ಟ್ವಿಟರ್‌ಗೂ ವಾಕ್ ಸ್ವಾತಂತ್ರ್ಯಕ್ಕೂ ಯಾವುದೇ ಸಂಬಂಧವಿಲ್ಲ ! – ರವಿಶಂಕರ್ ಪ್ರಸಾದ್

ಮನಬಂದಂತೆ ವ್ಯವಹಾರದ ಮಾಡುವ ಟ್ವಿಟರ್‌ನ ಬಗ್ಗೆ ನಾನು ಟೀಕೆ ಮಾಡಿದ್ದರಿಂದ ಈ ಘಟನೆ ನಡೆದಿರುವುದು ಸ್ಪಷ್ಟವಾಗಿದೆ. ಟ್ವಿಟರ್ ಕೈಗೊಂಡ ಕ್ರಮ ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆಗೆ ವಿರುದ್ಧವಾಗಿದೆ. ನನ್ನ ಖಾತೆಯನ್ನು ಬಂದ್ ಮಾಡುವ ಮೊದಲು ನನಗೆ ಸೂಚನೆ ನೀಡಿರಲಿಲ್ಲ.

ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರ ಖಾತೆಯನ್ನು ಒಂದು ಗಂಟೆಗಾಗಿ ಬಂದ್ ಮಾಡಿದ ಟ್ವಿಟರ್‌ !

ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರ ಟ್ವಿಟ್ಟರ್ ಖಾತೆಯನ್ನು ಒಂದು ಗಂಟೆಗಳ ಕಾಲ ಬಂದ್ ಮಾಡಿತ್ತು. ನಂತರ, ಟ್ವಿಟರ್ ರವಿಶಂಕರ್ ಪ್ರಸಾದ್ ಅವರಿಗೆ ಎಚ್ಚರಿಕೆ ನೀಡಿ ಅದನ್ನು ಪುನರಾರಂಭಿಸಿತು.

ವಡೋದರಾ (ಗುಜರಾತ)ದಲ್ಲಿ ಹಿಂದೂ ಪತ್ನಿಯ ಬಲಪೂರ್ವಕ ಮತಾಂಧರ ಪ್ರಕರಣದಲ್ಲಿ ಮತಾಂಧ ಪತಿ, ಅವನ ಸಹೋದರ ಮತ್ತು ತಂದೆಯ ಬಂಧನ.

ಹಿಂದೂಗಳು ಎಂದಾದರೂ ಇತರೆ ಧರ್ಮೀಯ ಯುವತಿಯ ಮೇಲೆ ಇಂತಹ ಒತ್ತಡ ಹೇರಿರುವುದನ್ನು ಕೇಳಿದ್ದೀರಾ ? ಅಪ್ಪಿತಪ್ಪಿ ಯಾರಾದರೂ ಮಾಡಿದರೆ, ಇದೇ ಜಾತ್ಯಾತೀತವಾದಿಗಳು ಹಿಂದೂಗಳನ್ನು ‘ತಾಲಿಬಾನಿ’ ಎಂದು ಕರೆಯುವರು.

ಮತಾಂಧ ಯುವಕನು ತಾನು ‘ಹಿಂದೂ’ ಎಂದು ಪರಿಚಯಿಸಿಕೊಂಡು ವಿವಾಹ ವಿಚ್ಛೇದಿತ ಹಿಂದೂ ಮಹಿಳೆಯೊಂದಿಗೆ ವಿವಾಹವಾದ ಬಳಿಕ ಮತಾಂತರಕ್ಕೆ ಒತ್ತಾಯ!

ಇಂತಹ ಘಟನೆಗಳನ್ನು ತಡೆಯಲು ತ್ವರಿತ ಗತಿಯ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ಜರುಗಿಸಿ ಮತಾಂಧರಿಗೆ ಆಜನ್ಮ ಕಾರಾಗೃಹದಂತಹ ಕಠಿಣ ಶಿಕ್ಷೆಯಾಗುವಂತೆ ಕೇಂದ್ರ ಸರಕಾರವು ಪ್ರಯತ್ನಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ.

ತುರ್ತುಪರಿಸ್ಥಿತಿಯ ಆ ಕರಾಳ ದಿನಗಳನ್ನು ಎಂದಿಗೂ ಮರೆಯಲಾಗದು.!

ತುರ್ತುಪರಿಸ್ಥಿತಿಯ ಆ ಕರಾಳ ದಿನಗಳನ್ನು ಎಂದಿಗೂ ಮರೆಯಲಾಗದು. ವರ್ಷ ೧೯೭೫ ರಿಂದ ೧೯೭೭ ರ ಕಾಲಾವಧಿಯು ಅನೇಕ ಸಂಸ್ಥೆಗಳು ವ್ಯವಸ್ಥಿತ ಪದ್ದತಿಯಿಂದ ನಾಶ ಹೊಂದಿದವು. ನಾವು ಭಾರತೀಯ ಪ್ರಜಾಪ್ರಭುತ್ವದ ಉದ್ದೇಶವನ್ನು ಯಶಸ್ವಿಗೊಳಿಸಲು ಸರ್ವತೋಮುಖವಾಗಿ ಪ್ರಯತ್ನಿಸುವ ಸಂಕಲ್ಪವನ್ನು ಮಾಡೋಣ ಮತ್ತು ಸಂವಿಧಾನದಲ್ಲಿ ನಮೂದಿಸಿರುವ ಮೌಲ್ಯಗಳನ್ನು ಪಾಲಿಸೋಣ ಎಂದು ಟ್ವೀಟ್ ಮಾಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕರೆ ನೀಡಿದ್ದಾರೆ.

ಲಸಿಕೆಯ ಎರಡೂ ಡೋಸ್ ಗಳನ್ನು ತೆಗೆದುಕೊಂಡ ಬಳಿಕ ಕೊರೋನಾ ಬಂದರೂ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಅತೀ ಕಡಿಮೆ !- ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು.

ದೇಶದಲ್ಲಿ ಕೊರೋನಾ ಲಸಿಕೆಯ ಎರಡೂ ಡೋಸ್ಗಳನ್ನು ತೆಗೆದುಕೊಂಡಿರುವ ಶೇ. ೭೬ ರಷ್ಟು ನಾಗರಿಕರಲ್ಲಿ ಕೊರೋನಾ ಸೋಂಕು ತಗುಲಿರುವ ಪ್ರಕರಣಗಳು ಕಂಡು ಬಂದಿವೆ; ಆದರೆ ಇಂತಹವರು ಆಸ್ಪತ್ರೆಗೆ ದಾಖಲಾಗಬೇಕಾದ ಸಾಧ್ಯತೆ ಬಹಳ ಕಡಿಮೆ ಪ್ರಮಾಣದಲ್ಲಿದೆ.

ಶ್ರೀಕೃಷ್ಣಜನ್ಮಭೂಮಿಯ ಮೇಲೆ ಕಟ್ಟಿರುವ ಮಸೀದಿಗೆ ಮಥುರಾದಲ್ಲಿ ಒಂದುವರೆ ಪಟ್ಟು ಹೆಚ್ಚು ಪರ್ಯಾಯ ಭೂಮಿ ನೀಡುವುದಾಗಿ ಹಿಂದೂಗಳಿಂದ ಪ್ರಸ್ತಾಪ !

ಶ್ರೀಕೃಷ್ಣಜನ್ಮಭೂಮಿಯ ೧೩.೩೭ ಎಕರೆ ಭೂಮಿಯ ಮೇಲಿನ ಮಸೀದಿಗೆ ಪರ್ಯಾಯ ಸ್ಥಳವನ್ನು ನೀಡಲು ನಾವು ಸಿದ್ಧರಿದ್ದೇವೆ, ಎಂಬ ಪ್ರಸಾಪವನ್ನು ಅರ್ಜಿದಾರ ಮತ್ತು ಶ್ರೀಕೃಷ್ಣ ಜನ್ಮಭೂಮಿ ಮುಕ್ತಿ ಆಂದೋಲನ ಸಮಿತಿಯ ಅಧ್ಯಕ್ಷ ಮಹೇಂದ್ರ ಪ್ರತಾಪ ಸಿಂಹ ಇವರು ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಿದ್ದಾರೆ.

ಪದವಿಗಾಗಿ ಆಂಗ್ಲ ಭಾಷೆಯನ್ನು ಕಡ್ಡಾಯ ಮಾಡಿದ ಆಂಧ್ರಪ್ರದೇಶ ಸರಕಾರ!

ರಶಿಯಾ, ಜರ್ಮನಿ, ಫ್ರಾನ್ಸ್, ಜಪಾನ ಇತ್ಯಾದಿ ಅಭಿವೃದ್ಧಿಹೊಂದಿದ ದೇಶಗಳು ಹಾಗೂ ಚೀನಾ ಕೂಡ ಮಾತೃಭಾಷೆಯಿಂದಲೇ ಪ್ರಗತಿ ಸಾಧಿಸಿರುವಾಗ ಭಾರತಿಯರಿಗೆ ಸ್ವಾತಂತ್ರ್ಯ ಸಿಕ್ಕಿ ೭೪ ವರ್ಷಗಳ ನಂತರವೂ ಆಂಗ್ಲ ಭಾಷೆಯ ಗುಲಾಮರಾಗಬೇಕಾಗುತ್ತಿದೆ, ಇದು ಇಲ್ಲಿಯವರೆಗಿನ ಎಲ್ಲಾ ಪಕ್ಷದ ಆಡಳಿತಗಾರರಿಗೆ ನಾಚಿಕೆಯ ಸಂಗತಿಯಾಗಿದೆ !

ಪುಡುಕೊಟ್ಟೈ(ತಮಿಳುನಾಡು) ಇಲ್ಲಿ ಅಪರಿಚಿತರಿಂದ ಪ್ರಾಚೀನ ಶಿವಲಿಂಗ ಮತ್ತು ಭಗವಾನ್ ಶಿವನ ಮೂರ್ತಿ ಧ್ವಂಸ

ಕಿಝನಾಂಚೂರ ಗ್ರಾಮದಲ್ಲಿ ಪ್ರಾಚೀನ ಕೈಲಾಸನಾಥ ದೇವಸ್ಥಾನದಲ್ಲಿನ ಶಿವಲಿಂಗ ಮತ್ತು ಭಗವಾನ ಶಿವನ ಮೂರ್ತಿಯನ್ನು ಅಪರಿಚಿತ ವ್ಯಕ್ತಿಗಳು ಧ್ವಂಸ ಮಾಡಿದ್ದಾರೆ. ಶಿವಲಿಂಗವನ್ನು ಎರಡು ತುಂಡುಗಳನ್ನಾಗಿ ಮಾಡಿ ಶಿವನ ವಿಗ್ರಹದ ತಲೆಯನ್ನು ಮುರಿಯಲಾಗಿದೆ. ಈ ದೇವಸ್ಥಾನವನ್ನು ಚೋಳ ರಾಜ್ಯದ ಕಾಲದಲ್ಲಿ ನಿರ್ಮಿಸಲಾಗಿತ್ತು.

ಹೆಂಡತಿ ಮತ್ತು ಮಗನನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸುವುದನ್ನು ವಿರೋಧಿಸಲು ಸಹಾಯ ಕೇಳಿದ ಕ್ರೈಸ್ತ ಕಾರ್ಯಕರ್ತನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ !

ರಾಜ್ಯದ ಆಡಳಿತಾರೂಢ ಮಾಕಪವು ತನ್ನ ಕ್ರೈಸ್ತ ಕಾರ್ಯಕರ್ತ ಪಿ.ಟಿ. ಗಿಲ್‍ಬರ್ಟ್ ಇವರನ್ನು ಪಕ್ಷದಿಂದ ಉಚ್ಚಾಟಿಸಿದೆ. ಆತ ತನ್ನ ಪತ್ನಿ ಮತ್ತು ಮಗನನ್ನು ಬಲವಂತವಾಗಿ ಇಸ್ಲಾಂನಲ್ಲಿ ಮತಾಂತರಿಸಿದ ಬಗ್ಗೆ ವಿರೋಧಿಸಿದ್ದರಿಂದ ಆತನನ್ನು ಪಕ್ಷದಿಂದ ತೆಗೆದುಹಾಕುವ ಕ್ರಮ ಕೈಗೊಳ್ಳಲಾಗಿದೆ. ಆತನು ಮತಾಂತರದ ವಿರುದ್ಧ ದೂರನ್ನು ದಾಖಲಿಸಿದ್ದನು.