ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid

  • ಪಾಕಿಸ್ತಾನಿ ರೌಡಿ ಶಹಜಾದ ಭಟ್ಟಿ ಜೊತೆ ಭಾರತದ ಯುವಕ ಸಂಪರ್ಕದಲ್ಲಿರುವ ಶಂಕೆ

  • ​೬೬ ಜನರ ವಿಚಾರಣೆ ನಡೆಸಿರುವ ಮಾಹಿತಿ

ಪಾಕಿಸ್ತಾನಿ ರೌಡಿ ಶಹಜಾದ್ ಭಟ್ಟಿ

ಪುಣೆ – ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳವು (‘ಆಂಟಿ ಟೆರರಿಸ್ಟ್ ಸ್ಕ್ವಾಡ್’ ಅಂದರೆ ಎ.ಟಿ.ಎಸ್.) ಪಾಕಿಸ್ತಾನಿ ದರೋಡೆಕೋರ ಶಹಜಾದ ಭಟ್ಟಿ ಜೊತೆ ನಂಟು ಹೊಂದಿರುವ ಸಂಶಯವಿರುವ ಜಾಲದ ವಿರುದ್ಧ ಭಾರಿ ಕಾರ್ಯಾಚರಣೆ ನಡೆಸಿ, ಪುಣೆ ಮತ್ತು ಪಿಂಪ್ರಿ-ಚಿಂಚವಾಡ ಪರಿಸರದಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಭಟ್ಟಿ ಜೊತೆ ಸಂಪರ್ಕದಲ್ಲಿದ್ದಾರೆ ಎಂಬ ಸಂಶಯದ ಮೇಲೆ ೬೬ ಜನರನ್ನು ಪತ್ತೆಹಚ್ಚಿ ವಿಚಾರಣೆಗೊಳಪಡಿಸಲಾಗಿದೆ. ಈ ದಾಳಿಯ ವೇಳೆ ಎಲೆಕ್ಟ್ರಾನಿಕ್ ಉಪಕರಣಗಳು, ಮೊಬೈಲ್ ಗಳು ಮತ್ತು ಇತರ ಪ್ರಮುಖ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯ ಸಮಯದಲ್ಲಿ ಕೆಲವು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಎ.ಟಿ.ಎಸ್. ಮಾಹಿತಿ ನೀಡಿದೆ. ಈ ಕಾರ್ಯಾಚರಣೆಯ ಅಡಿಯಲ್ಲಿ ಇಡೀ ರಾಜ್ಯಾದ್ಯಂತ ಸುಮಾರು ೧೧೨ ಕ್ಕೂ ಹೆಚ್ಚು ಶಂಕಿತ ವ್ಯಕ್ತಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

ಪಾಕಿಸ್ತಾನದ ಗುಪ್ತಚರ ಸಂಸ್ಥೆ ‘ಐ.ಎಸ್.ಐ.’ನ ಸೂಚನೆಯ ಮೇರೆಗೆ ಶಹಜಾದ ಭಟ್ಟಿ ಮತ್ತು ಅವನ ಸಹಚರರು ಭಾರತದಲ್ಲಿ ರಹಸ್ಯ ‘ನೆಟ್‌ವರ್ಕ್’ (ಜಾಲ) ನಡೆಸುತ್ತಿದ್ದರು. ಈ ಶಂಕಿತರು ಫೇಸ್‌ ಬುಕ್, ಇನ್‌ ಸ್ಟಾಗ್ರಾಮ್, ಟೆಲಿಗ್ರಾಮ್ ಮತ್ತು ವಾಟ್ಸಾಪ್‌ ನಂತಹ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಭಾರತೀಯ ಯುವಕರನ್ನು ಸಂಪರ್ಕಿಸುತ್ತಿದ್ದರು. ಅನೇಕ ನಿರುದ್ಯೋಗಿ ಮತ್ತು ಸೂಕ್ಷ್ಮ ಮನಸ್ಸಿನ ಯುವಕರನ್ನು ತಮ್ಮ ಜಾಲಕ್ಕೆ ಸೆಳೆಯಲು ಈ ಗ್ಯಾಂಗ್ ಯತ್ನಿಸುತ್ತಿತ್ತು.