“…ಈಗ ನಿಜವಾದ ಅರ್ಥದಲ್ಲಿ ‘ಪ್ರೀತಿಯ ಸಹೋದರಿಯರ’ (ಲಾಡ್ಕಿ ಬಹಿನ್) ರಕ್ಷಣೆಯಾಗಲಿದೆ!”

ಮುಂಬಯಿ – ರಾಜ್ಯ ಸರಕಾರವು ವಿಧಾನಮಂಡಲ ಅಧಿವೇಶನದ ಎರಡೂ ಸದನಗಳಲ್ಲಿ ‘ಮಹಾರಾಷ್ಟ್ರ ಧರ್ಮ ಸ್ವಾತಂತ್ರ್ಯ ವಿಧೇಯಕ 2026’ ಅನ್ನು ಅಂಗೀಕರಿಸಿದೆ. ಈ ಶ್ಲಾಘನೀಯ ನಿರ್ಧಾರಕ್ಕಾಗಿ ಹಿಂದೂ ಜನಜಾಗೃತಿ ಸಮಿತಿಯು ರಾಜ್ಯ ಸರಕಾರವನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ. ಹಿಂದೂ ಸಮಾಜವು ಕಳೆದ ಅನೇಕ ವರ್ಷಗಳಿಂದ ಈ ಕಾಯ್ದೆಗಾಗಿ ಬೇಡಿಕೆಯನ್ನಿಡುತ್ತಿತ್ತು, ಕೊನೆಗೂ ರಾಜ್ಯದಲ್ಲೀಗ ಈ ಕಾಯ್ದೆ ಅಂಗೀಕಾರವಾಗಿದೆ. ದೇಶಾದ್ಯಂತ ಹಿಂದೂ ಯುವತಿಯರನ್ನು ವಂಚಿಸಿ ನಡೆಸಲಾಗುತ್ತಿರುವ ‘ಲವ್ ಜಿಹಾದ್’ ಮತ್ತು ಹಿಂದೂ ಸಮಾಜಕ್ಕೆ ಆರ್ಥಿಕ ಆಮಿಷಗಳನ್ನು ತೋರಿಸಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ **‘ಮತಾಂತರಗಳನ್ನು ಈ ಕಾಯ್ದೆಯು ಖಂಡಿತವಾಗಿಯೂ ತಡೆಯಲಿದೆ ಎಂಬ ಆಶಯವಿದೆ.

ಕಾಯ್ದೆ ಅಂಗೀಕಾರವಾಗಿದೆ, ಇನ್ನು ಮುಂದೆ ಇದರ ಅನುಷ್ಠಾನವು ಕಟ್ಟುನಿಟ್ಟಾಗಿ ಆಗಬೇಕು. ಈ ಹಿಂದೆ ರಾಜ್ಯ ಸರಕಾರವು ‘ಪ್ರೀತಿಯ ಸಹೋದರಿಯರಿಗಾಗಿ’ (ಲಾಡ್ಕಿ ಬಹಿನ್) ಆರ್ಥಿಕ ಕವಚ ನೀಡುವ ಯೋಜನೆಯನ್ನು ತಂದಿತ್ತು, ಈಗ ಅವರಿಗೆ ನಿಜವಾದ ರಕ್ಷಣೆ ನೀಡುವ ಕಾಯ್ದೆಯನ್ನು ತರುವ ಮೂಲಕ ಸರಕಾರವು ಅವರನ್ನು ಸುರಕ್ಷಿತಗೊಳಿಸಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ್ ಶಿಂದೆ ಅವರು ಪ್ರತಿಕ್ರಿಯಿಸಿದರು.
ಇಂತಹ ಕಾಯ್ದೆ ಜಾರಿಗೊಳಿಸಿದ 13ನೇ ರಾಜ್ಯ ಮಹಾರಾಷ್ಟ್ರ
ಶಿಂದೆ ಅವರು ಮುಂದುವರಿದು ಮಾತನಾಡುತ್ತಾ, “ಹಿಂದೂ ಜನಜಾಗೃತಿ ಸಮಿತಿಯು ಕಳೆದ 20 ವರ್ಷಗಳಿಂದ ಸಂಘರ್ಷ ಮಾಡುತ್ತಾ ‘ಲವ್ ಜಿಹಾದ್’ ಸಮಸ್ಯೆಯ ಬಗ್ಗೆ ದೇಶಾದ್ಯಂತ ಜಾಗೃತಿ ಮೂಡಿಸುತ್ತಿದೆ. ‘ಲವ್ ಜಿಹಾದ್’ ಎಂಬ ಪದವನ್ನು ಬಳಸಲು ಹಿಂಜರಿಯುತ್ತಿದ್ದ ಕಾಲದಲ್ಲಿ, ಅಂದರೆ 2006ರಲ್ಲಿ ಸಮಿತಿಯು ಈ ಕುರಿತಾದ ಮೊದಲ ಗ್ರಂಥವನ್ನು ಪ್ರಕಟಿಸಿತ್ತು. ಲವ್ ಜಿಹಾದ್ ಮತ್ತು ಮತಾಂತರ ವಿಷಯದ ಕುರಿತು ಸಮಿತಿಯ ವಕ್ತಾರರು ಸಾವಿರಾರು ಉಪನ್ಯಾಸಗಳನ್ನು ನೀಡಿದ್ದಾರೆ; ನೂರಾರು ಸಭೆಗಳ ಮೂಲಕ ಜಾಗೃತಿ ಮೂಡಿಸಲಾಗಿದೆ; ಪ್ರದರ್ಶನಗಳ ಮೂಲಕ ಅರಿವು ಮೂಡಿಸಲಾಗಿದೆ; ಶ್ರದ್ಧಾ ವಾಲ್ಕರ್ ಪ್ರಕರಣದಂತಹ ಸಮಯದಲ್ಲಿ ನೂರಾರು ಪ್ರತಿಭಟನೆಗಳನ್ನು ನಡೆಸಲಾಗಿದೆ; ಹಿಂದೂ ಜನಸಂಘರ್ಷ ಮೋರ್ಚಾದ ಮೂಲಕ ಸಾವಿರಾರು ಸಂಖ್ಯೆಯಲ್ಲಿ ಮೆರವಣಿಗೆಗಳನ್ನು ನಡೆಸಲಾಗಿದೆ. ಅಷ್ಟೇ ಅಲ್ಲದೆ, ಲವ್ ಜಿಹಾದ್‌ನಲ್ಲಿ ಸಿಲುಕಿದ್ದ ನೂರಾರು ಯುವತಿಯರಿಗೆ ಸಮಿತಿಯು ‘ ‘ಆಪ್ತಸಮಾಲೋಚನೆ’ಯನ್ನೂ (Counseling) ಮಾಡಿದೆ. ಇದರ ಪರಿಣಾಮವಾಗಿ 12 ರಾಜ್ಯಗಳಲ್ಲಿ ಲವ್ ಜಿಹಾದ್ ವಿರೋಧಿ ಕಾಯ್ದೆಗಳನ್ನು ತರಲಾಗಿದೆ ಮತ್ತು ಮೂರು ರಾಜ್ಯಗಳಲ್ಲಿ ಈ ಕಾಯ್ದೆಗಳು ಪ್ರಕ್ರಿಯೆಯಲ್ಲಿವೆ. ಈಗ ಇಂತಹ ಕಾಯ್ದೆಯನ್ನು ಜಾರಿಗೆ ತಂದ 13ನೇ ರಾಜ್ಯ ಮಹಾರಾಷ್ಟ್ರವಾಗಿದೆ” ಎಂದರು.
ಕಾಯ್ದೆಯ ಬಗ್ಗೆ ಪ್ರಬೋಧನೆಯಾಗಲಿ!

ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಂಘಟಕರಾದ ಶ್ರೀ. ಸುನೀಲ್ ಘನವಟ ಅವರು ಈ ಬಗ್ಗೆ ಮಾತನಾಡುತ್ತಾ, “ಆಮಿಷಗಳನ್ನು ತೋರಿಸಿ ಮಾಡುವ ಮತಾಂತರದಿಂದಾಗಿ ಈಶಾನ್ಯ ಭಾರತದ 7 ರಾಜ್ಯಗಳ ಪೈಕಿ 5 ರಾಜ್ಯಗಳು ಕ್ರಿಶ್ಚಿಯನ್ ಬಹುಸಂಖ್ಯಾತವಾಗಿವೆ. ಒಟ್ಟಾರೆಯಾಗಿ ಭಾರತದ 9 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಿಂದೂಗಳು ‘ಅಲ್ಪಸಂಖ್ಯಾತ’ರಾಗಿದ್ದಾರೆ, ಇದರಿಂದ ‘ಮತಾಂತರ’ದ ಸಮಸ್ಯೆ ಎಷ್ಟು ಗಂಭೀರವಾಗಿದೆ ಎಂಬುದು ತಿಳಿಯುತ್ತದೆ. ರಾಜ್ಯ ಸರಕಾರವು ಈ ಕಾಯ್ದೆಯನ್ನು ಮಾಡಿದ್ದಕ್ಕಾಗಿ ಮತ್ತೊಮ್ಮೆ ಅಭಿನಂದನೆಗಳು; ಆದರೆ ಈ ಕಾಯ್ದೆಯು ಸಮಾಜಕ್ಕೆ ತಲುಪಲು ಮತ್ತು ಇದರ ಪ್ರಚಾರಕ್ಕಾಗಿ ಸರಕಾರವು ಪ್ರಯತ್ನಿಸಬೇಕು. ರಾಜ್ಯದ ಪ್ರತಿಯೊಂದು ಶಾಲೆಯಲ್ಲಿ ಈ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸಬೇಕು ಮತ್ತು ಬುಡಕಟ್ಟು ಬಹುಸಂಖ್ಯಾತ ಪ್ರದೇಶಗಳಲ್ಲಿ ಈ ಬಗ್ಗೆ ಪ್ರಬೋಧನೆ ನಡೆಸಲು ಸರಕಾರವು ಯೋಜನೆಯನ್ನು ರೂಪಿಸಬೇಕು” ಎಂದು ಅವರು ಹೇಳಿದರು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ