ಟ್ವಿಟರ್‌ಗೂ ವಾಕ್ ಸ್ವಾತಂತ್ರ್ಯಕ್ಕೂ ಯಾವುದೇ ಸಂಬಂಧವಿಲ್ಲ ! – ರವಿಶಂಕರ್ ಪ್ರಸಾದ್

ನವದೆಹಲಿ – ಮನಬಂದಂತೆ ವ್ಯವಹಾರದ ಮಾಡುವ ಟ್ವಿಟರ್‌ನ ಬಗ್ಗೆ ನಾನು ಟೀಕೆ ಮಾಡಿದ್ದರಿಂದ ಈ ಘಟನೆ ನಡೆದಿರುವುದು ಸ್ಪಷ್ಟವಾಗಿದೆ. ಟ್ವಿಟರ್ ಕೈಗೊಂಡ ಕ್ರಮ ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆಗೆ ವಿರುದ್ಧವಾಗಿದೆ. ನನ್ನ ಖಾತೆಯನ್ನು ಬಂದ್ ಮಾಡುವ ಮೊದಲು ನನಗೆ ಸೂಚನೆ ನೀಡಿರಲಿಲ್ಲ. ಇದರಿಂದ ಟ್ವಿಟರ್ ಹೊಸ ನಿಯಮಗಳನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ ಎಂಬುದು ಸ್ಪಷ್ಟವಾಗಿದೆ. ಒಂದು ವೇಳೆ ಟ್ವಿಟರ್ ಹೊಸ ನಿಯಮಗಳನ್ನು ಅನುಸರಿಸಿದರೆ, ಅದು ಯಾರ ಖಾತೆಯನ್ನು ಮನಬಂದಂತೆ ಬಂದ್ ಮಾಡಲು ಸಾಧ್ಯವಾಗುವುದಿಲ್ಲ; ಆದರೆ ಅದು ಅವರ ‘ಕಾರ್ಯಸೂಚಿ’ (ಅಜೆಂಡಾ) ಗೆ ವಿರುದ್ಧವಾಗಿರುತ್ತದೆ. ಕಳೆದ ಹಲವಾರು ವರ್ಷಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ನನ್ನ ಸಂದರ್ಶನಗಳನ್ನು ಪ್ರಸಾರ ಮಾಡುತ್ತಿದ್ದೇನೆ. ನಾನು ‘ಕಾಪಿರೈಟ್’ನ ಉಲ್ಲಂಘನೆ ಮಾಡಿರುವ ಬಗ್ಗೆ ನನ್ನ ಮೇಲೆ ಎಂದಿಗೂ ಯಾರೂ ಆರೋಪ ಮಾಡಿಲ್ಲ. ವಾಕ್ ಸ್ವಾತಂತ್ರ್ಯವನ್ನು ಪ್ರತಿಪಾದಿಸುವವರು ಅದರ ಬೆಂಬಲಿಗರಲ್ಲ, ಆದರೆ ತಮ್ಮದೇ ಆದ ‘ಅಜೆಂಡಾ’ ಸಾಧಿಸುವ ಹುನ್ನಾರವಿರುತ್ತದೆ. ಅವರು ನಿಗದಿಪಡಿಸಿದ ನಿಯಮಗಳನ್ನು ಯಾರೇ ಆಗಲಿ ಉಲ್ಲಂಘಿಸಿದರೆ ಅವರ ಖಾತೆಗಳನ್ನು ಯಾವುದೇ ಸಮಯದಲ್ಲಿ ಬಂದ್ ಮಾಡುತ್ತಾರೆ. ಏನೇ ಆದರೂ, ಸಾಮಾಜಿಕ ಮಾಧ್ಯಮವು ಹೊಸ ನಿಯಮಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಈ ಬಗ್ಗೆ ಯಾವುದೇ ರಾಜಿ ಮಾಡುವುದಿಲ್ಲ ಎಂದು ಹೇಳಿದರು.