ಆರೋಪಿ ಭವಾನಿ ಶಂಕರ್ ಬಂಧನ, ದಾಳಿಯ ಕಾರಣ ಇನ್ನೂ ಸ್ಪಷ್ಟವಾಗಿಲ್ಲ
ಪಾಲಿ (ರಾಜಸ್ಥಾನ) – ದೇವಸ್ಥಾನವೊಂದರ ಮಹಂತ್ ಸುರೇಶ್ ಗಿರಿಜಿ ಮಹಾರಾಜ್ (ವಯಸ್ಸು 60 ವರ್ಷ) ಅವರ ಮೇಲೆ ನಾಗಾ ಸಾಧುವಿನ ವೇಷದಲ್ಲಿದ್ದ ಭವಾನಿ ಶಂಕರ್ ಎಂಬ ಯುವಕ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ನವೆಂಬರ್ 10 ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆಯ ವೇಳೆ ದೇವಸ್ಥಾನದಲ್ಲಿ ಇತರ ಕೆಲವು ಸಂತರು ಸಹ ಇದ್ದರು. ಈ ಯುವಕ ಮಹಂತ್ ಗೆ ಚಾಕುವಿನಿಂದ 5-6 ಬಾರಿ ಇರಿದಿದ್ದಾನೆ. ಈ ವೇಳೆ ಅಲ್ಲಿದ್ದ ಇತರ ಸಾಧುಗಳು ಯುವಕನಿಗೆ ದೊಣ್ಣೆಯಿಂದ ಹೊಡೆದಾಗ ಆತ ಓಡಿ ಹೋಗಿದ್ದಾನೆ. ಈ ದಾಳಿಯಲ್ಲಿ ಗಾಯಗೊಂಡ ಮಹಂತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದೇವಸ್ಥಾನದಲ್ಲಿ ಭವಾನಿ ಶಂಕರ್ ರಾತ್ರಿ ತಂಗಿದ್ದರು. ಪೊಲೀಸರು ಆತನನ್ನು ಬಂಧಿಸಿದ್ದಾರೆ. ಈ ದಾಳಿಯ ಹಿಂದಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.