Kashmir Increased Terror Attacks: ಜಮ್ಮು: ಭಯೋತ್ಪಾದಕ ಕೃತ್ಯಗಳಲ್ಲಿ ಹೆಚ್ಚಳ: ಒಂದೇ ವರ್ಷದಲ್ಲಿ 45 ಸಾವು !

ನವದೆಹಲಿ – ಕಳೆದ ಒಂದು ವರ್ಷದಲ್ಲಿ ಭಯೋತ್ಪಾದಕರು ಜಮ್ಮುವನ್ನು ದೊಡ್ಡ ಪ್ರಮಾಣದಲ್ಲಿ ಗುರಿಯಾಗಿಸಿಕೊಂಡಿರುವ ಬಗ್ಗೆ ಭದ್ರತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಮ್ಮು ವಿಭಾಗದ 10 ಜಿಲ್ಲೆಗಳ ಪೈಕಿ 8 ಜಿಲ್ಲೆಗಳಿಗೆ ಭಯೋತ್ಪಾದಕತೆಯ ಬಿಸಿ ತಟ್ಟಿದೆ, ಉಗ್ರರ ದಾಳಿಯಲ್ಲಿ ಒಟ್ಟು 44 ಜನರು ಸಾವನ್ನಪ್ಪಿದ್ದಾರೆ. ಕಳೆದ ವರ್ಷ ಒಟ್ಟು 18 ಯೋಧರು ಹುತಾತ್ಮರಾಗಿದ್ದು, 13 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಲ್ಲದೇ, ಈ ದಾಳಿಯಲ್ಲಿ 14 ನಾಗರಿಕರು ಕೂಡ ಪ್ರಾಣ ಕಳೆದುಕೊಂಡಿದ್ದಾರೆ.

1. ಜಮ್ಮು ವಿಭಾಗದ ರಿಯಾಸಿ, ದೋಡಾ, ಕಿಶ್ತವಾರ್, ಕಠುವಾ, ಉಧಮಪುರ ಮತ್ತು ಜಮ್ಮು ಈ ಜಿಲ್ಲೆಗಳಲ್ಲಿ ಭಯೋತ್ಪಾದಕ ದಾಳಿಗಳು ಹೆಚ್ಚುತ್ತಿರುವ ಕಾರಣ ಭದ್ರತಾ ಸಿಬ್ಬಂದಿಗಳ ಆತಂಕ ಹೆಚ್ಚಾಗಿದೆ.

2. ಅಧಿಕೃತ ಅಂಕಿಅಂಶಗಳ ಪ್ರಕಾರ, ದೋಡಾ, ಕಠುವಾ ಮತ್ತು ರಿಯಾಸಿ ಈ ಮೂರು ಜಿಲ್ಲೆಗಳಲ್ಲಿ ಈ ವರ್ಷ ತಲಾ 9 ಜನರು ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಇನ್ನು ಕಿಶ್ತವಾರ್ ನಲ್ಲಿ ಐದು, ಉಧಮಪುರದಲ್ಲಿ ನಾಲ್ಕು, ಜಮ್ಮು ಮತ್ತು ರಾಜೌರಿಯಲ್ಲಿ ತಲಾ ಮೂವರು ಮತ್ತು ಪೂಂಚ್ ನಲ್ಲಿ ತಲಾ ಇಬ್ಬರಿಗೆ ಜೀವಹಾನಿಯಾಗಿದೆ.

ಹುತಾತ್ಮ ಯೋಧ ನಾಯಬ್ ಸುಭೇದಾರ್ ರಾಕೇಶ್ ಕುಮಾರ್ ಅವರಿಗೆ ಶ್ರದ್ಧಾಂಜಲಿ!

ಕಿಶ್ತವಾರ್ ನಲ್ಲಿ ಇಬ್ಬರು ಗ್ರಾಮ ರಕ್ಷಕರನ್ನು ಕೊಂದ ಭಯೋತ್ಪಾದಕರ ಬಗ್ಗೆ ತನಿಖೆ ನಡೆಯುತ್ತಿದೆ. ಕಿಶ್ತವಾರ್ ನ ಕೇಶವಾನ ಅರಣ್ಯದಲ್ಲಿ ಭಯೋತ್ಪಾದಕರೊಂದಿಗೆ ನಡೆದ ಘರ್ಷಣೆಯಲ್ಲಿ ನಾಯಬ್ ಸುಭೇದಾರ್ ರಾಕೇಶ್ ಕುಮಾರ್ ಹುತಾತ್ಮರಾಗಿದ್ದರು ಮತ್ತು ಮೂವರು ಸೈನಿಕರು ಗಾಯಗೊಂಡಿದ್ದರು. ಈ ಘರ್ಷಣೆಯಲ್ಲಿ ಹುತಾತ್ಮರಾದ ರಾಕೇಶ್ ಕುಮಾರ್ ಅವರಿಗೆ ಸೈನಿಕರು ಶ್ರದ್ಧಾಂಜಲಿಯನ್ನು ಸಲ್ಲಿಸಿದರು.

ಸಂಪಾದಕೀಯ ನಿಲುವು

ಸರಕಾರವು ಈ ಭಯೋತ್ಪಾದನೆಯನ್ನು ಹೇಗೆ ಮತ್ತು ಯಾವಾಗ ಮಟ್ಟ ಹಾಕುವುದು?