Justice Sanjiv Khanna: ದೇಶದ 51 ನೇ ಮುಖ್ಯ ನ್ಯಾಯಮೂರ್ತಿಯಾಗಿ ಸಂಜೀವ ಖನ್ನಾ ಪ್ರಮಾಣ ಸ್ವೀಕಾರ

ನ್ಯಾಯಮೂರ್ತಿ ಸಂಜೀವ ಖನ್ನಾ

ನವದೆಹಲಿ- ನ್ಯಾಯಮೂರ್ತಿ ಸಂಜೀವ ಖನ್ನಾ ಅವರು ದೇಶದ 51ನೇ ಮುಖ್ಯನ್ಯಾಯಮೂರ್ತಿಯಾಗಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನವೆಂಬರ 11 ರಂದು ರಾಷ್ಟ್ರಪತಿ ಭವನದಲ್ಲಿ ಅವರಿಗೆ ಪ್ರಮಾಣವಚನ ಬೋಧಿಸಿದರು. ಭಾರತದ ಮುಖ್ಯನ್ಯಾಯಮೂರ್ತಿ ಧನಂಜಯ ಚಂದ್ರಚೂಡ ಅವರು ನವೆಂಬರ 10 ರಂದು ನಿವೃತ್ತರಾದರು.

ಮುಖ್ಯ ನ್ಯಾಯಮೂರ್ತಿ ಸಂಜೀವ ಖನ್ನಾ ಇವರ ಅವಧಿ ಕೇವಲ 6 ತಿಂಗಳುಗಳದ್ದಾಗಿದೆ. 64 ವರ್ಷ ವಯಸ್ಸಿನ ನ್ಯಾಯಮೂರ್ತಿ ಖನ್ನಾ ಮೇ 13, 2024 ರಂದು ನಿವೃತ್ತಿ ಹೊಂದಲಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನ್ಯಾಯಮೂರ್ತಿ ಖನ್ನಾ ಅವರು 65ನೇ ತೀರ್ಪನ್ನು ಬರೆದಿದ್ದಾರೆ. ಈ ಕಾಲಾವಧಿಯಲ್ಲಿ ಅವರು ಸುಮಾರು 275 ಪೀಠಗಳ ಸದಸ್ಯರಾಗಿದ್ದರು. ನ್ಯಾಯಮೂರ್ತಿ ಸಂಜೀವ ಅವರ ಚಿಕ್ಕಪ್ಪ ನ್ಯಾಯಮೂರ್ತಿ ಹಂಸರಾಜ ಖನ್ನಾ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯಧೀಶರಾಗಿದ್ದರು; ಹಿರಿಯರಾಗಿದ್ದರೂ ಸಹ ಅವರು ಇಂದಿರಾ ಗಾಂಧಿ ಸರಕಾರದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ್ದರಿಂದ, ಅವರನ್ನು ಮುಖ್ಯನ್ಯಾಯಮೂರ್ತಿಯನ್ನಾಗಿ ನಿಯುಕ್ತಿಗೊಳಿಸಲಿಲ್ಲ. ಅವರ ಸ್ಥಾನದಲ್ಲಿ ನ್ಯಾಯಮೂರ್ತಿ ಮಿರ್ಝಾ ಹಮೀದುಲ್ಲಾ ಬೇಗ್(ಎಮ್.ಎಚ್. ಬೇಗ್) ಅವರನ್ನು ಮುಖ್ಯ ನ್ಯಾಯಮೂರ್ತಿಯನ್ನಾಗಿ ಮಾಡಲಾಯಿತು.(ಇದರಿಂದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿದವರ ವಿರುದ್ಧ ಕಾಂಗ್ರೆಸ್ಸಿನ ನಾಯಕರು ಸೇಡು ತೀರಿಸಿಕೊಂಡಿರುವುದು ಸ್ಪಷ್ಟವಾಗುತ್ತದೆ. ಕಾಂಗ್ರೆಸ್ ನವರು ಪ್ರಜಾಪ್ರಭುತ್ವಕ್ಕೆ ತಲೆಬಾಗುತ್ತಿರಲಿಲ್ಲ ಎನ್ನುವುದು ಕೂಡ ಸ್ಪಷ್ಟವಾಗಿ ಕಂಡುಬರುತ್ತದೆ- ಸಂಪಾದಕರು) ಕಾಂಗ್ರೆಸ್ ನ ಈ ನಿರ್ಣಯವನ್ನು ವಿರೋಧಿಸಿ, ನ್ಯಾಯಮೂರ್ತಿ ಹಂಸರಾಜ ಖನ್ನಾ ಅವರು ಆಗ ನ್ಯಾಯಮೂರ್ತಿ ಹುದ್ದೆಗೆ ರಾಜೀನಾಮೆ ನೀಡಿದ್ದರು.