IAS Officer Dismissed: ಕೇರಳ: ‘ಮಲ್ಲು (ಮಲ್ಲ್ಯಾಳಿ.) ಹಿಂದೂ ಅಧಿಕಾರಿ’ ಎಂಬ ವಾಟ್ಸಪ್ ಗುಂಪು ರಚಿಸಿದ್ದ ಐ.ಎ.ಎಸ್. ಅಧಿಕಾರಿ ಅಮಾನತು

(ಐ.ಎ.ಎಸ್. ಎಂದರೆ ಇಂಡಿಯನ್ ಅಡ್ಮಿಸ್ಟ್ರೇಟಿವ್ ಸರ್ವಿಸ್ – ಭಾರತೀಯ ಸರಕಾರಿ ಸೇವೆ)

ತಿರುವನಂತಪುರಂ (ಕೇರಳ) –  ವಾಟ್ಸಪ್ ನಲ್ಲಿ ‘ಮಲ್ಲು ಹಿಂದೂ ಅಧಿಕಾರಿ’ ಎಂಬ ಒಂದು ಗುಂಪನ್ನು ತಯಾರಿಸಿ ಅದರಲ್ಲಿ ಇತರ ಅಧಿಕಾರಿಗಳನ್ನು ಭಾಗವಹಿಸುವಂತೆ ಮಾಡಿದ್ದಕ್ಕಾಗಿ ಕಮ್ಯುನಿಸ್ಟ್ ಮೈತ್ರಿ ಸರಕಾರವು ಕೇರಳ ಉದ್ಯೋಗ ಮತ್ತು ವಾಣಿಜ್ಯ ಇಲಾಖೆಯ ಸಂಚಾಲಕರಾದ ಕೆ.ಗೋಪಾಲಕೃಷ್ಣನ್ ಅವರನ್ನು ಅಮಾನತು ಗೊಳಿಸಿದೆ. ಹಾಗೂ ರಾಜ್ಯದ ಹೆಚ್ಚುವರಿ ಸಚಿವ ಎ.ಜಯತಿಲಕ ಅವರ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವಿವಾದಿತ ಪೋಸ್ಟ್ ಪ್ರಸಾರ ಮಾಡಿರುವ ಪ್ರಕರಣದಲ್ಲಿ ಕೃಷಿ ವಿಕಾಸ ಇಲಾಖೆಯ ವಿಶೇಷ ಸಚಿವರಾದ ಎನ್. ಪ್ರಶಾಂತ್ ಅವರನ್ನು ಕೂಡ ವಜಾಗೊಳಿಸಲಾಗಿದೆ. ಸರಕಾರವು ನೀಡಿರುವ ಆದೇಶದಲ್ಲಿ, ಧರ್ಮದ ಆಧಾರದಲ್ಲಿ ವಾಟ್ಸಪ್ ಗ್ರೂಪ್ ರೂಪಿಸಿ ಭಾರತೀಯ ಸರಕಾರಿ ಸೇವೆಯಲ್ಲಿನ ಅಧಿಕಾರಿಗಳಲ್ಲಿ ಬಿರುಕು ಸೃಷ್ಟಿಸಲಾಗಿದೆ ಮತ್ತು ಅವರಲ್ಲಿ ವಿಭಜನೆಯ ಪ್ರಯತ್ನ ನಡೆದಿರುವುದು ಕಾಣುತ್ತಿದೆ. ಧರ್ಮದ ಆಧಾರದಲ್ಲಿ ಅಧಿಕಾರಿಗಳನ್ನು ಬೇರ್ಪಡಿಸುವ ಪ್ರಯತ್ನ ಕೂಡ ನಡೆದಿರುವುದು ಕಂಡು ಬರುತ್ತಿದೆ ಎಂದು ಹೇಳಿದೆ. ಗೋಪಾಲಕೃಷ್ಣನ್ ೨೦೧೩ರ ಐಎಎಸ್ ಬ್ಯಾಚ್ ನ ಅಧಿಕಾರಿಯಾಗಿದ್ದರೆ ಎನ್. ಪ್ರಶಾಂತ್ ಅವರು ೨೦೧೭ರ ಐಎಎಸ್ ಬ್ಯಾಚ್ ನ ಅಧಿಕಾರಿಯಾಗಿದ್ದರು.

ಈ ಕ್ರಮ ಕೈಗೊಳ್ಳುವ ಹಿಂದಿನ ದಿನ ಕಂದಾಯ ಸಚಿವರಾದ ಕೆ. ರಾಜನ್ ಅವರು, ಅಧಿಕಾರಿಗಳಿಗೆ ಅವರ ಮನ ಬಂದಂತೆ ವರ್ತಿಸಲು ಸರಕಾರ ಅವಕಾಶ ನೀಡುವುದಿಲ್ಲ. ಅವರು ನಿಯಮ ಮತ್ತು ಪ್ರಕ್ರಿಯೆಯ ಅಡಿಯಲ್ಲಿಯೇ ಇದ್ದು ಕೆಲಸ ಮಾಡಬೇಕು ಎಂದು ಹೇಳಿಕೆ ನೀಡಿದ್ದರು.

ಏನಿದು ವಾಟ್ಸಪ್ ಗುಂಪು ?

‘ ಮಲ್ಲು ಹಿಂದೂ ಅಧಿಕಾರಿ ‘ ಎಂಬ ವಾಟ್ಸಪ್ ಗುಂಪನ್ನು ಅಕ್ಟೋಬರ್ ೩೦ ರಂದು ರಚಿಸಲಾಗಿತ್ತು. ಈ ಗುಂಪಿನಲ್ಲಿ ಹಿಂದೂ ಐಎಎಸ್ ಅಧಿಕಾರಿಗಳಿದ್ದರು. ಈ ಗುಂಪು ರೂಪಿಸಿದ ನಂತರ ಅನೇಕ ಅಧಿಕಾರಿಗಳು ಈ ಬಗ್ಗೆ ಅಕ್ಷೇಪ ವ್ಯಕ್ತಪಡಿಸಿದ್ದರು. ಬಳಿಕ ಕೆಲವೇ ಗಂಟೆಗಳಲ್ಲಿ ಈ ಗುಂಪನ್ನು ಡಿಲೀಟ್ ಮಾಡಲಾಯಿತು. ಮಾರನೇ ದಿನ ಗೋಪಾಲಕೃಷ್ಣನ್ ಅವರು ತಮ್ಮ ಮೊಬೈಲ್ ಹ್ಯಾಕ್ ಆಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಮೊಬೈಲ್ ಹ್ಯಾಕ್ ಆದ ನಂತರ ಅವರ ಮೊಬೈಲ್ ನಲ್ಲಿ ‘ಮಲ್ಲು ಹಿಂದೂ ಅಧಿಕಾರಿ’ ಮತ್ತು ‘ಮಲ್ಲು ಮುಸ್ಲಿಂ ಅಧಿಕಾರಿ ‘ಎಂದು ಗುಂಪುಗಳನ್ನು ರಚಿಸಲಾಗಿದ್ದವು.

ಈ ಆರೋಪದ ಬಗ್ಗೆ ಮಾತನಾಡಿದ ಪೊಲೀಸರು, ಮೊಬೈಲ್ ಹ್ಯಾಕ್ ಆಗಿರುವ ಕುರಿತು ಯಾವುದೇ ಸಾಕ್ಷಿ ನಮಗೆ ದೊರೆತಿಲ್ಲ ಎಂದು ಹೇಳಿದ್ದರು.

ಸಂಪಾದಕೀಯ ನಿಲುವು

ಕೇರಳದ ಹಿಂದೂ ದ್ವೇಷಿ ಕಮ್ಯುನಿಸ್ಟ್ ಮೈತ್ರಿ ಸರಕಾರಕ್ಕೆ ಎಲ್ಲೆಡೆ ಹಿಂದುಗಳೇ ಕಾಣುತ್ತಿರುವುದರಿಂದ ಇಂತಹ ಕ್ರಮ ಕೈಗೊಳ್ಳುತ್ತಿದ್ದಾರೆ !