ರೋಗಗಳಿಗೆ ಯೋಗಾಭ್ಯಾಸ

ಬದಲಾದ ಜೀವನಶೈಲಿಯಿಂದ ಕಾಯಿಲೆಗಳು ಹೆಚ್ಚಾಗುತ್ತಿದ್ದು, ಚಿಕಿತ್ಸೆಯು ದುಬಾರಿ ಹಾಗೂ ಶಾಶ್ವತ ಪರಿಹಾರ ನೀಡದಿರಬಹುದು. ನಿಯಮಿತ ಯೋಗಾಭ್ಯಾಸವು ಕಾಯಿಲೆಯ ಮೂಲ ಕಾರಣವನ್ನು ನಿವಾರಿಸಿ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಕಾರಿ.

‘ನೀಟ್’ (NEET) ಪರೀಕ್ಷೆಯಿಂದ ಅಸಮಾನತೆ ಉಂಟಾಗುತ್ತಿದ್ದು, 12ನೇ ತರಗತಿಯ ಅಂಕಗಳ ಆಧಾರದ ಮೇಲೆ ವೈದ್ಯಕೀಯ ಪ್ರವೇಶ ನೀಡಿ! : Tamil Nadu CM Vijay

ವೈದ್ಯಕೀಯ ಪ್ರವೇಶಕ್ಕಾಗಿ ನಡೆಸಲಾಗುವ ‘ನೀಟ್’ ಪರೀಕ್ಷೆಯು ದೇಶದಲ್ಲಿ ಅಸಮಾನತೆಯನ್ನು ಸೃಷ್ಟಿಸುತ್ತಿದೆ ಎಂದು ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ವಿಧಾನಸಭೆಯಲ್ಲಿ ಹೇಳಿದ್ದಾರೆ.

ಕೇರಳದಲ್ಲಿ ‘ಶಿಗೆಲ್ಲಾ’ ಸೋಂಕಿನಿಂದ ಒಂದು ಮಗುವಿನ ಸಾವು, 126 ಜನರಿಗೆ ಸೋಂಕು !

ಅಸ್ವಚ್ಛ ಪರಿಸರ, ಕಲುಷಿತ ನೀರು ಅಥವಾ ಬಾಧಿತ ವ್ಯಕ್ತಿಯ ಸಂಪರ್ಕಕ್ಕೆ ಬರುವುದರಿಂದ ಈ ಸೋಂಕು ಹರಡಬಹುದು. ಸರಿಯಾದ ನೈರ್ಮಲ್ಯ ಮತ್ತು ಒಳಚರಂಡಿ ನಿರ್ವಹಣೆಯ ಕೊರತೆಯಿರುವ ಪ್ರದೇಶಗಳಲ್ಲಿ ಈ ರೋಗವು ಆಗಾಗ್ಗೆ ಕಾಣಿಸಿಕೊಳ್ಳುತ್ತದೆ.

ಮುಜಫರ್‌ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!

‘ಇಂತಹ ವೈದ್ಯರನ್ನು ವೈದ್ಯರೆನ್ನಬೇಕೋ ಅಥವಾ ಕಟುಕರೆನ್ನಬೇಕೋ? ಸರಕಾರವು ಇದರ ತನಿಖೆ ನಡೆಸಿ, ಇಂತಹವರ ವೈದ್ಯಕೀಯ ಪ್ರಮಾಣಪತ್ರವನ್ನು ರದ್ದುಗೊಳಿಸಿ ಜೈಲಿಗೆ ಹಾಕಬೇಕು!’

​ಮೇ ೨೦ ರಂದು ದೇಶವ್ಯಾಪಿ ಔಷಧ ಅಂಗಡಿಗಳ ಮುಷ್ಕರ

ಸಂಘಟನೆಯ ಹೇಳಿಕೆಯ ಪ್ರಕಾರ, ‘ಇ-ಫಾರ್ಮಸಿ’ಯ ಕಾರ್ಯವೈಖರಿ ಬಗ್ಗೆ ಮತ್ತು ವೈದ್ಯರ ಚೀಟಿ (ಪ್ರಿಸ್ಕ್ರಿಪ್ಷನ್) ಮೂಲಕ ಲಭ್ಯವಾಗುವ ಔಷಧಗಳ ಮಾರಾಟದ ಮೇಲೆ ನಿಯಂತ್ರಣ ಹೇರುವ ಭದ್ರತಾ ಕ್ರಮಗಳ ಬಗ್ಗೆ ಕೇಂದ್ರ ಸರಕಾರದ ಗಮನ ಸೆಳೆಯುವುದೇ, ಈ ಮುಷ್ಕರದ ಹಿಂದಿನ ಮುಖ್ಯ ಉದ್ದೇಶವಾಗಿದೆ.

‘ನೀಟ್’ ಪರೀಕ್ಷೆಯ ಸಮಯದಲ್ಲಿ ತುಳಸಿಯ ಮಾಲೆ ಧರಿಸಿದ್ದ ವಿದ್ಯಾರ್ಥಿನಿಗೆ ಪ್ರವೇಶ ನಿರಾಕರಣೆ

ಒಂದು ವೀಡಿಯೊದಲ್ಲಿ ಬುರ್ಖಾ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಬಂದ ವಿದ್ಯಾರ್ಥಿನಿಗೆ ಪ್ರವೇಶ ನೀಡಿರುವುದು; ಆದರೆ ಮತ್ತೊಂದು ವೀಡಿಯೊದಲ್ಲಿ ತುಳಸಿಯ ಮಾಲೆ ಧರಿಸಿದ್ದ ವಿದ್ಯಾರ್ಥಿನಿಯ ಮಾಲೆಯನ್ನು ಬಲವಂತವಾಗಿ ತೆಗೆಸಿದ ಘಟನೆ ಕಂಡುಬಂದಿದೆ.

ಉತ್ತರ ಪ್ರದೇಶದ ‘ಕೆ.ಜಿ.ಎಂ.ಯು.’ನ ‘ಎಂ.ಬಿ.ಬಿ.ಎಸ್.’ ವಿದ್ಯಾರ್ಥಿನಿಯರನ್ನು ದೆಹಲಿಗೆ ಕರೆದೊಯ್ಯುವ ಸಂಚು ಬಯಲು! : Hassam Ahmed

ದೇಶದಲ್ಲಿ ಲವ್ ಜಿಹಾದ್ ಘಟನೆಗಳು ಹೆಚ್ಚುತ್ತಿರುವ ವೇಗವನ್ನು ನೋಡಿದರೆ, ‘ಪೊಲೀಸ್ ಎಂಬ ವ್ಯವಸ್ಥೆ ಅಸ್ತಿತ್ವದಲ್ಲಿದೆಯೇ?’ ಎಂಬ ಸಂಶಯ ಮೂಡುತ್ತದೆ! ಇದು ಪೊಲೀಸರಿಗೆ ಅತ್ಯಂತ ನಾಚಿಕೆಗೇಡಿನ ಸಂಗತಿ!

ಅಮೇರಿಕಾದ ೬೦ ವೈದ್ಯಕೀಯ ಸಂಸ್ಥೆಗಳಲ್ಲಿ ‘ಪಾಕಕಲೆ ಔಷಧ’ ಪಠ್ಯಕ್ರಮದ ಬೋಧನೆ !

ಭಾರತೀಯ ಸಂಸ್ಕೃತಿಯಲ್ಲಿ ಆರೋಗ್ಯವನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಸಮತೋಲಿತ ಆಹಾರವನ್ನು ತಯಾರಿಸಲಾಗುತ್ತಿತ್ತು; ಆದರೆ ಪ್ರಸ್ತುತ ಭಾರತೀಯರು ಪಾಶ್ಚಾತ್ಯರ ವ್ಯಾಮೋಹಕ್ಕೆ ಬಿದ್ದು ‘ಪಿಜ್ಜಾ’ ಮತ್ತು ‘ಬರ್ಗರ್’ಗಳ ಬೆನ್ನು ಬಿದ್ದಿದ್ದಾರೆ.

ಬಹರೇನ್‌ ನಿಂದ ಚಂಡೀಗಢದ ಔಷಧ ತಯಾರಿಕಾ ಸಂಸ್ಥೆಗೆ ೧ ಕೋಟಿ ಕ್ಯಾಪ್ಸೂಲ್‌ಗಳ ವಿಚಾರಣೆ

ಸಂಸ್ಥೆಯ ನಿರ್ದೇಶಕಿ ಡಾ. ವೈಶಾಲಿ ಅಗರ್ವಾಲ್ ಅವರು ಮಾತನಾಡಿ, ಸದ್ಯ ಮಾತುಕತೆ ನಡೆಯುತ್ತಿದೆ. ಈ ವ್ಯವಹಾರವು ನಿಶ್ಚಯವಾದರೆ, ಔಷಧಗಳನ್ನು ಬಹರೇನ್, ಕುವೈತ್, ಕತಾರ್ ಮತ್ತು ಜೋರ್ಡಾನ್ ದೇಶಗಳಿಗೆ ಪೂರೈಸಲಾಗುವುದು ಎಂದು ತಿಳಿಸಿದ್ದಾರೆ.