ಹೆಂಡತಿ ಮತ್ತು ಮಗನನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸುವುದನ್ನು ವಿರೋಧಿಸಲು ಸಹಾಯ ಕೇಳಿದ ಕ್ರೈಸ್ತ ಕಾರ್ಯಕರ್ತನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ !

ಕೇರಳದಲ್ಲಿಯ ಆಡಳಿತಾರೂಢ ಮಾಕಪ.ದ ಮತಾಂಧರ ಬಗೆಗಿನ ಪ್ರೀತಿ !

* ಈ ಘಟನೆಯಿಂದ ಮಾಕಪಕ್ಷಕ್ಕೆ ಕ್ರೈಸ್ತರಿಗಿಂತ ಮತಾಂಧರೇ ಹೆಚ್ಚು ಪ್ರಿಯರಾಗಿದ್ದಾರೆ, ಎಂಬುದನ್ನು ಕ್ರೈಸ್ತರು ಗಮನದಲ್ಲಿಟ್ಟುಕೊಳ್ಳುವರೇ ?

* ಕೇರಳದಲ್ಲಿ ಮಾಕಪ್‍ದ ರಾಜ್ಯ ಇರುವಾಗ ಹಾಗೂ ಬಲವಂತವಾಗಿ ನಾಗರಿಕರ ಮತಾಂತರವಾಗುತ್ತಿರುವಾಗ ಅದನ್ನು ತಡೆಯುವ ಬದಲು ದೂರನ್ನು ದಾಖಲಿಸುವವರ ಮೇಲೆಯೇ ಕ್ರಮ ಕೈಗೊಳ್ಳುವುದು ಅಂದರೆ ಮತಾಂತರಕ್ಕೆ ಮಾಕಪ್‍ನ ಬೆಂಬಲ ಇದೆ ಎಂದೇ ಈ ಘಟನೆಯಿಂದ ಸ್ಪಷ್ಟವಾಗುತ್ತದೆ ! ಈ ಬಗ್ಗೆ ತಥಾಕಥಿತ ಜಾತ್ಯತೀತವಾದಿ, ಪ್ರಗತಿ(ಅಧೋಗತಿ)ಪರರು ಬಾಯಿ ಬಿಡುವರೇ ?

ತಿರುವನಂತಪುರಮ್ (ಕೇರಳ) – ರಾಜ್ಯದ ಆಡಳಿತಾರೂಢ ಮಾಕಪವು ತನ್ನ ಕ್ರೈಸ್ತ ಕಾರ್ಯಕರ್ತ ಪಿ.ಟಿ. ಗಿಲ್‍ಬರ್ಟ್ ಇವರನ್ನು ಪಕ್ಷದಿಂದ ಉಚ್ಚಾಟಿಸಿದೆ. ಆತ ತನ್ನ ಪತ್ನಿ ಮತ್ತು ಮಗನನ್ನು ಬಲವಂತವಾಗಿ ಇಸ್ಲಾಂನಲ್ಲಿ ಮತಾಂತರಿಸಿದ ಬಗ್ಗೆ ವಿರೋಧಿಸಿದ್ದರಿಂದ ಆತನನ್ನು ಪಕ್ಷದಿಂದ ತೆಗೆದುಹಾಕುವ ಕ್ರಮ ಕೈಗೊಳ್ಳಲಾಗಿದೆ. ಆತನು ಮತಾಂತರದ ವಿರುದ್ಧ ದೂರನ್ನು ದಾಖಲಿಸಿದ್ದನು.

೧. ಗಿಲ್‍ಬರ್ಟ್ ಇದರ ಬಗ್ಗೆ ಹೇಳುವಾಗ ಈ ಮತಾಂತರದ ಹಿಂದೆ ಪಂಚಾಯತಿ ಸದಸ್ಯೆ ನಜಿರಾ ಮತ್ತು ಕಾಲಿಕತ ವಿಶ್ವವಿದ್ಯಾಲಯದ ಸಿಬ್ಬಂದಿಯಾಗಿರುವ ಆಕೆಯ ಪತಿಯ ಕೈವಾಡ ಇದೆ. ಆತನೇ ನನ್ನ ಹೆಂಡತಿ ಮತ್ತು ಮಗನನ್ನು ಮತಾಂತರಿಸಿದ್ದಾನೆ. ಇದರಲ್ಲಿ ಕೊಟ್ಟಿಯಾದೀನ್ ಇಸ್ಮಾಯಿಲ್‍ನ ಕೈವಾಡವೂ ಇದೆ. ಆತ ಅಲ್ಲೇ ಬೇಕರಿಯನ್ನು ನಡೆಸುತ್ತಾನೆ. ಅದೇರೀತಿ ನನ್ನ ನೆರೆಹೊರೆಯವರಾದ ಲತೀಫ್ ಅಲಿಯಾಸ್ ಕುಂಜನ, ಶಾಹುಲ್ ಹಮೀದ್, ಬುಶರಾ ಮತ್ತು ಕುಲಸು ಮೊದಲಾದವರು ಸಹ ಇದರಲ್ಲಿ ಸೇರಿದ್ದರು. ನನ್ನ ಹೆಂಡತಿ ಇಸ್ಮಾಯಿಲ್‍ನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು ಎಂದು ಹೇಳಿದರು.

೨. ಗಿಲ್‍ಬರ್ಟ್, ಮುಂದುವರಿಸುತ್ತಾ, ‘ನಾನು ನನ್ನ ಪಕ್ಷದ ಬಳಿ ನನ್ನ ಹೆಂಡತಿ ಮತ್ತು ಮಗನನ್ನು ಬಲವಂತವಾಗಿ ಮತಾಂತರವನ್ನು ತಡೆಗಟ್ಟಲು ಸಹಾಯವನ್ನು ಕೇಳಿದ್ದೆ; ಆದರೆ ಅವರು ನನಗೆ ಕೂಡಲೇ ಪಕ್ಷದ ಮಲ್ಲಾಪುರಮ್ ಜಿಲ್ಲಾ ಸಮಿತಿಯ ಪತ್ರಿಕಾ ಪ್ರಕಟಣೆಯನ್ನು ತೆಗೆದು ನನಗೆ ಪಕ್ಷದಿಂದ ಹೊರಹಾಕಲಾಗಿರುವ ಮಾಹಿತಿಯನ್ನು ನೀಡಿತು. ಪಕ್ಷದ ವಿರೋಧಿ ಚಟುವಟಿಕೆಯ ಆರೋಪವನ್ನು ಹೊರಿಸಲಾಯಿತು ಎಂದು ಹೇಳಿದ್ದಾರೆ.