ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ

ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ ಅವರು ರಾಮನಾಥಿ (ಗೋವಾ) ಇಲ್ಲಿನ ಸನಾತನ ಆಶ್ರಮಕ್ಕೆ ನೀಡಿದ ಭೇಟಿಯ ಸಮಯದಲ್ಲಿ ಮಾಡಿದ ಮಾರ್ಗದರ್ಶನ

1. ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ ಅವರ ಆಶ್ರಮಕ್ಕೆ ಆಗಮನವಾದಾಗ ಅವರನ್ನು ಸ್ವಾಗತಿಸುವಾಗ 2. ಪೂ. ಪೃಥ್ವಿರಾಜ ಹಜಾರೆ ಮತ್ತು ಸಾಧಕರು

ಫೋಂಡಾ (ಗೋವಾ) – ಕಲಿಯುಗದ ಸವಾಲಿನ ಕಾಲದಲ್ಲಿ ಕೇವಲ ಭಕ್ತಿ ಇದ್ದರೆ ಸಾಲದು, ಬದಲಾಗಿ ಸಮಾಜದ ಪ್ರತಿಯೊಬ್ಬ ವ್ಯಕ್ತಿಯು ತನ್ನಲ್ಲಿನ ಸಾತ್ವಿಕತೆಯನ್ನು ಜಾಗೃತಗೊಳಿಸಿ ಸಂಘಟಿತನಾಗುವುದು ಕಾಲದ ಅಗತ್ಯವಾಗಿದೆ. ಮಾನವ ಜನ್ಮದಲ್ಲಿಯೇ ಸ್ವಂತದ ಹಣೆಬರಹ ಬದಲಾಯಿಸುವ ಸಾಮರ್ಥ್ಯವಿದ್ದು, ಯೋಗ್ಯ ಗುರುಗಳ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಿದರೆ ವಿಶ್ವಶಾಂತಿಯ ಗುರಿಯನ್ನು ತಲುಪಬಹುದು, ಎಂದು ಹಿಂದೂ ಧರ್ಮದ ರಕ್ಷಣೆಗಾಗಿ ಅವಿರತವಾಗಿ ಕಾರ್ಯನಿರ್ವಹಿಸುತ್ತಿರುವ ರಾಮಾನಂದಾಚಾರ್ಯ ದಕ್ಷಿಣ ಪೀಠ, ನಾಣಿಜಧಾಮ (ರತ್ನಾಗಿರಿ) ಇಲ್ಲಿನ ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ ಅವರು ಓಜಸ್ವಿ ಮಾರ್ಗದರ್ಶನ ನೀಡಿದರು. ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ ಅವರು ೧೩ ಜುಲೈ ದಿನದಂದು ರಾಮನಾಥಿ, ಗೋವಾ ಇಲ್ಲಿನ ಸನಾತನ ಸಂಸ್ಥೆಯ ಆಶ್ರಮಕ್ಕೆ ಮಂಗಳಮಯ ಭೇಟಿ ನೀಡಿದರು. ಈ ಸಮಯದಲ್ಲಿ ನೀಡಿದ ಮಾರ್ಗದರ್ಶನದಲ್ಲಿ ಅವರು ಸಮಾಜದ ಉತ್ಕರ್ಷದ ಸಂದೇಶವನ್ನು ನೀಡಿದರು.

ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ ಅವರು,

೧. ಹಿಂದೂ ಧರ್ಮೀಯರು ಎಲ್ಲ ಭೇದಗಳನ್ನು ಮರೆತು ಒಂದಾಗುವುದು ಅವಶ್ಯಕವಾಗಿದೆ. ನಮ್ಮ ಮತ್ತು ಪ.ಪೂ. ಡಾ. ಆಠವಲೆ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ) ಅವರ ಮಿಷನ್ (ಕಾರ್ಯ) ಒಂದೇ ಆಗಿದೆ, ಅದೆಂದರೆ ಹಿಂದೂ ಧರ್ಮದ ರಕ್ಷಣೆ ಮತ್ತು ಉತ್ಥಾನ!

೨. ಕಲಿಯುಗದಲ್ಲಿ ರಜ ಮತ್ತು ತಮ ಗುಣಗಳ ಪ್ರಭಾವವು ತಾನಾಗಿಯೇ ಹೆಚ್ಚಾಗುತ್ತದೆ, ಅದಕ್ಕಾಗಿ ಯಾವುದೇ ಆಮಂತ್ರಣದ ಅಗತ್ಯವಿರುವುದಿಲ್ಲ. ಈ ಗುಣಗಳು ಮಾನವ ಜೀವನವನ್ನು ಅಧೋಗತಿಯತ್ತ ಕೊಂಡೊಯ್ಯುತ್ತವೆ. ಈ ಗುಣಗಳ ಪ್ರಭಾವವನ್ನು ನಷ್ಟಗೊಳಿಸಿ ಸಾತ್ವಿಕತೆಯನ್ನು ಹೆಚ್ಚಿಸಲು ಸಮಾಜವು ‘ಸಾಧನೆ’ ಮಾಡುವುದು ಅನಿವಾರ್ಯವಾಗಿದೆ.

ಸನಾತನ ಸಂಸ್ಥೆಯ ಕುರಿತು ವ್ಯಕ್ತಪಡಿಸಿದ ಗೌರವೊದ್ಗಾರ

೧. ಪ.ಪೂ. ಡಾ. ಆಠವಲೆ ಅವರು ಅಂತರ್ಬಾಹ್ಯ ಸತ್ಪುರುಷರಾಗಿದ್ದು, ಅವರ ಮಾರ್ಗದರ್ಶನದಲ್ಲಿ ಸನಾತನದ ಸಾಧಕರು ಪ್ರಪಂಚದಾದ್ಯಂತ ವಿಶ್ವಶಾಂತಿಯ ಅಸಾಮಾನ್ಯ ಕಾರ್ಯವನ್ನು ಮಾಡುತ್ತಿದ್ದಾರೆ. ಈ ಕಾರ್ಯವು ಬೇರೆ ಯಾವುದೇ ಸಂಪ್ರದಾಯಕ್ಕೆ ಸುಲಭವಾಗಿ ಸಾಧ್ಯವಾಗಿಲ್ಲ; ಏಕೆಂದರೆ ಇಲ್ಲಿ ಗುರುತತ್ತ್ವಕ್ಕೆ ಪ್ರಧಾನತೆಯನ್ನು ನೀಡಲಾಗುತ್ತದೆ ಮತ್ತು ಶಿಸ್ತುಬದ್ಧವಾಗಿ ಸಾಧನೆಯನ್ನು ಮಾಡಲಾಗುತ್ತದೆ.

೨. ನೀವು ಎಲ್ಲ ಸಾಧಕರು ಪುಣ್ಯಾತ್ಮರಾಗಿದ್ದೀರಿ; ಆದ್ದರಿಂದ ಈ ಜನ್ಮದಲ್ಲಿ ನಿಮಗೆ ಪ.ಪೂ. ಡಾ. ಆಠವಲೆ ರೂಪದಲ್ಲಿ ರತ್ನ ಸಿಕ್ಕಿದೆ.

೩. ಪ.ಪೂ. ಡಾ. ಆಠವಲೆ ಅವರಿಂದ ಪ್ರಕ್ಷೇಪಿತವಾಗುವ ಕೇವಲ ಸ್ಪಂದನಗಳಿಂದ ಸಾಧಕರ ಆಧ್ಯಾತ್ಮಿಕ ಪ್ರಗತಿಯಾಗುತ್ತಿದೆ.

೪. ಆಶ್ರಮದಲ್ಲಿನ ಸ್ಪಂದನಗಳು ಆತ್ಮಚೈತನ್ಯದತ್ತ ಕರೆದೊಯ್ಯುವಂತಿವೆ. ಇಲ್ಲಿನ ಸಾಧಕರಲ್ಲಿ ಈ ಚೈತನ್ಯ (ಸಾತ್ವಿಕತೆ) ಕಾಣಿಸುತ್ತಿದೆ.

೫. ಸಾಧಕರು ಪ.ಪೂ. ಡಾ. ಆಠವಲೆ ಅವರ ಆಜ್ಞಾಪಾಲನೆಯನ್ನು ಮಾಡಬೇಕು, ಇದರಿಂದ ನಮ್ಮ ಜೀವನದ ಕಲ್ಯಾಣವಾಗುತ್ತದೆ.

ಭಾವಪೂರ್ಣ ವಾತಾವರಣದಲ್ಲಿ ನೆರವೇರಿದ ಸನ್ಮಾನ ಸಮಾರಂಭ!

ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ ಅವರಿಗೆ ಉಡುಗೋರೆಯನ್ನು ನೀಡಿ ಸನ್ಮಾನಿಸುವಾಗ ಪೂ. ಪೃಥ್ವಿರಾಜ ಹಜಾರೆ

ಜಗದ್ಗುರು ಶ್ರೀ ರಾಮಾನಂದಾಚಾರ್ಯ ಪರಂಪರೆಗನುಸಾರ ಮೊದಲು ಮಂಗಲಾಚರಣೆಯ ಪಠಣವಾಯಿತು ಮತ್ತು ನಂತರ ಅವರು ಸಾಧಕರಿಗೆ ಮಾರ್ಗದರ್ಶನ ಮಾಡಿದರು. ಮಾರ್ಗದರ್ಶನದ ಆರಂಭದಲ್ಲಿ ಸನಾತನದ ಸಾಧಕ ದಂಪತಿಗಳಾದ ಶ್ರೀ. ಅಭಿಷೇಕ ಪೈ ಮತ್ತು ಸೌ. ಸಿದ್ಧಿ ಪೈ ಅವರು ಗುರುಪಾದುಕಗಳ ಪೂಜೆ ಮಾಡಿದರು, ಹಾಗೆಯೇ ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ ಅವರ ಆರತಿಯನ್ನು ಬೆಳಗಿದರು. ಈ ಸಮಯದಲ್ಲಿ ಸನಾತನದ ಪುರೋಹಿತ ಶ್ರೀ. ಸಿದ್ದೇಶ ಕರಂದೀಕರ್ ಅವರು ಮಂತ್ರಪಠಣ ಮಾಡಿದರು. ಇದರ ನಂತರ ಸನಾತನದ ಪೂ. ಪೃಥ್ವಿರಾಜ ಹಜಾರೆ ಅವರು ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ ಅವರಿಗೆ ಪುಷ್ಪಹಾರವನ್ನು ಹಾಕಿ ಮತ್ತು ಕಾಣಿಕೆಯನ್ನು ಅರ್ಪಿಸಿ ಭಾವಪೂರ್ಣ ಸನ್ಮಾನ ಮಾಡಿದರು. ಈ ಸಮಯದಲ್ಲಿ ಅವರೊಂದಿಗೆ ಬಂದಿದ್ದ ಎಲ್ಲ ಭಕ್ತರನ್ನೂ ಸತ್ಕರಿಸಲಾಯಿತು. ಈ ಸಮಯದಲ್ಲಿ ಭಾರತಾಚಾರ್ಯ ಪೂ. (ಪ್ರಾ.) ಸು.ಗ. ಶೇವಡೆ ಮತ್ತು ಸನಾತನದ ಪೂ. (ಸೌ.) ಜ್ಯೋತಿ ಧವಳೀಕರ ಅವರ ವಂದನೀಯ ಉಪಸ್ಥಿತಿ ಇತ್ತು.

ಶ್ರೇಷ್ಠ ಸಂತ ವಿಭೂತಿಗಳ ಭೇಟಿ!

ಸನಾತನ ಸಂಸ್ಥೆಯ ಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ತಮ್ಮ ಪ್ರಾಣಶಕ್ತಿಯು ಅತ್ಯಲ್ಪವಿದ್ದಾಗಲೂ ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ ಅವರನ್ನು ಭೇಟಿಯಾದರು ಮತ್ತು ಕಾರ್ಯಕ್ಕಾಗಿ ಆಶೀರ್ವಾದ ಪಡೆದರು.