ಛತ್ತೀಸ್‌ಗಢ ರಾಜ್ಯದಲ್ಲಿ ಮಂದಿರ ಮಹಾಸಂಘದ ಕಾರ್ಯವಿಸ್ತಾರ

ರಾಯಪುರ (ಛತ್ತೀಸ್‌ಗಢ) – ಮಹಾರಾಷ್ಟ್ರ, ಗೋವಾ, ಕರ್ನಾಟಕ ಮುಂತಾದ ರಾಜ್ಯಗಳಲ್ಲಿ ದೇವಸ್ಥಾನಗಳ ಪರಿಣಾಮಕಾರಿ ಸಂಘಟನೆಯನ್ನು ರೂಪಿಸಿದ ನಂತರ, ಈಗ ಛತ್ತೀಸ್‌ಗಢ ರಾಜ್ಯದಲ್ಲಿಯೂ ಮಂದಿರ ಮಹಾಸಂಘವನ್ನು ಸ್ಥಾಪಿಸಲಾಗಿದೆ. ವೈಶಾಖ ಶುಕ್ಲ ತೃತೀಯ ಅಂದರೆ ಅಕ್ಷಯ ತೃತೀಯದ ಪವಿತ್ರ ಮುಹೂರ್ತದಂದು, ಅಂದರೆ 19 ಏಪ್ರಿಲ್ 2026 ರಂದು ಮಂದಿರ ಮಹಾಸಂಘದ ಅಧಿಕೃತ ಸ್ಥಾಪನೆಯಾಗಲಿದೆ.
🚩 छत्तीसगढ़ में सनातन शक्ति का सशक्त कदम!
मंदिरों की रक्षा और सुव्यवस्था के लिए रायपुर में ‘मंदिर महासंघ छत्तीसगढ़’ की स्थापना की घोषणा 🙏
80+ मंदिर न्यासियों की बैठक में मंदिरों की सुरक्षा, सुव्यवस्था और धर्मप्रचार को लेकर महत्वपूर्ण निर्णय📅 19 अप्रैल (अक्षय तृतीया) को… pic.twitter.com/1cgvVyQRDp
— Sunil Ghanwat 🛕🛕 (@SG_HJS) April 17, 2026
ಮಂದಿರ ಮಹಾಸಂಘದ ರಾಷ್ಟ್ರೀಯ ಸಂಘಟಕ ಶ್ರೀ.. ಸುನೀಲ್ ಘನವಟ್ ಅವರ ಉಪಸ್ಥಿತಿಯಲ್ಲಿ 80ಕ್ಕೂ ಹೆಚ್ಚು ದೇವಸ್ಥಾನದ ವಿಶ್ವಸ್ತರು, ಪೂಜಾರಿಗಳು ಮತ್ತು ಅರ್ಚಕರ (ದೇವತೆಯ ಶಾಸ್ತ್ರೋಕ್ತ ಆಗಮ ಶಾಸ್ತ್ರದ ಪ್ರಕಾರ ನಿಯಮಿತ ಸೇವೆ ಮಾಡುವ ವ್ಯಕ್ತಿ) ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮಂದಿರ ಮಹಾಸಂಘ ಛತ್ತೀಸ್‌ಗಢದ ರಾಯಪುರ ಜಿಲ್ಲಾ ಸಂಚಾಲಕರಾಗಿ ಶ್ರೀ.. ಮದನಮೋಹನ್ ಉಪಾಧ್ಯಾಯ ಮತ್ತು ಸಹ-ಸಂಚಾಲಕರಾಗಿ ಶ್ರೀ.. ಪರ್ವೇಶ್ ತಿವಾರಿ ಅವರನ್ನು ನೇಮಿಸಲಾಗಿದೆ. ರಾಯಪುರ ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಶ್ರೀ.. ಸುನೀಲ್ ಘನವಟ್ ಮತ್ತು ಶ್ರೀ.. ಮದನಮೋಹನ್ ಉಪಾಧ್ಯಾಯ ಈ ಮಾಹಿತಿ ನೀಡಿದರು. “ಈ ಪತ್ರಿಕಾಗೋಷ್ಠಿಯಲ್ಲಿ ಸಹಸಂಯೋಜಕರಾದ ಶ್ರೀ.. ಪರವೇಶ್ ತಿವಾರಿ, ಹಿಂದೂ ಜನಜಾಗೃತಿ ಸಮಿತಿಯ ಶ್ರೀ.. ಕಮಲ್ ಬಿಸ್ವಾಲ್, ಶ್ರೀ.. ಹೇಮಂತ್ ಕಾನಸ್ಕರ್, ಶ್ರೀ.. ಆಶಿಶ್ ಪರಿದಾ ಹಾಗೂ ನೀಲಕಂಠೇಶ್ವರ ಮಹಾದೇವ ಮಂದಿರದ ಪೂ. ನೀಲಕಂಠ ತ್ರಿಪಾಠಿ ಮಹಾರಾಜ್ ಅವರು ಉಪಸ್ಥಿತರಿದ್ದರು.”
🚩 Chhattisgarh sees the formation of Mandir Mahasangh for temple protection, autonomy & better management
A major step for temple rights & preservation of Sanatan heritage – @SG_HJS
Key objectives and demands:
– Free temples from govt control
– Protect sanctity & introduce… pic.twitter.com/vvJX6CSlm6— Sanatan Prabhat (@SanatanPrabhat) April 18, 2026
ರಾಜ್ಯಾದ್ಯಂತ ದೇವಾಲಯಗಳನ್ನು ಒಗ್ಗೂಡಿಸುವ ಉಪಕ್ರಮ
ಶ್ರೀ. ಮದನ್ ಮೋಹನ್ ಉಪಾಧ್ಯಾಯ ಅವರು ಮಾತನಾಡಿ, ಛತ್ತೀಸ್‌ಗಢದಲ್ಲಿ ದೇವಾಲಯಗಳ ಸಂಘಟನೆಯನ್ನು ಬಲಪಡಿಸಲು ಸ್ಥಳೀಯ ಮಟ್ಟದಲ್ಲಿ ಕೆಲಸ ಆರಂಭವಾಗಿದೆ. ಇದರ ಅಡಿಯಲ್ಲಿ ರಾಜ್ಯಾದ್ಯಂತ ವ್ಯಾಪಕ ಸಂಪರ್ಕ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ದೇವಾಲಯಗಳ ಟ್ರಸ್ಟಿಗಳು ಮತ್ತು ಅರ್ಚಕರನ್ನು ಭೇಟಿ ಮಾಡಲಾಗುತ್ತಿದೆ. ಈ ಅಭಿಯಾನಕ್ಕೆ ಹೆಚ್ಚಿನ ವೇಗ ನೀಡಲು ಜೂನ್ ತಿಂಗಳಲ್ಲಿ ‘ಬೃಹತ್ ಮಂದಿರ ನ್ಯಾಸ ಪರಿಷತ್’ ಆಯೋಜಿಸಲಾಗುವುದು ಮತ್ತು ರಾಜ್ಯದ ಎಲ್ಲಾ ದೇವಾಲಯಗಳನ್ನು ಒಗ್ಗೂಡಿಸಿ ಅವುಗಳ ರಕ್ಷಣೆಗಾಗಿ ಪ್ರಯತ್ನಿಸಲಾಗುವುದು. ಈ ಧರ್ಮಕಾರ್ಯದಲ್ಲಿ ಪಾಲ್ಗೊಳ್ಳುವಂತೆ ರಾಜ್ಯದ ಎಲ್ಲಾ ದೇವಾಲಯಗಳ ಪ್ರತಿನಿಧಿಗಳಿಗೆ ಮಂದಿರ ಮಹಾಸಂಘವು ಕರೆ ನೀಡಿದೆ.
ಮಠ ಮತ್ತು ದೇವಾಲಯಗಳ ರಕ್ಷಣೆಗಾಗಿ ಮಹತ್ವದ ಹೆಜ್ಜೆ
ಪೂ. ನೀಲಕಂಠ ತ್ರಿಪಾಠಿ ಮಹಾರಾಜ್ ಅವರು ಮಾತನಾಡಿ, ಮಹಾರಾಷ್ಟ್ರದಲ್ಲಿ ಮಂದಿರ ಮಹಾಸಂಘದ ಮೂಲಕ ಮಠ, ದೇವಾಲಯಗಳು ಮತ್ತು ಸಂಪ್ರದಾಯಗಳನ್ನು ರಕ್ಷಿಸಲು ಹೇಗೆ ಪರಿಣಾಮಕಾರಿ ಸಂಘಟನೆ ರೂಪಗೊಂಡಿದೆಯೋ, ಅದೇ ರೀತಿ ಛತ್ತೀಸ್‌ಗಢದಲ್ಲೂ ಈ ಕಾರ್ಯ ಆರಂಭವಾಗಿದೆ. ಮಂದಿರ ಮಹಾಸಂಘವು ಛತ್ತೀಸ್‌ಗಢದ ಮಠ-ಮಂದಿರಗಳ ಸುರಕ್ಷತೆಗಾಗಿ ಮತ್ತು ದೇವಾಲಯಗಳನ್ನು ಸನಾತನ ಧರ್ಮದ ಪ್ರಚಾರ ಕೇಂದ್ರಗಳನ್ನಾಗಿ ಮಾಡಲು ಕೆಲಸ ಮಾಡಲಿದೆ. ಈ ಉಪಕ್ರಮಕ್ಕೆ ಸಂತ ಸಮಾಜದ ಸಂಪೂರ್ಣ ಬೆಂಬಲ ಇರಲಿದೆ ಎಂದು ಅವರು ಹೇಳಿದರು.
ಮಹಾಸಂಘದ ಉದ್ದೇಶ ಮತ್ತು ಬೇಡಿಕೆಗಳು
1. ಮಂದಿರ ಮಹಾಸಂಘದ ಉದ್ದೇಶದಂತೆ ಸರಕಾರಿ ನಿಯಂತ್ರಣದಲ್ಲಿರುವ ದೇವಾಲಯಗಳನ್ನು ಮುಕ್ತಗೊಳಿಸಿ ಭಕ್ತರ ನಿಯಂತ್ರಣಕ್ಕೆ ನೀಡುವುದು, ದೇವಾಲಯಗಳ ಪಾವಿತ್ರ್ಯತೆಯನ್ನು ಕಾಪಾಡಲು ವಸ್ತ್ರಸಂಹಿತೆ (Dress Code) ಜಾರಿಗೊಳಿಸುವುದು ಮತ್ತು ದೇವಾಲಯ ಸಂಸ್ಕೃತಿಯ ಮೇಲಾಗುವ ಆಘಾತಗಳಿಗೆ ಸಾಂವಿಧಾನಿಕವಾಗಿ ಉತ್ತರಿಸಲು ಕಾರ್ಯನಿರ್ವಹಿಸಲಾಗುವುದು.
2. ದೇವಾಲಯ ಮತ್ತು ಮಠಗಳ ಭೂಮಿಯನ್ನು ಅತಿಕ್ರಮಣ ಮುಕ್ತಗೊಳಿಸಲು ಕಟ್ಟುನಿಟ್ಟಿನ ‘ಆ್ಯಂಟಿ ಲ್ಯಾಂಡ್ ಗ್ರ್ಯಾಬಿಂಗ್’ (ಭೂ ಕಬಳಿಕೆ ವಿರೋಧಿ) ಕಾಯ್ದೆ ಜಾರಿಗೊಳಿಸಬೇಕು, ವಕ್ಫ್ ಬೋರ್ಡ್ ಅಕ್ರಮವಾಗಿ ವಶಪಡಿಸಿಕೊಂಡಿರುವ ದೇವಾಲಯದ ಭೂಮಿಯನ್ನು ಮುಕ್ತಗೊಳಿಸಬೇಕು ಮತ್ತು ಭಕ್ತರು ದಾನ ನೀಡಿದ ಭೂಮಿಯ ಮೇಲಿನ ಮುದ್ರೆ ಶುಲ್ಕವನ್ನು (Stamp Duty) ಸಂಪೂರ್ಣವಾಗಿ ರದ್ದುಗೊಳಿಸಬೇಕು ಎಂಬ ಬೇಡಿಕೆಗಳನ್ನು ಮಂಡಿಸಲಾಗಿದೆ.
3. ರಾಜ್ಯದ ದೇವಾಲಯಗಳ ಟ್ರಸ್ಟಿಗಳು ಮತ್ತು ಅರ್ಚಕರಿಗಾಗಿ ವಿಶೇಷ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಿ, ದೇವಾಲಯ ನಿರ್ವಹಣೆ ಮತ್ತು ಧಾರ್ಮಿಕ ವಿಧಿವಿಧಾನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲು ಮುಂದಿನ ದಿನಗಳಲ್ಲಿ ಮಂದಿರ ಮಹಾಸಂಘ ಛತ್ತೀಸ್‌ಗಢ ಕಾರ್ಯನಿರ್ವಹಿಸಲಿದೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ