ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ವಿಕೃತ ಮಾಹಿತಿಯನ್ನು ನೀಡುವ ‘ಖಾಲಿದ್ ಕಾ ಶಿವಾಜಿ’ ಚಲನ ಚಿತ್ರದ ಮೇಲೆ ನಿಷೇಧ ಹೇರಿ! – ಹಿಂದೂ ಜನಜಾಗೃತಿ ಸಮಿತಿ

ಮುಂಬಯಿ – ಮುಂಬರುವ ಮರಾಠಿ ಚಲನಚಲನ ಚಿತ್ರ ‘ಖಾಲಿದ್ ಕಾ ಶಿವಾಜಿ’ಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕುರಿತು ಐತಿಹಾಸಿಕವಾಗಿ ಸುಳ್ಳು, ಆಧಾರರಹಿತ ಮತ್ತು ವಿಕೃತ ಮಾಹಿತಿಯನ್ನು ನೀಡಿ ಇಡೀ ಸಮಾಜವನ್ನು ದಾರಿ ತಪ್ಪಿಸಲಾಗುತ್ತಿದೆ. ಈ ವಿಕೃತ ಪ್ರಚಾರದಿಂದ ಛತ್ರಪತಿ ಶಿವಾಜಿ ಮಹಾರಾಜರ ಅಭಿಮಾನಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ‘ಉದಯಪುರ ಫೈಲ್ಸ್: ಕನ್ಹಯ್ಯಲಾಲ್ ಟೈಲರ್ ಮರ್ಡರ್’ ಚಲನಚಲನ ಮುಸ್ಲಿಂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಅದಕ್ಕೆ ತಾತ್ಕಾಲಿಕ ನಿಷೇಧ ಹೇರಿದ್ದಂತೆ, ‘ಖಾಲಿದ್ ಕಾ ಶಿವಾಜಿ’ ಚಲನ ಚಿತ್ರಕ್ಕೂ ನಿಷೇಧ ಹೇರಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ಪತ್ರಿಕಾ ಪ್ರಕಟಣೆಯ ಮೂಲಕ ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ಮನವಿ ಮಾಡಿದೆ.

ಶ್ರೀ. ಸುನಿಲ ಘನವಟ
ಹಿಂದೂ ಜನಜಾಗೃತಿ ಸಮಿತಿಯ ಪತ್ರಿಕಾ ಪ್ರಕಟಣೆ –

ಪತ್ರಿಕಾ ಪ್ರಕಟಣೆಯಲ್ಲಿ,

೧. ಈ ಚಲನ ಚಿತ್ರದಲ್ಲಿ, ಛತ್ರಪತಿ ಶಿವಾಜಿ ಮಹಾರಾಜರ ಸೇನೆಯಲ್ಲಿ ಶೇ. ೩೫ರಷ್ಟು ಮುಸ್ಲಿಂ ಸೈನಿಕರಿದ್ದರು, ಅವರ ೧೧ ಅಂಗರಕ್ಷಕರು ಮುಸ್ಲಿಮರಾಗಿದ್ದರು, ಮತ್ತು ರಾಯಗಡದಲ್ಲಿ ಮಹಾರಾಜರು ಮಸೀದಿ ಕಟ್ಟಿಸಿದ್ದರು ಎಂಬಂತಹ ಆಕ್ಷೇಪಾರ್ಹ ಮತ್ತು ವಿಕೃತ ಹೇಳಿಕೆಗಳನ್ನು ನೀಡಲಾಗಿದೆ. ಈ ಎಲ್ಲ ಹೇಳಿಕೆಗಳು ಕಪೋಲಕಲ್ಪಿತ, ಅಪ್ರಾಮಾಣಿಕ ಮತ್ತು ಯಾವುದೇ ಐತಿಹಾಸಿಕ ಆಧಾರಗಳಿಲ್ಲದೆ ಪ್ರಸಾರ ಮಾಡಲಾಗಿದೆ.

೨. ಛತ್ರಪತಿ ಶಿವಾಜಿ ಮಹಾರಾಜರು ಹಿಂದವೀ ಸ್ವರಾಜ್ಯದ ಸ್ಥಾಪಕರಾಗಿದ್ದರು. ಅವರು ಧರ್ಮನಿಷ್ಠ ಹಿಂದವೀ ಸ್ವರಾಜ್ಯವನ್ನು ನಿರ್ಮಿಸಿದರು. ಅವರು ತಮ್ಮ ಮಲ ಸಹೋದರ ವ್ಯಂಕೋಜಿರಾಜರಿಗೆ ಬರೆದ ಪತ್ರದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ, ‘ತುರ್ಕ ಫೌಜೇತ್ ಥೇವಿಲೇ, ಮಗ್ ಜಯ ಕೈಸಾ ಹೋಯಿಲ್?’ (ತುರ್ಕ ಸೇನೆಯಲ್ಲಿ ಇರಿಸಿದರೆ, ಜಯ ಹೇಗೆ ಸಿಗುತ್ತದೆ?)

೩. ಚಲನ ಚಿತ್ರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರನ್ನು ‘ಸೆಕ್ಯುಲರ್’ ಎಂದು ಬಿಂಬಿಸುವ ಉದ್ದೇಶಪೂರ್ವಕ ಪ್ರಯತ್ನವು ಇತಿಹಾಸದ ಹೆಸರಿನಲ್ಲಿ ಸಮಾಜದಲ್ಲಿ ಗೊಂದಲವನ್ನು ಸೃಷ್ಟಿಸುತ್ತದೆ. ಛತ್ರಪತಿ ಶಿವಾಜಿ ಮಹಾರಾಜರ ಕಾಲದಲ್ಲಿ ಯಾವುದೇ ಧಾರ್ಮಿಕ ಜನಗಣತಿ ಇರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಶೇ. ೩೫ರಷ್ಟು ಮುಸ್ಲಿಂ ಸೈನಿಕರಿದ್ದರು ಎಂಬ ದಾವೆಗೆ ಯಾವ ಆಧಾರವಿದೆ?

೪. ಮುಸ್ಲಿಂ ಸಮುದಾಯಕ್ಕೆ ನಿಜವಾಗಿಯೂ ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಪ್ರೀತಿಯಿದ್ದರೆ, ಐದು ಮುಸ್ಲಿಂ ರಾಜಮನೆತನಗಳು ಅವರನ್ನು ಮುಗಿಸಲು ಪ್ರಯತ್ನಿಸುತ್ತಿರಲಿಲ್ಲ ಅಥವಾ ಛತ್ರಪತಿ ಸಂಭಾಜಿ ಮಹಾರಾಜರನ್ನು ಕ್ರೂರವಾಗಿ ಕೊಲ್ಲುತ್ತಿರಲಿಲ್ಲ. ಇಂದಿನ ಕಾಲದಲ್ಲೂ ಮುಸ್ಲಿಂ ಸಮುದಾಯಕ್ಕೆ ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಗೌರವವಿದ್ದರೆ, ಯವತ್ (ತಾ. ದೌಂಡ್, ಜಿ. ಪುಣೆ) ದಲ್ಲಿ ನಡೆದ ಹಿಂಸಾಚಾರದಲ್ಲಿ ‘ಸಯ್ಯದ್’ ಎಂಬ ಮತಾಂಧನು ಛತ್ರಪತಿ ಶಿವಾಜಿ ಮಹಾರಾಜರ ವಿಗ್ರಹವನ್ನು ಒಡೆಯುತ್ತಿರಲಿಲ್ಲ. ಆದ್ದರಿಂದ ‘ಖಾಲಿದ್ ಕಾ ಶಿವಾಜಿ’ ಚಲನ ಚಿತ್ರವು ಹಿಂದೂ ಸಮಾಜದಲ್ಲಿ ಭ್ರಮೆಯನ್ನು ಸೃಷ್ಟಿಸುವ ಮತ್ತು ಶಿವಾಜಿ ಮಹಾರಾಜರ ಸುಳ್ಳು ಚಲನ ಚಿತ್ರಣವನ್ನು ನೀಡುವ ಚಲನ ಚಿತ್ರವಾಗಿದೆ.

೫. ಭಾರತೀಯ ಸಂವಿಧಾನದ ಕಲಂ ೧೯(೨) ಮತ್ತು ಭಾರತೀಯ ದಂಡ ಸಂಹಿತೆಯ ಕಲಂ ೨೯೫ (ಎ) ಪ್ರಕಾರ, ಛತ್ರಪತಿ ಶಿವಾಜಿ ಮಹಾರಾಜರ ವಿಕೃತ ಚಿತ್ರಣವು ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದಲ್ಲದೆ, ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯನ್ನೂ ಸೃಷ್ಟಿಸಬಹುದು. ಹಿಂದೆ ಕೂಡ ‘ಪದ್ಮಾವತ್’ ಮತ್ತು ‘ಜೋಧಾ ಅಕ್ಬರ್’ ಚಲನ ಚಿತ್ರಗಳ ಸಮಯದಲ್ಲಿ ಇಂತಹ ವಿಕೃತ ಇತಿಹಾಸದಿಂದಾಗಿ ಸಾರ್ವಜನಿಕ ಆಕ್ರೋಶ ಉಂಟಾದ ಉದಾಹರಣೆಗಳಿವೆ. ಈ ಹಿನ್ನೆಲೆಯಲ್ಲಿ, ‘ಖಾಲಿದ್ ಕಾ ಶಿವಾಜಿ’ ಚಲನ ಚಿತ್ರದಲ್ಲಿನ ಐತಿಹಾಸಿಕ ಮಾಹಿತಿಯ ಅಧಿಕೃತ ಪರಿಶೀಲನೆಯಾಗುವವರೆಗೂ ಅದಕ್ಕೆ ನಿಷೇಧ ಹೇರಬೇಕು.

Khalid ka Shivaji I 8th Aug I Official Trailer I Raj More I Michael Thevar I Priyadarshan Jadhav

 

ಸಂಪಾದಕೀಯ ನಿಲುವು

ವಾಸ್ತವವಾಗಿ ಇಂತಹ ಬೇಡಿಕೆಯನ್ನು ಹಿಂದುತ್ವನಿಷ್ಠ ಸಂಘಟನೆ ಮಾಡುವ ಪ್ರಸಂಗ ಬರಬಾರದಿತ್ತು. ಸರಕಾರವೇ ಸ್ವಯಂಪ್ರೇರಿತವಾಗಿ ಇದರ ಬಗ್ಗೆ ಗಮನಹರಿಸುವುದು ಅವಶ್ಯಕ!