ಮುಂಬಯಿ – ಪ್ರಸ್ತುತ ಜಗತ್ತಿನ ಅನೇಕ ದೇಶಗಳು ಅಮೆರಿಕಾದ ಕುರಿತು ಆತಂಕದಲ್ಲಿವೆ; ಆದರೆ ನಾವು (ಭಾರತ) ಆತಂಕದಲ್ಲಿಲ್ಲ. ಚುನಾವಣೆ ಫಲಿತಾಂಶದ ನಂತರ ಡೊನಾಲ್ಡ್ ಟ್ರಂಪ್ ಅವರು ಅಭಿನಂದನೆ ಸ್ವೀಕರಿಸಲು ಅನುವುಮಾಡಿಕೊಟ್ಟಂತಹ ಮೊದಲ ಮೂರು ದೂರವಾಣಿ ಕರೆಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕರೆಯೂ ಒಂದಾಗಿತ್ತು, ಎಂದು ಭಾರತದ ವಿದೇಶಾಂಗ ಸಚಿವ ಡಾ.ಎಸ್.ಜೆ ಶಂಕರ್ ಅವರು ಹೇಳಿಕೆ ನೀಡಿದ್ದಾರೆ. ಆದಿತ್ಯ ಬಿರ್ಲಾ ಸ್ಕಾಲರ್ಶಿಪ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಂದಿದ್ದ ಜೈ ಶಂಕರ್ ಅವರು ಮಾತನಾಡುತ್ತಿದ್ದರು. ಈ ಕಾರ್ಯಕ್ರಮದಲ್ಲಿ ಹಾರ್ವರ್ಡ್ ವಿದ್ಯಾಪೀಠದ ಪ್ರಾಚಾರ್ಯ ಮತ್ತು ರಾಜಕೀಯ ತಜ್ಞ ಮೈಕಲ್ ಜೇ.ಸ್ಯಾಂಡಲ್ ಅವರು ಕೂಡ ಉಪಸ್ಥಿತರಿದ್ದರು.
ಪ್ರಸ್ತುತ ಭಾರತದ ಕಡೆಗೆ ಜಗತ್ತಿನ ಎಲ್ಲಾ ದೇಶಗಳ ಗಮನ !
ಡೊನಾಲ್ಡ್ ಟ್ರಂಪ್ ರಾಷ್ಟ್ರಾಧ್ಯಕ್ಷ ಆಗಿರುವುದರಿಂದ ಭಾರತ ಅಮೆರಿಕ ಸಂಬಂಧದಲ್ಲಿ ಯಾವ ಪರಿಣಾಮ ಬೀರುವುದು? ಎಂದು ಡಾ. ಜೈ ಶಂಕರ್ ಅವರಿಗೆ ಪ್ರಶ್ನಿಸಲಾಗಿತ್ತು. ಅದಕ್ಕೆ ಉತ್ತರಿಸುತ್ತಾ ಜೈಶಂಕರ್, ಸತ್ಯ ಏನೆಂದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಮೆರಿಕಾದಲ್ಲಿ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಬರುವ ಅನೇಕ ಮುಖ್ಯಸ್ಥರ ಜೊತೆಗೆ ಒಳ್ಳೆಯ ಸಂಬಂಧ ಹೊಂದಿದ್ದಾರೆ. ಬಹಳ ಸ್ವಾಭಾವಿಕವಾಗಿ ಅವರು ಅಮೆರಿಕಾದ ಅಧ್ಯಕ್ಷರ ಜೊತೆಗೆ ಇರುವ ಸಂಬಂಧ ವೃದ್ಧಿಸಲು ಪ್ರಯತ್ನ ಮಾಡುತ್ತಾರೆ. ಜಗತ್ತಿನ ದೇಶಗಳ ಗಮನ ಪ್ರಸ್ತುತ ಭಾರತ ಕಡೆಗೆ ಇದೆ, ಭಾರತದ ನೀತಿಗಳ ಪ್ರಶಂಸೆ ಮಾಡುವುದರ ಹಿಂದೆ ಅವರ ಆರ್ಥಿಕ ನೀತಿಗಳಲ್ಲಿ ಗುರಿ ಕೇಂದ್ರಿಕರಿಸುವುದೇ ಕಾರಣವಾಗಿದೆ. ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ನಾವು ಪರಸ್ಪರ ಸೈನ್ಯ ಅಥವಾ ರಾಜಕೀಯ ಸಾಮರ್ಥ್ಯದ ಆಧಾರದಲ್ಲಿ ಅರಿಯದೆ ತಂತ್ರಜ್ಞಾನ, ಆರ್ಥಿಕ ಕ್ಷಮತೆ, ಮನುಷ್ಯ ಬಲ ಮತ್ತು ಸಾಮಾಜಿಕ ಸುಧಾರಣೆ ಈ ಅಂಶಗಳು ಕೂಡ ಮಹತ್ವದ್ದೆಂದು ತಿಳಿಯಲಾಗಿದೆ. ಯಾವುದೇ ದೇಶ ಒಂದೇ ಕ್ಷೇತ್ರದಲ್ಲಿನ ಸಾಮರ್ಥ್ಯದ ಬಲದಲ್ಲಿ ವಿಕಸಿತವಾಗಲು ಸಾಧ್ಯವಿಲ್ಲ ಎಂದವರು ಹೇಳಿದರು.