ಕಲಬುರಗಿಯಲ್ಲಿ ಜೈಲಿನ ಗೋಡೆ ಜಿಗಿದು ೩ ಕೈದಿಗಳು ಪರಾರಿ!

ಇದು ಕಾಂಗ್ರೆಸ್ ಸರಕಾರ ಮತ್ತು ಅವರ ಪೊಲೀಸರಿಗೆ ನಾಚಿಕೆಗೇಡಿನ ಸಂಗತಿ!

ಕಲಬುರಗಿ – ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಕಲಬುರಗಿ ಜಿಲ್ಲೆಯ ಕೇಂದ್ರ ಕಾರಾಗೃಹದಿಂದ ೩ ಕೈದಿಗಳು ಪರಾರಿಯಾಗಿದ್ದಾರೆ. ಮಸ್ತಾನ್, ಸಂತೋಷ್ ಮತ್ತು ಸಾಗರ್ ಪರಾರಿಯಾದ ಕೈದಿಗಳು. ಈ ಮೂವರೂ ಬೀದರ್‌ನ ಕೊಲೆ ಪ್ರಕರಣವೊಂದರಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು. ಮಧ್ಯರಾತ್ರಿ ೨ ಗಂಟೆಯ ಸುಮಾರಿಗೆ ಜೈಲಿನ ಗೋಡೆ ಜಿಗಿದು ಈ ಮೂವರು ಓಡಿಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. (ಆರ್.ಎಸ್.ಎಸ್. ಅನ್ನು ಟೀಕಿಸುವುದರಲ್ಲೇ ಸಮಯ ಕಳೆಯುವ ರಾಜ್ಯದ ಗೃಹ ಸಚಿವರು, ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಕನಿಷ್ಠ ಸ್ವಂತ ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆಯ ಕಡೆಗಾದರೂ ಗಮನ ಹರಿಸಿದ್ದರೆ, ಕೈದಿಗಳು ಓಡಿಹೋಗುವಷ್ಟು ಭದ್ರತಾ ವ್ಯವಸ್ಥೆ ಹದಗೆಡುತ್ತಿರಲಿಲ್ಲ! – ಸಂಪಾದಕರು)

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಇದಕ್ಕೂ ಮುನ್ನ, ಜುಲೈ ೩ ರಂದು ಕಲಬುರಗಿ ಜಿಲ್ಲೆಯ ಅಫಜಲಪುರ ಪೊಲೀಸ್ ಠಾಣೆಯ ಲಾಕಪ್‌ನಿಂದ ‘ಪೋಕ್ಸೊ’ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದ ಆರೋಪಿಯೊಬ್ಬ ಪರಾರಿಯಾಗಿದ್ದನು.

ಸಂಪಾದಕೀಯ ನಿಲುವು

ಇದು ಕಾಂಗ್ರೆಸ್ ಸರಕಾರ ಮತ್ತು ಅವರ ಪೊಲೀಸರಿಗೆ ನಾಚಿಕೆಗೇಡಿನ ಸಂಗತಿ!