ಸೌಲಭ್ಯದ ಹೆಸರಿನಲ್ಲಿ ಭಕ್ತರ ಸುಲಿಗೆ!

ತುಳಜಾಪುರ, ಸೆಪ್ಟೆಂಬರ್ ೧೩ – ಶ್ರೀ ತುಳಜಾ ಭವಾನಿ ದೇವಿಯ ದರ್ಶನಕ್ಕಾಗಿ ನವರಾತ್ರಿ ಅವಧಿಯಲ್ಲಿ ರಾಜ್ಯದಾದ್ಯಂತ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಈ ಸಮಯದಲ್ಲಿ ಭಕ್ತರಿಗೆ ಸುಲಭ ದರ್ಶನ ಕಲ್ಪಿಸಲು ಪ್ರಯತ್ನಿಸದೆ, ಶ್ರೀ ತುಳಜಾ ಭವಾನಿ ದೇವಸ್ಥಾನದ ಆಡಳಿತ ಮಂಡಳಿಯು ‘ದೇಣಿಗೆ ದರ್ಶನ ಪಾಸ್’ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದೆ. ೨೦೦ ರೂಪಾಯಿಯ ದೇಣಿಗೆ ಪಾಸ್ ಅನ್ನು ೩೦೦ ರೂಪಾಯಿಗೆ, ೫೦೦ ರೂಪಾಯಿಯ ದೇಣಿಗೆ ಪಾಸ್ ಅನ್ನು ನೇರವಾಗಿ ೧,೦೦೦ ರೂಪಾಯಿಗೆ ಹಾಗೂ ‘ವಿಶೇಷ ಅತಿಥಿ ದರ್ಶನ ಪಾಸ್’ ಅನ್ನು ೨೦೦ ರೂಪಾಯಿಯಿಂದ ೫೦೦ ರೂಪಾಯಿಗೆ ಏರಿಸಲಾಗಿದೆ. ಈ ಹೊಸ ದರಗಳು ಸೆಪ್ಟೆಂಬರ್ ೨೦ ರಿಂದ ಅಕ್ಟೋಬರ್ ೮ ರವರೆಗೆ ಜಾರಿಯಲ್ಲಿರುತ್ತವೆ. ‘ನವರಾತ್ರಿ ಸಮಯದಲ್ಲಿ ಭಕ್ತರ ದಟ್ಟಣೆ ಹೆಚ್ಚಾಗುತ್ತದೆ’ ಎಂದು ದೇವಸ್ಥಾನದ ಆಡಳಿತ ಮಂಡಳಿ ಕಾರಣ ನೀಡಿದೆ. ‘ಬೇಗ ದರ್ಶನದ ಹೆಸರಿನಲ್ಲಿ ಮಾಡಲಾದ ಈ ಶುಲ್ಕ ಹೆಚ್ಚಳವು, ಸೌಲಭ್ಯ ಒದಗಿಸುವ ಹೆಸರಿನಲ್ಲಿ ದೇವಸ್ಥಾನದ ಆಡಳಿತ ಮಂಡಳಿಯು ಭಕ್ತರನ್ನು ಸುಲಿಗೆ ಮಾಡುತ್ತಿದೆ’ ಎಂಬ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಹಣ ಪಡೆದು ‘ವಿಶೇಷ ಅತಿಥಿ ದರ್ಶನ ಪಾಸ್’ ನೀಡುವುದು ತಪ್ಪಾದ ಪರಿಕಲ್ಪನೆ! – ಸುನೀಲ ಘನವಟ್, ರಾಷ್ಟ್ರೀಯ ಸಂಘಟಕರು, ಮಂದಿರ ಮಹಾಸಂಘ

ನಿಜವೆಂದರೆ, ಶುಲ್ಕಯುಕ್ತ ದರ್ಶನ ಸೇವೆ ಸಂಪೂರ್ಣವಾಗಿ ತಪ್ಪಾಗಿದೆ. ಶುಲ್ಕಯುಕ್ತ ದರ್ಶನದಿಂದ ಭಕ್ತರಲ್ಲಿ ಭೇದಭಾವ ಉಂಟಾಗುತ್ತದೆ. ದೂರದಿಂದ ಬರುವ, ೩೦೦ ರಿಂದ ೫೦೦ ರೂಪಾಯಿಗಳನ್ನು ಹೊಂದಿರದ ಭಕ್ತರು ಏನು ಮಾಡಬೇಕು? ದೇವಿಯ ದೃಷ್ಟಿಯಲ್ಲಿ ‘ಬಡವರು-ಶ್ರೀಮಂತರು’ ಎಲ್ಲರೂ ಸಮಾನರಾಗಿರುವುದರಿಂದ, ಪ್ರತಿಯೊಬ್ಬರಿಗೂ ದರ್ಶನದ ವಿಧಾನ ಒಂದೇ ಆಗಿರಬೇಕು. ಕೇವಲ ಆದಾಯ ಹೆಚ್ಚಿಸುವ ಉದ್ದೇಶಕ್ಕಾಗಿ ದೇವಸ್ಥಾನವು ಒಂದು ಸಂಸ್ಥೆಯೇ? ಎಂದು ಮಂದಿರದ ಆಡಳಿತ ಮಂಡಳಿ ಚಿಂತಿಸಬೇಕು. ‘ದೇವಿಗೆ ಭಕ್ತಿಭಾವದಿಂದ ಬರುವ ಭಕ್ತರು ಇಷ್ಟವಾಗುತ್ತಾರೋ, ಅಥವಾ ಹಣ ಕೊಟ್ಟು ದರ್ಶನಕ್ಕೆ ಬರುವ ಭಕ್ತರು ಇಷ್ಟವಾಗುತ್ತಾರೋ?’ ಎಂಬುದನ್ನು ದೇವಸ್ಥಾನ ಸಮಿತಿಯು ಯೋಚಿಸಬೇಕು. ಪ್ರತಿ ಬಾರಿ ಹಿಂದೂಗಳ ಹಬ್ಬ ಬಂದಾಗ ಶುಲ್ಕವನ್ನು ಹೆಚ್ಚಿಸುವುದು ಅತ್ಯಂತ ತಪ್ಪು ಮತ್ತು ಅನ್ಯಾಯಕರವಾಗಿದೆ. ಆದ್ದರಿಂದ, ‘ಈ ಶುಲ್ಕವನ್ನು ಹಿಂಪಡೆಯಬೇಕು, ಹಾಗೂ ‘ಶುಲ್ಕಯುಕ್ತ ದರ್ಶನ ಸೇವೆ’ಯನ್ನು ಶಾಶ್ವತವಾಗಿ ನಿಲ್ಲಿಸಬೇಕು’ ಎಂದು ಮಂದಿರ ಮಹಾಸಂಘವು ಆಗ್ರಹಿಸಿದೆ.
ಶುಲ್ಕ ದರ್ಶನ ಎಂದರೆ ದೇವಿ ಭಕ್ತರ ಶ್ರದ್ಧೆ ಮತ್ತು ಭಾವನೆಗಳನ್ನು ತುಳಿದು ದೇವರನ್ನೇ ಕಸಿದುಕೊಳ್ಳುವ ಕೃತ್ಯ! – ಅಮರರಾಜೆ ಕದಮ-ಪರಮೇಶ್ವರ್, ಅಧ್ಯಕ್ಷರು, ಶ್ರೀ ತುಳಜಾಭವಾನಿ ಭೋಪೆ ಪೂಜಾರಿ ಮಂಡಳಿ

ಈ ಶಾರದಾ ನವರಾತ್ರಿ ಉತ್ಸವದಲ್ಲಿ ‘ವಿಐಪಿ’ ದರ್ಶನದ ಹೆಸರಿನಲ್ಲಿ ದೇವಸ್ಥಾನದ ಆಡಳಿತ ಮಂಡಳಿಯು ಹಿಂದಿನ ಶುಲ್ಕದಲ್ಲಿ ಭಾರಿ ಹೆಚ್ಚಳ ಮಾಡಿ, ದೇವಿ ಭಕ್ತರ ಶ್ರದ್ಧೆ ಮತ್ತು ಭಾವನೆಗಳನ್ನು ತುಳಿದು, ಸಾಮಾನ್ಯರಿಂದ ದೇವರನ್ನೇ ಕಸಿದುಕೊಂಡಿದೆ. ಮೂಲತಃ, ಮಂದಿರದ ಆಡಳಿತ ಮಂಡಳಿಯು ಸಾಮಾನ್ಯ ಭಕ್ತರನ್ನು ಪರಿಗಣನೆಗೆ ತೆಗೆದುಕೊಂಡು ಅವರಿಗೆ ಹೇಗೆ ಸುಲಭವಾಗಿ ದೇವಿಯ ದರ್ಶನ ಕಲ್ಪಿಸಬಹುದು ಎಂಬುದನ್ನು ನೋಡದೆ, ಕೇವಲ ಆರ್ಥಿಕ ಆದಾಯದ ಮೂಲವಾಗಿ ಶುಲ್ಕ ದರ್ಶನದ ಪದ್ಧತಿಯನ್ನು ಪ್ರಾರಂಭಿಸಿದೆ. ಇದನ್ನು ‘ಭೋಪೆ ಪೂಜಾರಿ ಮಂಡಳಿ’ ಬಹಿರಂಗವಾಗಿ ಖಂಡಿಸುತ್ತದೆ.
ಸಂಪಾದಕೀಯ ನಿಲುವುದೇವಾಲಯಗಳ ಸರಕಾರೀಕರಣದ ದುಷ್ಪರಿಣಾಮಗಳನ್ನು ತಿಳಿಯಿರಿ! |
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”