ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ

ಭೋಜಶಾಲೆಯ ಆವರಣದಲ್ಲಿ ಪ್ರತಿ ಶುಕ್ರವಾರ ಮಧ್ಯಾಹ್ನ ೨ ಗಂಟೆಗಳ ಕಾಲ ನಮಾಜ್‌ ಗಾಗಿ ಸ್ಥಳಾವಕಾಶ ನೀಡುವಂತೆ ಸರಕಾರಕ್ಕೆ ಆದೇಶ

ನವ ದೆಹಲಿ – ಮಧ್ಯಪ್ರದೇಶದ ಧಾರ್‌ ನಲ್ಲಿರುವ ಭೋಜಶಾಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಮಧ್ಯಂತರ ಆದೇಶ ನೀಡುವಾಗ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ಸದ್ಯಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಉಚ್ಚ ನ್ಯಾಯಾಲಯವು ಭೋಜಶಾಲೆಯು ಹಿಂದೂಗಳದ್ದಾಗಿದೆ ಎಂದು  ತೀರ್ಪು ನೀಡಿತ್ತು. ಇದನ್ನು ಮುಸಲ್ಮಾನರು ನ್ಯಾಯಾಲಯದಲ್ಲಿ ಸವಾಲು ಹಾಕಿದ್ದಾರೆ. ಸರ್ವೋಚ್ಚ ನ್ಯಾಯಾಲಯವು ಈ ಸಮಯದಲ್ಲಿ, ಪ್ರತಿ ಶುಕ್ರವಾರ ಮಧ್ಯಾಹ್ನ 1 ರಿಂದ 3 ರ ವರೆಗೆ ಭೋಜಶಾಲೆಯ ಆವರಣದ ಹತ್ತಿರ ಮುಸಲ್ಮಾನರಿಗೆ ನಮಾಜ್ ಗಾಗಿ ಒಂದು ಯೋಗ್ಯವಾದ ಖಾಲಿ ಜಾಗವನ್ನು ಲಭ್ಯಗೊಳಿಸಿಕೊಡಬೇಕು ಎಂದು ನಿರ್ದೇಶನ ನೀಡಿದೆ. ಇದರೊಂದಿಗೆ, ಕಟ್ಟಡದ ಪ್ರಸ್ತುತ ಸ್ಥಿತಿಯಲ್ಲಿ ಯಾವುದೇ ಬದಲಾವಣೆ ಮಾಡದಂತೆ ನ್ಯಾಯಾಲಯವು ಭಾರತೀಯ ಪುರಾತತ್ವ ಇಲಾಖೆಗೆ ನಿರ್ದೇಶನ ನೀಡಿದೆ. ಈ ಪ್ರಕರಣದ ಮುಂದಿನ ವಿಚಾರಣೆಯು 3 ವಾರಗಳ ನಂತರ ನಡೆಯಲಿದೆ.

ಮುಸಲ್ಮಾನ್ ಪಕ್ಷದ ಅರ್ಜಿಗಳ ಕುರಿತು ನೋಟಿಸ್ ಜಾರಿ ಮಾಡಿದ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಪೀಠವು, ಎಲ್ಲಾ ಪಕ್ಷಗಳ ಅನುಕೂಲಕ್ಕೆ ತಕ್ಕಂತೆ ಶೀಘ್ರದಲ್ಲೇ ಇದರ ವಿಚಾರಣೆ ನಡೆಯಲಿದೆ ಮತ್ತು ಈ ಪ್ರಕರಣದ ಕುರಿತು ತ್ವರಿತವಾಗಿ ನಿರ್ಧಾರ ತೆಗೆದುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಹೇಳಿದೆ.