ಶ್ರೀ ವೈಷ್ಣೋದೇವಿ ದೇವಸ್ಥಾನದಲ್ಲಿ ೨೦ ಟನ್‌ಗಳಿಗಿಂತಲೂ ಹೆಚ್ಚು ನಕಲಿ ಬೆಳ್ಳಿ ಅರ್ಪಣೆಯಾದ ಪ್ರಕರಣ

ಜಮ್ಮು – ಇಲ್ಲಿನ ಶ್ರೀ ವೈಷ್ಣೋದೇವಿ ದೇವಸ್ಥಾನಕ್ಕೆ ಅರ್ಪಿಸಲಾದ ೫೫೦ ಕೋಟಿ ರೂಪಾಯಿ ಮೌಲ್ಯದ ನಕಲಿ ಬೆಳ್ಳಿಯ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಮ್ಮು ನ್ಯಾಯಾಲಯವು ಪೊಲೀಸರಿಗೆ ಸಂಬಂಧಿತ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಆದೇಶಿಸಿದೆ. ಜುಲೈ ೨೯ ರಂದು ನಡೆಯಲಿರುವ ಮುಂದಿನ ವಿಚಾರಣೆಯ ಸಂದರ್ಭದಲ್ಲಿ ತನಿಖಾಧಿಕಾರಿಯು ವೈಯಕ್ತಿಕವಾಗಿ ಹಾಜರಿರಬೇಕು ಎಂದು ನ್ಯಾಯಾಲಯವು ಆದೇಶಿಸಿದೆ. ಶ್ರೀ ವೈಷ್ಣೋದೇವಿ ದೇವಸ್ಥಾನದಲ್ಲಿ ಭಕ್ತರಿಂದ ೨೦ ಟನ್‌ಗಳಿಗಿಂತ ಹೆಚ್ಚು ಬೆಳ್ಳಿಯನ್ನು ಅರ್ಪಿಸಲಾಗಿತ್ತು. ಮಾರುಕಟ್ಟೆಯಲ್ಲಿ ಇದರ ಮೌಲ್ಯ ಸುಮಾರು ೫೫೦ ಕೋಟಿ ರೂಪಾಯಿಗಳಷ್ಟಿದೆ.
ಯಾವಾಗ ‘ಶೈನ್ ಬೋರ್ಡ್’ (ದೇವಸ್ಥಾನದ ಮಂಡಳಿ) ಈ ಬೆಳ್ಳಿಯನ್ನು ಕರಗಿಸಲು ಕಳುಹಿಸಿತೋ, ಆಗ ಅದರಲ್ಲಿ ಕೇವಲ ಶೇಕಡಾ ೫ ರಿಂದ ೬ ರಷ್ಟು ಮಾತ್ರ ಬೆಳ್ಳಿ ಇರುವುದು ಪತ್ತೆಯಾಗಿದೆ. ಇನ್ನುಳಿದ ಭಾಗದಲ್ಲಿ ಕ್ಯಾಡ್ಮಿಯಮ್ ಮತ್ತು ಕಬ್ಬಿಣದಂತಹ ಲೋಹಗಳು ಇರುವುದು ಕಂಡುಬಂದಿದೆ, ಅಂದರೆ ಹೆಚ್ಚಿನ ಬೆಳ್ಳಿ ನಕಲಿಯಾಗಿತ್ತು. ಈ ವಿಷಯ ಬೆಳಕಿಗೆ ಬಂದ ನಂತರ, ಜಮ್ಮುವಿನ ನ್ಯಾಯವಾದಿ ದೀಪಕ್ ಶರ್ಮಾ ಅವರು ಮೇ ೯ ರಂದು ಪೊಲೀಸ್ ಮಹಾನಿರ್ದೇಶಕರು (ಅಪರಾಧ ವಿಭಾಗ) ಮತ್ತು ಹಿರಿಯ ಪೊಲೀಸ್ ಅಧೀಕ್ಷಕರು (ಆರ್ಥಿಕ ಅಪರಾಧಗಳ ವಿಭಾಗ), ಜಮ್ಮು ಇವರಿಗೆ ವಿವರವಾದ ದೂರು ನೀಡಿ, ಮೊಕದ್ದಮೆ ದಾಖಲಿಸಲು ಹಾಗೂ ಈ ಪ್ರಕರಣದ ತನಿಖೆಗೆ ಒತ್ತಾಯಿಸಿದ್ದರು. ಭಕ್ತರು ದೇವಸ್ಥಾನಕ್ಕೆ ಅರ್ಪಿಸಿದ ಬೆಳ್ಳಿಯಲ್ಲಿ ಕಲಬೆರಕೆ ಮಾಡಲಾಗಿದೆ ಅಥವಾ ಆ ಬೆಳ್ಳಿಯನ್ನು ಬದಲಾಯಿಸಲಾಗಿದೆ ಎಂದು ಅವರು ಶಂಕೆ ವ್ಯಕ್ತಪಡಿಸಿದ್ದರು. ಇದರಲ್ಲಿ ನಡೆದಿರುವ ಅಕ್ರಮದ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಅವರು ಈ ಪ್ರಕರಣದ ವಿವರವಾದ ತನಿಖೆಗೆ ಒತ್ತಾಯಿಸಿದ್ದರು. ಈ ಪ್ರಕರಣದಲ್ಲಿ ಪೊಲೀಸರ ತನಿಖೆಯು ಮುಂದೆ ಸಾಗದಿದ್ದಾಗ, ಅವರು ನ್ಯಾಯಾಲಯದ ಮೊರೆ ಹೋಗಿ ಮೊಕದ್ದಮೆ ದಾಖಲಿಸಿ ತನಿಖೆ ನಡೆಸುವಂತೆ ಒತ್ತಾಯಿಸಿದರು. (ಇದು ಪೊಲೀಸರಿಗೆ ನಾಚಿಕೆಗೇಡಿನ ಸಂಗತಿ! – ಸಂಪಾದಕರು)
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ
೪ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಮುಖ್ಯ ಆರೋಪಿಗಳ ಬಂಧನ!
ಕಲಬುರಗಿಯಲ್ಲಿ ಜೈಲಿನ ಗೋಡೆ ಜಿಗಿದು ೩ ಕೈದಿಗಳು ಪರಾರಿ!
ಗ್ರಾಹಕನಿಗೆ 40 ಸಾವಿರ ರೂಪಾಯಿ ಪರಿಹಾರ ನೀಡಿ! – ‘ಗ್ರಾಹಕ ವಿವಾದಗಳ ಪರಿಹಾರ ಆಯೋಗ’ದಿಂದ ಅಂಚೆ ಕಚೇರಿಗೆ ಆದೇಶ : Postal Parcel Stolen
ಭಾರತ-ಪಾಕ್ ಗಡಿಯಲ್ಲಿರುವ ಅಕ್ರಮ ಮಸೀದಿಗಳು ಮತ್ತು ದರ್ಗಾಗಳನ್ನು ಧ್ವಂಸಗೊಳಿಸುವ ವಿರುದ್ಧದ ಅರ್ಜಿಗಳನ್ನು ರಾಜಸ್ಥಾನ ಹೈಕೋರ್ಟ್ ವಜಾ : Illigal Masjids around Indo-Pak border
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ