
- ದೇವಸ್ಥಾನಗಳಲ್ಲಿ ನಿತ್ಯೋಪಚಾರಗಳ (ನಿತ್ಯದ ಪೂಜೆ-ಉಪಚಾರಗಳ) ಸ್ಥಿತಿ ಹದಗೆಟ್ಟಿತು. ಅಲ್ಲಿ ಮನಸ್ಸಿಗೆ ತೋಚಿದಂತೆ ಆಡಳಿತ ಆರಂಭವಾಯಿತು.ಅರ್ಚಕರ ನಡುವೆ ವಾಗ್ವಾದಗಳು ನಡೆಯುತ್ತಿದ್ದುದರಿಂದ ಪೂಜೆ ಅರ್ಚನೆ ಮಾಡುವಾಗ ಅದರ ಪಾವಿತ್ರ್ಯಕ್ಕೆ ಹಾನಿಯಾಯಿತು.
- ಅರ್ಪಣೆ ಪೆಟ್ಟಿಗೆಯ ಹಣ ಮತ್ತು ಒಡವೆಗಳ ಭ್ರಷ್ಟಾಚಾರ ಬಹಿರಂಗವಾಗಿದೆ. ಗುತ್ತಿಗೆದಾರರು ಮತ್ತು ಧರ್ಮದರ್ಶಿಗಳು ಕೂಡ ಅನೇಕ ಕಡೆ ದೇವನಿಧಿಯನ್ನು ಲೂಟಿ ಮಾಡಿ ಧರ್ಮಕ್ಕೆ ಹಾನಿಯುಂಟು ಮಾಡಿದ್ದಾರೆ.
- ಅರ್ಚಕರಿಗೆ ಅತೀ ಕಡಿಮೆ ಗೌರವಧನ ನೀಡುತ್ತಿದ್ದರೆ, ಸಂಬಂಧಪಟ್ಟ ಅಧಿಕಾರಿಗಳಿಗೆ ೫೦ ಸಾವಿರದಿಂದ ೧ ಲಕ್ಷ ರೂಪಾಯಿಗಳ ವರೆಗೆ ಸಂಬಳ ನೀಡಲಾಗುತ್ತದೆ.
- ದೇವಸ್ಥಾನಗಳ ವಿಷಯದಲ್ಲಿ ಅನೇಕ ಅಕ್ರಮಗಳು ಬೆಳಕಿಗೆ ಬಂದರೂ ಎಲ್ಲ ಪಕ್ಷಗಳ ಸರಕಾರಗಳಿಂದ ಕ್ರಮ ತೆಗೆದುಕೊಳ್ಳುವಲ್ಲಿ ವಿಳಂಬವಾಗಿದೆ.
- ಮತಾಂಧರು, ಜಾತ್ಯತೀತರು, ಪ್ರಗತಿ(ಅಧೋಗತಿ) ಪರರಿಂದಲೂ ದೇವಸ್ಥಾನಗಳ ಮೇಲೆ ಆಘಾತಗಳಾದವು.
- ವಕ್ಫ್ ಕಾಯ್ದೆಯ ಮೂಲಕ ದೇವಸ್ಥಾನಗಳು, ಹಾಗೆಯೇ ದೇವಸ್ಥಾನಗಳ ಭೂಮಿಗಳನ್ನು ವಶಪಡಿಸಿಕೊಳ್ಳುವ ಮೂಲಕ ಧರ್ಮದ್ರೋಹ ನಡೆಯಿತು.
- ಸ್ವಾತಂತ್ರ್ಯದ ಬಳಿಕ ದೇಶಾದ್ಯಂತ ನಾಲ್ಕೂವರೆ ಲಕ್ಷಕ್ಕೂ ಹೆಚ್ಚು ದೇವಸ್ಥಾನಗಳ ಸರಕಾರಿಕರಣ ಮಾಡಲಾಯಿತು.
- ದೇವಸ್ಥಾನಗಳಿಂದ ಧರ್ಮಶಿಕ್ಷಣ ನೀಡುವುದು ನಿಂತು ಹೋದ ಕಾರಣ ಹಿಂದೂಗಳಿಗೆ ಒಳಗಿಂದೊಳಗೆ ಅಪಾರ ಹಾನಿಯಾಯಿತು.
- ಧರ್ಮಶಿಕ್ಷಣದ ಕೊರತೆಯಿಂದ ದೇವಸ್ಥಾನಗಳಲ್ಲಿ ಕಳ್ಳತನಗಳ ಪ್ರಮಾಣ ಹೆಚ್ಚಾಯಿತು. ಮೂರ್ತಿಗಳನ್ನು ಕಳವು ಮಾಡಿ ವಿದೇಶಗಳಿಗೆ ಕಳುಹಿಸಿರುವುದು ಕೂಡ ಬಹಿರಂಗವಾಗಿದೆ.
- ದೇವಸ್ಥಾನಗಳ ನಿರ್ಮಾಣದ ಹಿಂದಿನ ವಿಜ್ಞಾನವನ್ನು ನಾಶ ಮಾಡಲಾಯಿತು.
– ಶ್ರೀ. ಸುನೀಲ ಘನವಟ, ಮಹಾರಾಷ್ಟ್ರ ರಾಜ್ಯ ಸಂಘಟಕರು, ಹಿಂದೂ ಜನಜಾಗೃತಿ ಸಮಿತಿ
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಆಗಸ್ಟ್ ೯ ರ ಒಳಗಾಗಿಯೇ ಶ್ರೀಕೃಷ್ಣ ಮಂದಿರದ ನಿರ್ಮಾಣದ ದಿನಾಂಕವನ್ನು ಘೋಷಿಸಿದರೆ, ಕರಸೇವೆಯ ಅಗತ್ಯವೇ ಇರುವುದಿಲ್ಲ ! – ಕಾಳಿ ಸೇನಾ : Kali Sena
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಜಮ್ಮು ನ್ಯಾಯಾಲಯದಿಂದ ಪೊಲೀಸರಿಗೆ ದಾಖಲೆಗಳನ್ನು ಸಲ್ಲಿಸಲು ಆದೇಶ! : Vaishno Devi Fake Silver
ಮಧ್ಯಪ್ರದೇಶ: ಬಗಲಾಮುಖಿ ದೇವಿ ದೇವಸ್ಥಾನದಲ್ಲಿ ಭಕ್ತರಿಗೆ ವಂಚನೆ