SC On Bulldozer Action : ಅಧಿಕಾರಿಗಳೇ ನ್ಯಾಯಾಧೀಶರಂತೆ ವರ್ತಿಸಿದರೆ, ಕಾನೂನಿನ ರಾಜ್ಯ ಉಳಿಯುವುದಿಲ್ಲ ! – ಸರ್ವೋಚ್ಚ ನ್ಯಾಯಾಲಯ

ಬುಲ್ಡೋಜರ್ ಕ್ರಮದ ಕುರಿತು ಸರ್ವೋಚ್ಚ ನ್ಯಾಯಾಲಯದ ತೀರ್ಪು

ನವದೆಹಲಿ – ಯಾವುದಾದರೂ ವ್ಯಕ್ತಿ ಆರೋಪಿಯಾಗಿದ್ದಾನೆ ಎಂದ ಮಾತ್ರಕ್ಕೆ ಅವನ ಮನೆ ನೆಲಸಮ ಮಾಡುವ ಕ್ರಮವನ್ನು ಸರಕಾರ ಕೈಗೊಂಡರೆ ಆಗ ಅದು ‘ಕಾನೂನುಬದ್ಧ ರಾಜ್ಯ’ ಎಂಬ ತತ್ವಕ್ಕೆ ವಿರುದ್ಧವಾಗಿರುತ್ತದೆ. ಇಂತಹ ಪ್ರಕರಣದಲ್ಲಿ ಸರಕಾರಿ ಅಧಿಕಾರಿಗಳು ನ್ಯಾಯಾಧೀಶರಂತೆ ಅಪರಾಧದ ಆರೋಪ ಇರುವ ವ್ಯಕ್ತಿಯ ಮನೆ ನೆಲಸಮ ಮಾಡುವ ಶಿಕ್ಷೆ ವಿಧಿಸಿದರೆ, ಆಗ ಅದು ನ್ಯಾಯಾಂಗ ಮತ್ತು ಶಾಸಕಾಂಗದ ನಡುವಿನ ಅಧಿಕಾರ ವಿಭಜನೆ ತತ್ವದ ಭಂಗವಾಗುವುದು ಎಂದು ಹೇಳುತ್ತಾ ಸರ್ವೋಚ್ಚ ನ್ಯಾಯಾಲಯವು ಆರೋಪಿಯ ಮನೆಯ ಮೇಲೆ ಬುಲ್ಡೋಜರ್ ಕ್ರಮ ಕೈಗೊಳ್ಳುವುದಕ್ಕೆ ಒಪ್ಪಿಗೆ ನೀಡಿಲ್ಲ.

ಈ ಪ್ರಕರಣದಲ್ಲಿ ನ್ಯಾಯಾಲಯವು ೧೫ ದಿನದ ನೋಟಿಸ್ ಇಲ್ಲದೆ ಕಟ್ಟಡ ನೆಲಸಮ ಮಾಡಿದರೆ ಅಧಿಕಾರಿಗಳ ಖರ್ಚಿನಿಂದಲೇ ಅದನ್ನು ಮತ್ತೆ ಕಟ್ಟಿ ಕೊಡಬೇಕಾಗುವುದೆಂದು ಹೇಳಿದೆ. ಹಾಗೆಯೇ ನ್ಯಾಯಾಲಯವು ೧೫ ಮಾರ್ಗದರ್ಶಕ ಸೂಚನೆಗಳನ್ನು ಸಹ ನೀಡಿದೆ. ಉತ್ತರಪ್ರದೇಶ, ರಾಜಸ್ಥಾನ್ ಮತ್ತು ಮಧ್ಯಪ್ರದೇಶ ರಾಜ್ಯದಲ್ಲಿನ ಸರಕಾರವು ಆರೋಪಿಗಳ ಮನೆಗಳನ್ನು ಬುಲ್ಡೋಜರ್ ನಿಂದ ನೆಲಸಮ ಮಾಡಿತ್ತು. ಇದರ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿತ್ತು, ಅದರಲ್ಲಿ ನೆಲಸಮ ಮಾಡುವ ಕುರಿತು ಮಾರ್ಗದರ್ಶಕ ತತ್ವಗಳನ್ನು ಸಿದ್ಧಗೊಳಿಸಲು ಆಗ್ರಹಿಸಲಾಗಿತ್ತು.