ಪದವಿಗಾಗಿ ಆಂಗ್ಲ ಭಾಷೆಯನ್ನು ಕಡ್ಡಾಯ ಮಾಡಿದ ಆಂಧ್ರಪ್ರದೇಶ ಸರಕಾರ!

ಉದ್ಯೋಗಾವಕಾಶ ಲಭ್ಯವಾಗಬೇಕೆಂದು ಈ ನಿರ್ಧಾರ !

* ರಶಿಯಾ, ಜರ್ಮನಿ, ಫ್ರಾನ್ಸ್, ಜಪಾನ ಇತ್ಯಾದಿ ಅಭಿವೃದ್ಧಿಹೊಂದಿದ ದೇಶಗಳು ಹಾಗೂ ಚೀನಾ ಕೂಡ ಮಾತೃಭಾಷೆಯಿಂದಲೇ ಪ್ರಗತಿ ಸಾಧಿಸಿರುವಾಗ ಭಾರತಿಯರಿಗೆ ಸ್ವಾತಂತ್ರ್ಯ ಸಿಕ್ಕಿ ೭೪ ವರ್ಷಗಳ ನಂತರವೂ ಆಂಗ್ಲ ಭಾಷೆಯ ಗುಲಾಮರಾಗಬೇಕಾಗುತ್ತಿದೆ, ಇದು ಇಲ್ಲಿಯವರೆಗಿನ ಎಲ್ಲಾ ಪಕ್ಷದ ಆಡಳಿತಗಾರರಿಗೆ ನಾಚಿಕೆಯ ಸಂಗತಿಯಾಗಿದೆ !

* ಹಿಂದೂ ರಾಷ್ಟ್ರದಲ್ಲಿ ಸಂಸ್ಕೃತದಲ್ಲಿ, ಅದೇರೀತಿ ಮಾತೃಭಾಷೆಯಿಂದ ಶಿಕ್ಷಣವನ್ನು ನೀಡಲಾಗುವುದು ಮತ್ತು ಅವರಿಗೆ ಉದ್ಯೋಗಾವಕಾಶವೂ ಇರುವುದು !

ಅಮರಾವತಿ (ಆಂಧ್ರಪ್ರದೇಶ) – ಆಂಧ್ರಪ್ರದೇಶದ ಸರಕಾರವು ಪದವಿಗಾಗಿ ಆಂಗ್ಲ ಭಾಷೆಯನ್ನು ಕಡ್ಡಾಯ ಮಾಡಿದೆ. ಶೈಕ್ಷಣಿಕ ವರ್ಷ ೨೦೨೧-೨೨ ಗಾಗಿ ರಾಜ್ಯದ ಎಲ್ಲ ಸರಕಾರಿ, ಅನುದಾನಿತ, ಮತ್ತು ಅನುದಾನಿತವಲ್ಲದ ಪದವಿ ಮಹಾವಿದ್ಯಾಲಯದಲ್ಲಿ ಆಂಗ್ಲ ಮಾಧ್ಯಮವನ್ನು ಕಡ್ಡಾಯಗೊಳಿಸಲಾಗಿದೆ. ಈ ಮಾಹಿತಿಯನ್ನು ಮುಖ್ಯಮಂತ್ರಿ ಕಛೇರಿಯಿಂದ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಉದ್ಯೋಗದ ಅವಕಾಶ ಲಭ್ಯವಾಗಬೇಕೆಂದು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಸರಕಾರದಿಂದ ಹೇಳಲಾಗಿದೆ.