ಶ್ರೀಕೃಷ್ಣಜನ್ಮಭೂಮಿಯ ಮೇಲೆ ಕಟ್ಟಿರುವ ಮಸೀದಿಗೆ ಮಥುರಾದಲ್ಲಿ ಒಂದುವರೆ ಪಟ್ಟು ಹೆಚ್ಚು ಪರ್ಯಾಯ ಭೂಮಿ ನೀಡುವುದಾಗಿ ಹಿಂದೂಗಳಿಂದ ಪ್ರಸ್ತಾಪ !

ಶ್ರೀಕೃಷ್ಣಜನ್ಮಭೂಮಿ ಪ್ರಕರಣ

ಮಥುರಾ(ಉತ್ತರಪ್ರದೇಶ) – ಇಲ್ಲಿಯ ಶ್ರೀಕೃಷ್ಣಜನ್ಮಭೂಮಿಯ ೧೩.೩೭ ಎಕರೆ ಭೂಮಿಯ ಮೇಲಿನ ಮಸೀದಿಗೆ ಪರ್ಯಾಯ ಸ್ಥಳವನ್ನು ನೀಡಲು ನಾವು ಸಿದ್ಧರಿದ್ದೇವೆ, ಎಂಬ ಪ್ರಸಾಪವನ್ನು ಅರ್ಜಿದಾರ ಮತ್ತು ಶ್ರೀಕೃಷ್ಣ ಜನ್ಮಭೂಮಿ ಮುಕ್ತಿ ಆಂದೋಲನ ಸಮಿತಿಯ ಅಧ್ಯಕ್ಷ ಮಹೇಂದ್ರ ಪ್ರತಾಪ ಸಿಂಹ ಇವರು ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಿದ್ದಾರೆ. ಶ್ರೀರಾಮಜನ್ಮಭೂಮಿಯ ತೀರ್ಪಿನ ಫಲಿತಾಂಶದ ಆಧಾರದಲ್ಲಿ ಅವರು ಈ ಪ್ರಸ್ತಾಪವನ್ನಿಟ್ಟಿದ್ದಾರೆ. ಈ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಮುಸಲ್ಮಾನರಿಗೆ ಅಯೋಧ್ಯೆಯಲ್ಲಿ ಮಸೀದಿಗಾಗಿ ೫ ಎಕರೆ ಭೂಮಿ ನೀಡುವಂತೆ ಸರಕಾರಕ್ಕೆ ಆದೇಶ ನೀಡಿತ್ತು.

. ಶ್ರೀಕೃಷ್ಣಜನ್ಮಭೂಮಿಯ ಪ್ರಕರಣದ ಮೊಕದ್ದಮೆ ಇಲ್ಲಿ ನಡೆಯುತ್ತಿದೆ. ಈ ಭೂಮಿಯ ಮೇಲೆ ಶಾಹಿ ಮಸೀದಿ ಮತ್ತು ದೇವಸ್ಥಾನಗಳು ಅಕ್ಕಪಕ್ಕದಲ್ಲಿವೆ. ಹಿಂದೂಗಳು ‘ಮಸೀದಿಯ ಜಾಗ ಶ್ರೀಕೃಷ್ಣಜನ್ಮಭೂಮಿಗೆ ಸೇರಿದೆ ಅದು ಅವರಿಗೆ ಸಿಗಬೇಕು’, ಎಂದು ನ್ಯಾಯಾಲಯದಲ್ಲಿ ಈ ಹಿಂದೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದ್ದರು. ಇಗ ಇಲ್ಲಿಯ ‘೮೪ ಮೈಲು’ ಪರಿಸರದ ಹೊರಗೆ ಈಗಿನ ಭೂಮಿಯ ತುಲನೆಯಲ್ಲಿ ಒಂದುವರೆ ಪಟ್ಟು ಸ್ಥಳ ಮಸೀದಿಗೆ ನೀಡಲಾಗಬೇಕು. ಇದರಿಂದ ಈ ಪ್ರಕರಣ ಶಾಂತಿಯುವಾಗಿ ಇತ್ಯರ್ಥಗೊಳ್ಳಲಿದೆ;, ಎಂದು ಸಿಂಹ ಇವರು ಹೊಸ ಅರ್ಜಿಯಲ್ಲಿ ಹೇಳಿದ್ದಾರೆ. ಜುಲೈ ೫ ರಂದು ಇದರ ಆಲಿಕೆ ನಡೆಯಲಿದೆ.

. ಶಾಹಿ ಮಸೀದಿಯ ಸಚಿವ ಮತ್ತು ನ್ಯಾಯವಾದಿ ತನವೀರ್ ಅಹಮದ್ ಇವರು ಈ ಬಗ್ಗೆ ಮಾತನಾಡಿ, ನಮಗೆ ಈ ಪ್ರಸ್ತಾಪದ ಬಗ್ಗೆ ಯಾವುದೇ ಪ್ರತಿ ಸಿಕ್ಕಿಲ್ಲ. ನಮಗೆ ಸಿಕ್ಕಿದನಂತರ ನಾವು ಅದರ ಬಗ್ಗೆ ಮಾತನಾಡುವೆವು ಎಂದು ಹೇಳಿದರು.

ಭೂಮಿ ನೀಡುವ ಪ್ರಸ್ತಾಪಕ್ಕೆ ನನ್ನ ಬೆಂಬಲ ಇಲ್ಲ ! – ನ್ಯಾಯವಾದಿ ವಿಷ್ಣು ಶಂಕರ ಜೈನ್

ಶ್ರೀಕೃಷ್ಣಜನ್ಮಭೂಮಿಯ ಪ್ರಕರಣದಲ್ಲಿ ಮಸೀದಿಗಾಗಿ ಪರ್ಯಾಯ ಭೂಮಿ ನೀಡುವ ಪ್ರಸ್ತಾಪವನ್ನು ನಾನು ಬೆಂಬಲಿಸುವುದಿಲ್ಲ. ಒಂದುವೇಳೆ ಪರ್ಯಾಯ ಭೂಮಿಯನ್ನು ನೀಡಿದರೆ ಮುಸಲ್ಮಾನರಿಂದ ಶ್ರೀಕೃಷ್ಣಜನ್ಮಭೂಮಿಯ ಮೇಲಿನ ಅಕ್ರಮ ನಿಯಂತ್ರಣವು ಯೋಗ್ಯವಿತ್ತು ಎಂದರ್ಥವಾಗುತ್ತದೆ. ಈ ಹೋರಾಟವು ಕೇವಲ ಭೂಮಿಗಾಗಿ ಅಲ್ಲ ಬದಲಾಗಿ ತತ್ತ್ವದ ಹೋರಾಟವಾಗಿದೆ, ಎಂದು ಈ ಪ್ರಕರಣದ ಓರ್ವ ನ್ಯಾಯವಾದಿ ಮತ್ತು ‘ಹಿಂದೂ ಫ್ರಂಟ ಫಾರ್ ಜಸ್ಟೀಸ್’ನ(ಹಿಂದೂಗಳಿಗೆ ನ್ಯಾಯ ಒದಗಿಸುವ ಅಗ್ರಸ್ಥಾನ) ವಕ್ತಾರರಾದ ವಿಷ್ಣು ಶಂಕರ ಜೈನ್ ಟ್ವೀಟ್ ಮಾಡಿ ತಿಳಿಸಿದ್ದಾರೆ.