ಮುಸ್ಲಿಮರು ತಮ್ಮ ಪೂರ್ವಜರ ಪರಂಪರೆಯನ್ನು ಸ್ವೀಕರಿಸಿದರೆ, ಅವರಿಗೆ ಹಿಂದೂ ರಾಷ್ಟ್ರದಲ್ಲಿ ಯಾವುದೇ ಅಪಾಯವಿರುವುದಿಲ್ಲ!

  • ಯೋಗಋಷಿ ರಾಮದೇವ್‌ಬಾಬಾ ಅವರಿಂದ ಮುಸ್ಲಿಮರಿಗೆ ಕರೆ!

  • ಮುಸ್ಲಿಮರ ಧರ್ಮಗುರುಗಳು, ರಾಜಕೀಯ ನಾಯಕರು ಮತ್ತು ಸಂಘಟನೆಗಳಿಂದ ಈ ಹೇಳಿಕೆಗೆ ವಿರೋಧ

ನವದೆಹಲಿ – ” ‘ಹಿಂದೂ ರಾಷ್ಟ್ರವಾದರೆ ಮುಸ್ಲಿಮರು ಎಲ್ಲಿಗೆ ಹೋಗುತ್ತಾರೆಂದು ಕೆಲವರು ಕೇಳುತ್ತಾರೆ. ನಾನು ಅವರಿಗೆ ಹೇಳಲು ಬಯಸುವುದೇನೆಂದರೆ, ಮುಸ್ಲಿಮರು ತಮ್ಮ ಪೂರ್ವಜರ ಪರಂಪರೆಯನ್ನು ಸ್ವೀಕರಿಸಬೇಕು. ಅರೇ, ಯಾರು ತನ್ನ ತಂದೆಯ (ಪೂರ್ವಜರ) ಮಗನಾಗಲು ಸಾಧ್ಯವಿಲ್ಲವೋ, ಅವರು ಬೇರೆ ಯಾರದ್ದೂ ಆಗಲು ಸಾಧ್ಯವಿಲ್ಲ. ನಮ್ಮ ಪೂರ್ವಜರು ಮತ್ತು ಋಷಿಮುನಿಗಳ ಮಾತನ್ನು ಕೇಳಿ. ನೀವು ಗಡ್ಡವನ್ನು ಇಟ್ಟುಕೊಳ್ಳಿ, ಮೀಸೆಯನ್ನು ಕತ್ತರಿಸಿ, ಯಾವುದೇ ರೀತಿಯ ಟೋಪಿ ಧರಿಸಿ, ಎಂತಹ ಪೇಟ ಕಟ್ಟಿ, ಯಾವುದೇ ಬಟ್ಟೆ ಧರಿಸಿ; ಆದರೆ ನಿಮ್ಮ ಚಾರಿತ್ರ್ಯ ಮಾತ್ರ ನಿಮ್ಮ ಪೂರ್ವಜರಂತೆಯೇ ಇರಲಿ. ಭಾರತದಲ್ಲಿ ಮುಸ್ಲಿಮರಿಗೆ ಯಾವುದೇ ಅಪಾಯವಿರುವುದಿಲ್ಲ,” ಎಂದು ಯೋಗಋಷಿ ರಾಮದೇವ್‌ಬಾಬಾ ಅವರು ದೆಹಲಿ ವಿಶ್ವವಿದ್ಯಾಲಯದ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಹೇಳಿದರು.

ನಮ್ಮೆಲ್ಲರ ಪೂರ್ವಜರು ಸನಾತನ ಹಿಂದೂಗಳು!

ರಾಮದೇವ್‌ ಬಾಬಾ ಅವರು ಮಾತನಾಡುತ್ತಾ, “ನಮ್ಮ ಹರಿದ್ವಾರದ ಹತ್ತಿರ ದೇವಬಂದ್ ಮದರಸಾ ಇದೆ, ಅಲ್ಲಿಗೆ ನನ್ನನ್ನು 2009 ರಲ್ಲಿ ಆಹ್ವಾನಿಸಲಾಗಿತ್ತು. ನಾನು ಅವರಿಗೆ ‘ಸಹೋದರರೇ, ನಮ್ಮ ಧರ್ಮಗಳು ಬೇರೆಯಾಗಿರಬಹುದು; ಆದರೆ ನಮ್ಮ ಪೂರ್ವಜರು ಒಬ್ಬರೇ’ ಎಂದು ಹೇಳಿದ್ದೆ. ನಾವು ಪ್ರವೇಶ ದ್ವಾರದಿಂದ ಒಳಗೆ ಬಂದಾಗ, ಅಲ್ಲಿ ಬರೆಯಲಾಗಿತ್ತು ಮತ್ತು ಇಲ್ಲೂ ಬರೆಯಲಾಗಿದೆ – ಹಿಂದೂ ರಾಷ್ಟ್ರದ ಪರಿಕಲ್ಪನೆಗೆ ಯಾರೂ ಹೆದರುವ ಅಗತ್ಯವಿಲ್ಲ. ನಮ್ಮೆಲ್ಲರ ಪೂರ್ವಜರು ಸನಾತನ ಹಿಂದೂಗಳಾಗಿದ್ದಾರೆ,” ಎಂದರು.

‘ಭಾರತ ಹಿಂದೂ ರಾಷ್ಟ್ರವಲ್ಲ!’ – ನಸೀಮ್ ಸಿದ್ದಿಕಿ

ರಾಷ್ಟ್ರವಾದಿ ಕಾಂಗ್ರೆಸ್ (ಶರದ್ ಪವಾರ್ ಬಣ) ಪಕ್ಷದ ರಾಷ್ಟ್ರೀಯ ವಕ್ತಾರ ನಸೀಮ್ ಸಿದ್ದಿಕಿ ಮಾತನಾಡಿ, “ನಾನು ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಮೊದಲನೆಯದಾಗಿ, ಭಾರತ ಹಿಂದೂ ರಾಷ್ಟ್ರವಲ್ಲ. ಭಾರತವು ಎಲ್ಲಾ ಧರ್ಮಗಳನ್ನು ಸಮಾನವಾಗಿ ಗೌರವಿಸುವ ತತ್ವದ ಆಧಾರದ ಮೇಲಿರುವ ಒಂದು ಜಾತ್ಯತೀತ ರಾಷ್ಟ್ರವಾಗಿದೆ. ಪ್ರತಿಯೊಬ್ಬರಿಗೂ ತಮ್ಮ ಧಾರ್ಮಿಕ ಪರಂಪರೆ ಅನುಸರಿಸುವ ಸಂಪೂರ್ಣ ಸ್ವಾತಂತ್ರ್ಯವಿದೆ. ಇಂತಹ ಹೇಳಿಕೆಗಳು ದೇಶದ ಐಕ್ಯತೆ ಮತ್ತು ಅಖಂಡತೆಗೆ ಗಂಭೀರ ಅಪಾಯ ಉಂಟುಮಾಡುತ್ತವೆ,” ಎಂದರು.

 ‘ಬಹುಶಃ ರಾಮದೇವ್‌ ಬಾಬಾ ಅವರೇ ಸ್ವತಃ ಹೆದರಿದ್ದಾರೆ!’ – ಜಮೀಯತ್ ಉಲೇಮಾ-ಎ-ಹಿಂದ್

ಜಮೀಯತ್ ಉಲೇಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಸಿರಾಜ್ ಖಾನ್ ಮಾತನಾಡಿ, “ಯಾರು ಹೆದರಿದ್ದಾರೆ? ಯಾರಿಗೆ ಭಯವಾಗುತ್ತಿದೆ? ಬಹುಶಃ ರಾಮದೇವ್‌ ಬಾಬಾ ಅವರೇ ಸ್ವತಃ ಹೆದರಿದ್ದಾರೆ. ಈ ದೇಶವು ಸಂವಿಧಾನದಂತೆ ನಡೆಯುತ್ತದೆ. (ನಾಳೆ ಪ್ರಜಾಪ್ರಭುತ್ವದ ಮಾರ್ಗದ ಮೂಲಕ ಸಂವಿಧಾನದಲ್ಲಿ ಬದಲಾವಣೆ ಮಾಡಿ ‘ಹಿಂದೂ ರಾಷ್ಟ್ರ’ ಎಂದು ಬರೆದರೆ ಈ ಮುಸ್ಲಿಮರು ಅದನ್ನು ಪಾಲಿಸುವರೇ? ಸಂವಿಧಾನದ ಹೆಸರಿನಲ್ಲಿ ಮುಸ್ಲಿಮರು ತಮಗೆ ಬೇಕಾದುದನ್ನು ಮಾಡುವ ಸ್ವಾತಂತ್ರ್ಯವನ್ನು  ಇಲ್ಲಿಯವರೆಗೆ ತೆಗೆದುಕೊಳ್ಳುತ್ತಲೇ ಬಂದಿದ್ದಾರೆ. ಅವರು ಎಂದಿಗೂ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಅಲ್ಲಿನ ಮುಸ್ಲಿಮರಿಂದ ಅಲ್ಪಸಂಖ್ಯಾತರ ಮೇಲಾಗುತ್ತಿರುವ ದೌರ್ಜನ್ಯಗಳ ಬಗ್ಗೆ ಮಾತನಾಡುವುದಿಲ್ಲವೇಕೆ? – ಸಂಪಾದಕರು) ಯಾರಿಗೂ ಇದರ ವಿರುದ್ಧ ಮಾತನಾಡುವ ಹಕ್ಕಿಲ್ಲ. ಮೂಲತಃ ಇಂತಹ ಹೇಳಿಕೆಗಳನ್ನು ನೀಡಲು ಅವರು ಯಾರು? ಅವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ,” ಎಂದರು.

ಧರ್ಮದ ಆಧಾರದ ಮೇಲೆ ನಡೆಯುವ ತಾರತಮ್ಯವನ್ನು ನಾವು ವಿರೋಧಿಸಿದ್ದೇವೆ! – ಮೌಲಾನಾ ಖಾಲಿದ್ ರಶೀದ್ ಫಿರಂಗಿ ಮಹಲಿ

ಲಕ್ಷ್ಮಣಪುರಿ (ಉತ್ತರ ಪ್ರದೇಶ ) ಯ ಈದ್ಗಾ ಇಮಾಮ್ ಮೌಲಾನಾ ಖಾಲಿದ್ ರಶೀದ್ ಫಿರಂಗಿ ಮಹಲಿ ಮಾತನಾಡಿ, “ಮುಸ್ಲಿಮರು ಎಂದಿಗೂ ಧೃತಿಗೆಡುವುದಿಲ್ಲ ಅಥವಾ ಹೆದರುವುದಿಲ್ಲ; ಏಕೆಂದರೆ ಅವರು ಅಲ್ಲಾಹನನ್ನು ಪ್ರಾರ್ಥಿಸುತ್ತಾರೆ ಮತ್ತು ವಾಸ್ತವವಾಗಿ ಎಲ್ಲಾ ಮಾನವರ ಪೂರ್ವಜರು ಒಬ್ಬರೇ ಆಗಿದ್ದಾರೆ. ಧರ್ಮದ ಆಧಾರದ ಮೇಲೆ ನಡೆಯುವ ತಾರತಮ್ಯವನ್ನು ನಾವು ಯಾವಾಗಲೂ ವಿರೋಧಿಸುತ್ತಾ ಬಂದಿದ್ದೇವೆ. ಉತ್ತರಾಖಂಡದಲ್ಲಿ ಮಸೀದಿಗಳನ್ನು ಉರುಳಿಸುತ್ತಿರುವುದು ಮತ್ತು ಮದರಸಾ ಮಂಡಳಿಯನ್ನು ರದ್ದುಗೊಳಿಸಿರುವುದರಿಂದ ಮುಸ್ಲಿಮರಿಗೆ ತೀವ್ರ ತೊಂದರೆ ಮತ್ತು ವೇದನೆಯಾಗುತ್ತಿದೆ,” ಎಂದರು. (ಕಾನೂನುಬಾಹಿರ ಕಟ್ಟಡಗಳನ್ನು ಉರುಳಿಸುವುದರಿಂದ ಮುಸ್ಲಿಮರಿಗೆ ತೊಂದರೆಯಾಗುತ್ತಿರುವುದೇಕೆ? ಮುಸ್ಲಿಮರು ಸಂವಿಧಾನವನ್ನು ಒಪ್ಪುವುದಿಲ್ಲವೇ? – ಸಂಪಾದಕರು)

 ‘ ಸಂವಿಧಾನ ಹೇಳುವಂತೆಯೇ ನಮ್ಮ ಆಲೋಚನೆ ಇದೆ!’ – ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್

ಕಾಂಗ್ರೆಸ್ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಮಾತನಾಡಿ, “ಪ್ರತಿಯೊಬ್ಬರೂ ಸನಾತನಿಗಳೇ ಆಗಿದ್ದರೆ, ಇಲ್ಲಿ ಈ ರೀತಿಯ ಕಂದಕ ಸೃಷ್ಟಿಸುವ ಪ್ರಯತ್ನಗಳು ಏಕೆ ನಡೆಯುತ್ತಿವೆ? ನಾನು ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಹೊರತುಪಡಿಸಿ ಬೇರೆ ಯಾವುದೇ ಆಲೋಚನೆಯನ್ನು ಒಪ್ಪುವುದಿಲ್ಲ. ಸಂವಿಧಾನ ಏನು ಹೇಳುತ್ತದೆ ಅದೇ ನಮ್ಮ ಆಲೋಚನೆಯಾಗಿದೆ. ನಮಗೆ ಅದರ ಮೇಲೆ ನಂಬಿಕೆ ಇದೆ ಮತ್ತು ಇಡೀ ದೇಶ ಅದನ್ನು ನಂಬುತ್ತದೆ; ಸಂವಿಧಾನದಲ್ಲೇ ಎಲ್ಲಾ ಜನರ ಶ್ರದ್ಧೆ ಅಡಗಿದೆ,” ಎಂದರು. (ಅನುಕೂಲಕ್ಕ ತಕ್ಕಂತೆ ಸಂವಿಧಾನವನ್ನು ಬೆಂಬಲಿಸುವ ಡೋಂಗಿ ಮುಸ್ಲಿಮರು! – ಸಂಪಾದಕರು)

ಸಂಪಾದಕೀಯ ನಿಲುವು

  • ಧರ್ಮದ ಆಧಾರದ ಮೇಲೆ ಭಾರತದ ವಿಭಜನೆಯಾಗಿ, ಮುಸ್ಲಿಮರು ಕೇಳಿದಂತೆ ಅವರಿಗೆ ಪಾಕಿಸ್ತಾನ ನೀಡಲಾಯಿತು ಮತ್ತು ಉಳಿದ ಹಿಂದೂಗಳ ದೇಶವು ಹಿಂದೂ ರಾಷ್ಟ್ರವಾಗಿ ಉಳಿಯಿತು. ಕಾಂಗ್ರೆಸ್ ಭಾರತವನ್ನು ತಾಂತ್ರಿಕವಾಗಿ ಜಾತ್ಯತೀತ ರಾಷ್ಟ್ರವನ್ನಾಗಿ ಮಾಡಿತು, ಆದರೆ ಮುಂಬರುವ ವರ್ಷಗಳಲ್ಲಿ ಭಾರತ ಅಧಿಕೃತವಾಗಿ ಹಿಂದೂ ರಾಷ್ಟ್ರವಾಗಲಿದೆ ಎಂಬುದನ್ನು ಮುಸ್ಲಿಮರು ನೆನಪಿನಲ್ಲಿಡಬೇಕು!
  • ಇಂದಿನ ಮುಸ್ಲಿಮರ ಹಿಂದೂ ಪೂರ್ವಜರು ಭಯಕ್ಕೊಳಗಾಗಿ ಇಸ್ಲಾಂ ಧರ್ಮ ಸ್ವೀಕರಿಸಿದ್ದರು ಎಂಬುದು ಇತಿಹಾಸ ಮತ್ತು ಇದು ಬಹುತೇಕ ಮುಸ್ಲಿಮರಿಗೆ ತಿಳಿದಿದೆ. ಹೀಗಿರುವಾಗ ಮುಸ್ಲಿಮರು ಇನ್ನು ಎಷ್ಟು ವರ್ಷಗಳ ಕಾಲ ಈ ಧಾರ್ಮಿಕ ಗುಲಾಮಗಿರಿಯ ಹೊರೆ ಹೊತ್ತುಕೊಂಡು ಹಿಂದುಳಿದವರಾಗಿ ಬದುಕಲಿದ್ದಾರೆ? ಈ ಕುರಿತು ಮುಸ್ಲಿಮರೀಗ ಯೋಚಿಸುವ ಸಮಯ ಬಂದಿದೆ!