಿಗೆ ಹೋಗುತ್ತಿದ್ದರು. ನಕ್ಸಲರು ತಮ್ಮನ್ನು ಬೆಂಬಲಿಸುವ ಬುದ್ಧಿಜೀವಿ ವರ್ಗ, ಆರ್ಥಿಕ ಬೆಂಬಲ, ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಹೋರಾಡಲು ವಕೀಲರ ಜಾಲವನ್ನು ಹೇಗೆ ಸೃಷ್ಟಿಸಿದ್ದಾರೋ, ಅದೇ ರೀತಿ ನಕ್ಸಲರ ವಿರುದ್ಧ ಹೋರಾಡಲು ಹಿಂದೂ ಕಾರ್ಯ ವ್ಯವಸ್ಥೆಯನ್ನು (ಒಂದು ನಿರ್ದಿಷ್ಟ ಸಿದ್ಧಾಂತವನ್ನು ವ್ಯವಸ್ಥಿತವಾಗಿ ಮುಂದುವರಿಸುವ ಒಂದು ಕಾರ್ಯವಿಧಾನ) ರೂಪಿಸಬೇಕು. ಆರ್ಥಿಕ ಬಲವು ಕಮ್ಯುನಿಸ್ಟರ ಬಲದ ಮೂಲವಾಗಿದೆ. ಕೆಲವು ಕಮ್ಯುನಿಸ್ಟ್ ಬರಹಗಾರರು, ನಟರು ‘ಅವಾರ್ಡ್ ವಾಪ್ಸಿ’ (ಭಾರತ ಸರಕಾರದಿಂದ ಪಡೆದ ಪ್ರಶಸ್ತಿಗಳನ್ನು ಹಿಂದಿರುಗಿಸುವುದು) ಮಾಡಿದರು; ಆದರೆ ಪಡೆದ ಹಣವನ್ನು ಹಿಂದಿರುಗಿಸಲಿಲ್ಲ. ಇದು ಅವರ ದ್ವಿಮುಖ ನೀತಿಯನ್ನು ತೋರಿಸುತ್ತದೆ.
ಹಿಂದೂಗಳು ಜಾಗೃತರಾಗಲೇಬೇಕು! – ಹಿರಿಯ ಪತ್ರಕರ್ತ, ಪ್ರಸಾದ ಕಾಥೆ

ಹಿಂದೂ ಸಂಸ್ಕೃತಿಗೆ ಪರ್ಯಾಯವಿಲ್ಲ. ಇತರ ಧರ್ಮಗಳಿಗೆ ತಮ್ಮದೇ ದೇಶಗಳಿವೆ; ಆದರೆ ಹಿಂದೂಗಳಿಗೆ ಭಾರತದ ಹೊರತಾಗಿ ಬೇರೆ ಆಧಾರವಿಲ್ಲ. ನಮ್ಮ ಪೂರ್ವಜರು ಬಹಳ ಕಷ್ಟಪಟ್ಟಿದ್ದಾರೆ; ಆದ್ದರಿಂದ ಈಗ ನಾವು ಜಾಗೃತರಾಗಬೇಕಿದೆ ಎಂದವರು ಹೇಳಿದರು.
ಹಿಂದೂತ್ವವೇ ನಮ್ಮ ಸಂಸ್ಕೃತಿಯ ತಿರುಳು! – ಲೇಖಕ, ವಿಕ್ರಮ ಭಾವೆ

ನಾನು ಶಾಲೆಯಲ್ಲಿ ಓದುತ್ತಿದ್ದಾಗ, ಅಂಧಃ ಶ್ರದ್ಧಾ ನಿರ್ಮೂಲನ ಸಮಿತಿಯ ಕಾರ್ಯಕರ್ತರು ಶಾಲೆಗೆ ಬರುತ್ತಿದ್ದರು. ಅವರು ನಮಗೆ “ಆನೆಯ ಮುಖ, ಕೋತಿಯ ಮುಖ ಇರುವ ದೇವರು ಇರುತ್ತಾರೆಯೇ?”, “ಶ್ರೀ ಗುರುದೇವ ದತ್ತ” ನಾಮಜಪ ಮಾಡುವುದರಿಂದ ಏನಾದರೂ ಪ್ರಯೋಜನ ಇದೆಯೇ?” ಎಂದು ಹಿಂದೂ ಧರ್ಮದ ಬಗ್ಗೆ ಶಾಲಾ ಮಕ್ಕಳ ಮನಸ್ಸಿನಲ್ಲಿ ಗೊಂದಲ ಸೃಷ್ಟಿಸುವ ಪ್ರಶ್ನೆಗಳನ್ನು ಕೇಳುತ್ತಿದ್ದರು. ಅಂನಿಸ ಕಾರ್ಯಕರ್ತರು ಚರ್ಚ್‌ಗೆ ಹೋಗಿ, “ಬೈಬಲ್‌ನಲ್ಲಿ ಭೂಮಿ ಸಮತಟ್ಟಾಗಿದೆ ಎಂದು ಬರೆದಿದೆ. ಅದು ನಿಜವೇ ಅಥವಾ ಸುಳ್ಳೇ?” ಎಂದು ಎಂದಿಗೂ ಕೇಳುವುದಿಲ್ಲ. ಮದರಸಾಗೆ ಹೋಗಿ “ಸ್ವರ್ಗದಲ್ಲಿ 72 ಹೂರರು (ಅಪ್ಸರೆಯರು) ಇರುತ್ತಾರೋ ಇಲ್ಲವೋ?” ಎಂದು ಎಂದಿಗೂ ಕೇಳುವುದಿಲ್ಲ.
ನಾನು ಜೈಲಿನಲ್ಲಿದ್ದಾಗ, ಭಾರತೀಯ ಸಂಸ್ಕೃತಿಯ ಬಗ್ಗೆ ಜೈಲಿನಲ್ಲಿ ಇದ್ದುಕೊಂಡು ವಿಷವನ್ನು ಹರಡುವ ಕೆಲಸವನ್ನು ನಗರದ ನಕ್ಸಲರು ಮಾಡುತ್ತಿದ್ದಾರೆ ಎಂದು ನನಗೆ ಅರಿವಾಯಿತು. ಹಿಂದೂತ್ವವೇ ನಮ್ಮ ಸಂಸ್ಕೃತಿಯ ತಿರುಳು ಮತ್ತು ನಾವು ಈ ಹೋರಾಟಕ್ಕೆ ಹಿಂದೂಗಳಾಗಿ ಇಳಿಯಬೇಕಾಗಿದೆ.
ಬೆಳಿಗ್ಗೆಯಿಂದ ಮಳೆ ಬಂದರೂ ಕಾರ್ಯಕ್ರಮಕ್ಕೆ ಪುಣೆಯವರಿಂದ ಅಭೂತಪೂರ್ವ ಪ್ರತಿಕ್ರಿಯೆ!ಪುಣೆಯಲ್ಲಿ ಕಳೆದ 2 ದಿನಗಳಿಂದ ಮಳೆಯಾಗುತ್ತಿತ್ತು ಮತ್ತು ವಿಚಾರ ಸಂಕಿರಣದ ದಿನದಂದು ಬೆಳಿಗ್ಗೆಯಿಂದ ನಗರದಲ್ಲಿ ಭಾರಿ ಮಳೆಯಿತ್ತು. ಅನೇಕ ರಸ್ತೆಗಳು ಜಲಾವೃತವಾಗಿ ಸಂಚಾರ ದಟ್ಟಣೆಯಾಗಿತ್ತು. ಹೀಗಿದ್ದರೂ, ಪುಣೆಯವರು ಈ ಕಾರ್ಯಕ್ರಮಕ್ಕೆ ಹಾಜರಾಗಿ ಅಭೂತಪೂರ್ವ ಪ್ರತಿಕ್ರಿಯೆ ನೀಡಿದರು. ವಿಚಾರ ಸಂಕಿರಣದ ಕೊನೆಯಲ್ಲಿ ಸಭಾಂಗಣ ಸಂಪೂರ್ಣವಾಗಿ ತುಂಬಿತ್ತು ಮತ್ತು ಕೆಲವು ದೇಶಪ್ರೇಮಿಗಳು ನಿಂತುಕೊಂಡೇ ಕಾರ್ಯಕ್ರಮವನ್ನು ಆಲಿಸಿದರು. |
ಉಪಸ್ಥಿತ ಗಣ್ಯರು – ವೀರ ಸಾವರ್ಕರ್ ಯುವ ಮಂಚ್‌ನ ಡಾ. ನೀಲೇಶ್ ಲೋಣಕರ್, ಭೊಂಗವಲಿಯ ದತ್ತಗಡ ದೇವಸ್ಥಾನದ ಮಠಾಧಿಪತಿ ಪೂಜ್ಯ ಜಾಧವ್ ಮಹಾರಾಜ್, ಭುಕೂಮ್‌ನ ‘ಸ್ವಯಂಭೂ ಶ್ರೀರಾಮೇಶ್ವರ ದೇವಸ್ಥಾನ ಟ್ರಸ್ಟ್’ನ ಶ್ರೀ. ವಿಜಯ್ ಮಾಜಿರೆ, ಗೌರವ ಪ್ರಾಣಿ ಕಲ್ಯಾಣ ಅಧಿಕಾರಿ ಶ್ರೀ. ರಾಹುಲ್ ಕದಮ್, ಗ್ರಾಹಕ್ ಪೇಠದ ಶ್ರೀ. ಸೂರ್ಯಕಾಂತ್ ಪಾಠಕ್, ಇತಿಹಾಸ ಸಂಶೋಧಕ ಶ್ರೀ. ಋತ್ವಿಕ್ ಕುಲಕರ್ಣಿ, ಪುಣೆ ನಗರ ಭಾಜಪ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಪ್ರಿಯಾಂಕಾ ಶೆಡ್ಗೆ, ಶ್ರೀ .ಪ್ರಲ್ಹಾದ ಸಾಯಕರ್, ಮಾಲೆಗಾಂವ್ ಸ್ಫೋಟ ಪ್ರಕರಣದಿಂದ ನಿರ್ದೋಷಿಯಾಗಿ ಬಿಡುಗಡೆಯಾದ ಹಿಂದೂ ಕಾರ್ಯಕರ್ತ ಶ್ರೀ. ಸಮೀರ್ ಕುಲಕರ್ಣಿ, ಪ್ರತಾಪಗಡ ಉತ್ಸವ ಸಮಿತಿಯ ಶ್ರೀ. ವಿನಾಯಕ್ ಸಣಸ್, ವಿಶ್ವ ಹಿಂದೂ ಪರಿಷತ್ ಸಹ ಕಾರ್ಯದರ್ಶಿ ಶ್ರೀ. ದತ್ತ ಪೋಕಳೆ, ಶ್ರೀ .ನಾನಾ ಕ್ಷೀರಸಾಗರ್, ಶ್ರೀ. ಮದನ್ ಡಾಂಗಿ, ನಿವೃತ್ತ ಪೊಲೀಸ್ ಅಧಿಕಾರಿ ಶ್ರೀ. ಪ್ರಕಾಶ್ ಲೊಂಧೆ, ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಶ್ರೀ ಸಚಿನ್ ಘುಲೆ, ಸಮರಸತಾ ಆಯೋಗ ಜಿಲ್ಲಾ ಮುಖ್ಯಸ್ಥೆ ಕವಿತಾ ರಾಠೋಡ್, ಜೆಜುರಿ ಗಡ-ಕಡೆಪಠಾರ ಖಂಡೋಬಾ ದೇವಸ್ಥಾನದ ಟ್ರಸ್ಟಿ ಶ್ರೀ. ಮಂಗೇಶ್ ಜೆಜುರಿಕರ್, ಪವಿತ್ರಂ ಫೌಂಡೇಶನ್‌ನ ನಿರ್ದೇಶಕ ಶ್ರೀ. ಪ್ರಕಾಶ್ ಶ್ರೀಮಣಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಗಾವಠಾಣ್‌ನ ಶ್ರೀ. ಪ್ರಮೋದ್ ವಸಹಡ್ಕರ್, ಉದ್ದವ್ ಬಾಳಾಸಾಹೇಬ್ ಠಾಕ್ರೆ ಪಕ್ಷದ ಉಪ ನಗರ ಮುಖ್ಯಸ್ಥ ಶ್ರೀ. ಭರತ್ ಕುಂಭಾರಕರ್, ವಕೀಲರಾದ ಗಾಯತ್ರಿ ಖಡ್ಕೆ, ಹ.ಭ.ಪ ತುಷಾರ್ ಮಹಾರಾಜ್ ಚೌಧರಿ, ವನಮಾಲಾ ಶಿಂಧೆ, ಶ್ರೀ. ಆನಂದ ತಾಠೆ-ದೇಶಮುಖ, ಶ್ರೀ. ರಮೇಶ್ ಓಸ್ವಾಲ್, ಸನಾತನ ಸಂಸ್ಥೆಯ ಪೂಜ್ಯ (ಸೌ.) ಮನೀಷಾ ಪಾಠಕ್ ಮತ್ತು ಪೂಜ್ಯ (ಸೌ.) ಸಂಗೀತಾ ಪಾಟೀಲ್.
📍PUNE: @AdhivaktaSamiti आयोजित विशेष परिसंवादात मान्यवरांचे उद्बोधन !
🎙 वाढता अर्बन नक्षलवाद आणि जनसुरक्षा कायदा !
Watch LIVE: https://t.co/0yETS2LDRn#UrbanNaxals_NationalThreat : Let’s take a stand against rising URBAN NAXALISM 🔥 pic.twitter.com/3G8dcIbAll
— Rashtrabhakta Adhivakta Samiti (@AdhivaktaSamiti) August 19, 2025
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ