ಜಬಲ್ಪುರ (ಮಧ್ಯಪ್ರದೇಶ) – ಈ ಪ್ರದೇಶದಲ್ಲಿ ಭೂಮಿ ಜಿಹಾದ ನಡೆಯುತ್ತಿದೆಯೆಂದು ಸ್ಥಳೀಯ ಹಿಂದೂ ಸಂಘಟನೆಗಳು ಆರೋಪಿಸುತ್ತಿವೆ., ಇಲ್ಲಿನ ಗ್ವಾರಿ ಘಾಟ್ ನಲ್ಲಿರುವ ಪುರಾತನ ಬಾದಶಾ ಹಲವಾಯಿ ದೇವಸ್ಥಾನದ ಬಾವಿಯನ್ನು ಮುಸಲ್ಮಾನರು ವಶಕ್ಕೆ ಪಡೆದುಕೊಂಡು ಅದನ್ನು `ಗೋರಿ’ಯಾಗಿ ಪರಿವರ್ತಿಸಿದ್ದಾರೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿದ್ದು ಈ ಘಟನೆಯನ್ನು ಖಂಡಿಸಿವೆ.
ಇದು ಹಿಂದೂ ಸ್ಥಳವಾಗಿದ್ದು, ಇಲ್ಲಿ ಹಿಂದೂ ಚಿಹ್ನೆಗಳು ಸ್ಪಷ್ಟವಾಗಿ ಗೋಚರಿಸುತ್ತವೆ ಎಂದು ಹಿಂದೂ ಸೇವಾ ಪರಿಷತ್ತು ಹೇಳಿದೆ. ಈ ಸ್ಥಳವನ್ನು ಪುರಾತತ್ವ ಇಲಾಖೆ ಸಂರಕ್ಷಿಸಿದ್ದರೂ ಕೂಡ ಅತಿಕ್ರಮಣ ಮಾಡಲಾಗಿದೆ. ಈ ಬಾವಿಯಲ್ಲಿ ತ್ರಿಶೂಲ ಮತ್ತು ಗಣೇಶನ ವಿಗ್ರಹಗಳೊಂದಿಗೆ ಅನೇಕ ಪುರಾವೆಗಳಿವೆ. ಆದರೆ ಅದನ್ನು ಮುಸ್ಲಿಮರು ಹಾಳು ಮಾಡುತ್ತಿದ್ದು ಹಸಿರು ಬಣ್ಣ ಹಚ್ಚಿದ್ದಾರೆ. ಅಲ್ಲಿ ಅಕ್ರಮವಾಗಿ ಉರುಸ್ ಕಾರ್ಯಕ್ರಮಗಳನ್ನು ಕೂಡ ಆಯೋಜಿಸುತ್ತಿದ್ದಾರೆ ಎಂದು ಆರೋಪಿಸಿದ್ದು ಈ ಪ್ರಕರಣದ ಬಗ್ಗೆ ಕೂಡಲೇ ಕ್ರಮ ಕೈಕೊಳ್ಳುವಂತೆ ಹಿಂದೂ ಸಂಘಟನೆಗಳು ಅಲ್ಲಿನ ಜಿಲ್ಲಾಡಳಿತವನ್ನು ಆಗ್ರಹಿಸಿವೆ.
ಸಂಪಾದಕೀಯ ನಿಲುವು
|