‘ವಿಶ್ವಸ್ತ’ರಾಗಿ ಭಕ್ತರನ್ನೇ ನೇಮಿಸುವಂತೆ ಆಗ್ರಹ!

ನಾಶಿಕ್ – ‘ಸಶುಲ್ಕ ದರ್ಶನ’ (ಪೇಯ್ಡ್ ದರ್ಶನ) ಪದ್ಧತಿಯು ತಪ್ಪು ಮತ್ತು ಇದು ಭಕ್ತರಲ್ಲಿ ತಾರತಮ್ಯದ ಭಾವನೆಯನ್ನು ಮೂಡಿಸುತ್ತದೆ. ದೂರ-ದೂರದಿಂದ ಬರುವ ಬಡ ಭಕ್ತರ ಬಳಿ ಹಣವಿಲ್ಲದಿದ್ದರೆ ಅವರು ಏನು ಮಾಡಬೇಕು? ಹಣದ ಕೊರತೆಯಿಂದಾಗಿ ದರ್ಶನ ನಿರಾಕರಿಸುವುದು ಅವರ ನಂಬಿಕೆಗೆ ಮಾಡುವ ಅವಮಾನ ಮತ್ತು ಸಂವಿಧಾನವು ನೀಡಿರುವ ಮೂಲಭೂತ ಧಾರ್ಮಿಕ ಹಕ್ಕುಗಳ ಉಲ್ಲಂಘನೆಯಾಗಿದೆ. ದೇವರ ದೃಷ್ಟಿಯಲ್ಲಿ ಶ್ರೀಮಂತ-ಬಡವ ಎಂಬ ಭೇದವಿಲ್ಲದೆ ಎಲ್ಲರೂ ಸಮಾನರಾಗಿರುವುದರಿಂದ ಪ್ರತಿಯೊಬ್ಬರಿಗೂ ದರ್ಶನದ ಪದ್ಧತಿ ಒಂದೇ ಆಗಿರಬೇಕು. ಸಶುಲ್ಕ ದರ್ಶನದಿಂದಾಗಿ ಪಾಸ್‌ಗಳ ಕಳ್ಳದಂಧೆ ಎಲ್ಲೆಡೆ ಹೆಚ್ಚುತ್ತಿದೆ. ಆದ್ದರಿಂದ ನಾಶಿಕ್, ತುಳಜಾಪುರ ಸೇರಿದಂತೆ ರಾಜ್ಯದ ಎಲ್ಲಾ ಸರಕಾರಿ ಸ್ವಾಮ್ಯದ ದೇವಸ್ಥಾನಗಳಲ್ಲಿನ ‘ಸಶುಲ್ಕ ದರ್ಶನ’ ಸೌಲಭ್ಯವನ್ನು ಕೂಡಲೇ ನಿಲ್ಲಿಸಬೇಕೆಂದು ಮಹಾರಾಷ್ಟ್ರ ಮಂದಿರ ಮಹಾಸಂಘದ ರಾಷ್ಟ್ರೀಯ ಸಂಘಟಕ ಶ್ರೀ. ಸುನೀಲ್ ಘನವಟ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.
೧. ತ್ರಯಂಬಕೇಶ್ವರ (ನಾಶಿಕ್) ಜ್ಯೋತಿರ್ಲಿಂಗ ಮಂದಿರ ಸಂಸ್ಥಾನದಲ್ಲಿ ಭಕ್ತರನ್ನು ಆರ್ಥಿಕವಾಗಿ ಲೂಟಿ ಮಾಡಿದ ಆರೋಪದ ಮೇಲೆ ಶರದ್ ಪವಾರ್ ಬಣದ ಪ್ರಾದೇಶಿಕ ಯುವ ಕಾರ್ಯಾಧ್ಯಕ್ಷ ಮತ್ತು ಮಂದಿರ ಸಂಸ್ಥಾನದ ವಿಶ್ವಸ್ತ ಪುರುಷೋತ್ತಮ್ ಕಡಲಗ್ ಸೇರಿದಂತೆ ಗೋಟಿರಾಮ್ ಮನಾಜಿ ಪೆಹ್ರೆ ಮತ್ತು ಅಭಿಷೇಕ್ ಕಡಲಗ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
೨. ತ್ರಯಂಬಕೇಶ್ವರದಲ್ಲಿ ೨೦೦ ರೂಪಾಯಿಗಳ ಅಧಿಕೃತ ಪಾಸ್ ಇದ್ದರೂ, ೧೦ ನಿಮಿಷಗಳಲ್ಲಿ ದರ್ಶನ ಮಾಡಿಸುವ ಆಮಿಷವೊಡ್ಡಿ ಭಕ್ತರಿಂದ ೩ ರಿಂದ ೧೨ ಸಾವಿರ ರೂಪಾಯಿಗಳನ್ನು ಕೇಳಲಾಗುತ್ತಿದೆ ಎಂಬ ವಿಷಯ ಬೆಳಕಿಗೆ ಬಂದಿದೆ. ಇಂತಹದೇ ಪರಿಸ್ಥಿತಿ ತುಳಜಾಪುರದ ತುಳಜಾ ಭವಾನಿ ದೇವಸ್ಥಾನದಲ್ಲೂ ಇದ್ದು, ಅಲ್ಲಿ ೨೦೦ ರೂಪಾಯಿಗಳ ಪಾಸ್ ನೀಡಿ ವಿಶೇಷ ದರ್ಶನ ನೀಡಲಾಗುತ್ತಿದೆ. ನವರಾತ್ರಿ ಉತ್ಸವದ ಸಮಯದಲ್ಲಿ ಇದೇ ಪಾಸ್ ದರವನ್ನು ೩೦೦, ೫೦೦ ಮತ್ತು ೧,೦೦೦ ರೂಪಾಯಿಗಳಿಗೆ ಏರಿಸಲಾಗುತ್ತದೆ. ಇಲ್ಲಿಯೂ ಸಹ ಹೆಚ್ಚುವರಿ ಹಣ ಪಡೆದು ಭಕ್ತರನ್ನು ದರ್ಶನಕ್ಕೆ ಬಿಡಲಾಗುತ್ತಿದೆ ಎಂದು ಭಕ್ತರಿಂದ ಅನೇಕ ದೂರುಗಳು ಬಂದಿವೆ.
೩. ದೇವಸ್ಥಾನಗಳು ಸರಕಾರದ ಅಥವಾ ರಾಜಕೀಯವಾಗಿ ನೇಮಕಗೊಂಡ ಸಮಿತಿಗಳ ಕೈಗೆ ಹೋದಾಗ, ಅಲ್ಲಿ ಭಕ್ತಿಯ ಬದಲು ವ್ಯಾಪಾರ ಮನೋಭಾವ ಜಾಗೃತವಾಗುತ್ತದೆ. ತ್ರಯಂಬಕೇಶ್ವರದಲ್ಲಿ ನಡೆದ ಘಟನೆಯು ದೇವಸ್ಥಾನಗಳ ಸರಕಾರೀಕರಣದ ದುಷ್ಪರಿಣಾಮವೇ ಆಗಿದೆ. ‘ಅತಿಥಿ ದೇವೋ ಭವ’ ಎಂದು ನಂಬುವ ನಾಡಿನಲ್ಲಿ ಭಕ್ತರನ್ನು ಲೂಟಿ ಮಾಡಲು ವಿಶ್ವಸ್ತರೆ ಇಂತಹ ಜಾಲವನ್ನು ನಡೆಸುವುದು ಅತ್ಯಂತ ದುರದೃಷ್ಟಕರ!
೪. ತ್ರಯಂಬಕೇಶ್ವರ ದೇವಸ್ಥಾನದ ವಿಶ್ವಸ್ತರ ನೇಮಕಾತಿಯಲ್ಲಿ ದೊಡ್ಡ ಮಟ್ಟದ ಆರ್ಥಿಕ ಅವ್ಯವಹಾರ ನಡೆದಿದೆ ಎಂದು ಮಾಜಿ ವಿಶ್ವಸ್ತರು ಆರೋಪಿಸಿದ್ದಾರೆ. ಆದ್ದರಿಂದ ಈ ‘ಪೇಯ್ಡ್’ (ಸಶುಲ್ಕ) ದರ್ಶನದ ಬಗ್ಗೆ ಆಳವಾದ ತನಿಖೆಯಾಗಬೇಕು ಮತ್ತು ಇದರಲ್ಲಿ ಇನ್ನೂ ಯಾರ್ಯಾರ ಕೈವಾಡವಿದೆ ಎಂಬುದನ್ನು ಪತ್ತೆಹಚ್ಚಬೇಕು.
೫. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳನ್ನು ತಡೆಯಲು ದೇವಸ್ಥಾನಗಳಲ್ಲಿ ‘ವಿಶ್ವಸ್ತ’ರಾಗಿ ಯಾವುದೇ ರಾಜಕೀಯ ಪಕ್ಷದ ಪದಾಧಿಕಾರಿಗಳನ್ನು ನೇಮಿಸುವ ಬದಲು, ಭಕ್ತರನ್ನು ನೇಮಿಸುವುದು ಅತ್ಯಗತ್ಯವಾಗಿದೆ. ದೇವಸ್ಥಾನದ ನಿಯಮಾವಳಿಗಳಲ್ಲಿ ಈ ರೀತಿಯ ಬದಲಾವಣೆಯನ್ನು ತರಬೇಕು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ