Trinamool Congress: ನವದೆಹಲಿ: ತಾಯಿಯ ಅನಾರೋಗ್ಯದ ನೆಪ ಹೇಳಿ ದೇವಿಯ ಜಾಗರಣೆ ಕಾರ್ಯಕ್ರಮಕ್ಕೆ ತಡೆ ಹೇರಿದ ತೃಣಮೂಲ ಕಾಂಗ್ರೆಸ್ ಸಂಸದ ಸಾಕೇತ್ ಗೋಖಲೆ

ಹಿಂದೂ ಭಕ್ತರ ಆಕ್ರೋಶ

ತೃಣಮೂಲ ಕಾಂಗ್ರೆಸ್ ಸಂಸದ ಸಾಕೇತ್ ಗೋಖಲೆ

ನವದೆಹಲಿ – ತೃಣಮೂಲ ಕಾಂಗ್ರೆಸ್ ಸಂಸದ ಸಾಕೇತ್ ಗೋಖಲೆ ಅವರು ತಮ್ಮ ತಾಯಿಯ ಅನಾರೋಗ್ಯದ ಕಾರಣವನ್ನು ಹೇಳಿ ರಾಜಧಾನಿಯ ಸಿಂಧೂ ಗೋಮತಿ ಅಪಾರ್ಟಮೆಂಟನಲ್ಲಿ ನಡೆಯುತ್ತಿದ್ದ ದೇವಿಯ ಜಾಗರಣೆಯ ಕಾರ್ಯಕ್ರಮವನ್ನು ಪೊಲೀಸರನ್ನು ಕರೆಯಿಸಿ ತಡೆದರು. ಈ ಘಟನೆಗೆ ಸ್ಥಳೀಯರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ಜಾಗರಣೆ ಕಾರ್ಯಕ್ರಮ ಪ್ರತಿವರ್ಷವೂ ನಡೆಯುತ್ತದೆ; ಆದರೆ ಈ ಬಾರಿ ಸಂಸದರು ಪೊಲೀಸರನ್ನು ಕರೆಸಿ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿದ್ದಾರೆಂದು ಜನರು ಖೇದ ವ್ಯಕ್ತಪಡಿಸಿದ್ದಾರೆ.

1. ಈ ಬಗ್ಗೆ ಮಾಹಿತಿ ನೀಡಿದ ಅಲ್ಲಿನ ನಿವಾಸಿಯೊಬ್ಬರು, ಸಂಸದ ಗೋಖಲೆಯವರು ಪೂಜಾ ಮಂಟಪಕ್ಕೆ ಬಂದು, ನಾನು ಇಷ್ಟು ದೊಡ್ಡ ಶಬ್ದವಾಗಲು ಬಿಡುವುದಿಲ್ಲ, ನನ್ನ ತಾಯಿಗೆ ಹೃದ್ರೋಗವಿದೆ. ಒಂದು ವೇಳೆ ಅವರಿಗೆ ಏನಾದರೂ ಆದರೆ, ನೀವು ಹೊಣೆಗಾರರಾಗುತ್ತೀರಿ ಎಂದು ಹೇಳಿದರು.

2. ಅವರ ತಾಯಿಯ ಅನಾರೋಗ್ಯದ ಕಾರಣದಿಂದ ಪ್ರತಿ ವರ್ಷ ಈ ಸೊಸೈಟಿಯಲ್ಲಿ ಜಾಗರಣೆ ಕಾರ್ಯಕ್ರಮ ಮಾಡಲು ಬಿಡುತ್ತಿರಲಿಲ್ಲ, ಈ ಜಾಗರಣೆಯಲ್ಲಿ ನೆರೆಹೊರೆಯ ಜನರು ಕೂಡ ಭಾಗವಹಿಸುತ್ತಾರೆ.ನಾವು ಜಾಗರಣೆಯನ್ನು ಸಣ್ಣ ಧ್ವನಿಯಲ್ಲಿ ಮಾಡುವವರಿದ್ದೆವು. ನಾವು ಶಾಂತಿಯುತವಾಗಿ ಮಾಡಲು ಸಿದ್ಧರಿದ್ದೆವು; ಆದರೆ ಸಂಸದರು ಬಂದರು ಮತ್ತು ಅವರು ಜಾಗರಣೆಯನ್ನು ನಿಲ್ಲಿಸಲು ಪೊಲೀಸರನ್ನು ಕರೆಸಿದರು. ಜಾಗರಣೆಯಲ್ಲಿ ಮಹಿಳೆಯರು, ಚಿಕ್ಕ ಮಕ್ಕಳು ಮತ್ತು ವೃದ್ಧರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು; ಆದರೆ ಅವರ ಮಾತನ್ನು ಯಾರೂ ಕೇಳಲಿಲ್ಲ ಎಂದು ಅಲ್ಲಿನ ನಿವಾಸಿಗಳು ವಿವರಿಸಿದರು.

3. ಈ ಬಗ್ಗೆ ಅಲ್ಲಿನ ನಾಗರಿಕರು ದೆಹಲಿ ಭಾಜಪ ಮಾಜಿ ಅಧ್ಯಕ್ಷ ಆದೇಶ ಗುಪ್ತಾ ಅವರ ಬಳಿ ದೂರು ನೀಡಿದ್ದಾರೆ. ಈ ಕುರಿತು ಆದೇಶ ಗುಪ್ತಾ ಮಾತನಾಡಿ, ಈ ಜಾಗರಣೆ ಕಾರ್ಯಕ್ರಮ ಇಲ್ಲಿ ಕಳೆದ 25 ವರ್ಷಗಳಿಂದ ನಡೆಯುತ್ತಿದ್ದು, ಅದರಲ್ಲಿ ಯಾವತ್ತೂ ಅಡ್ಡಿಯುಂಟಾಗಿಲ್ಲ; ಆದರೆ ಸನಾತನ ಧರ್ಮಕ್ಕೆ ವಿರುದ್ಧವಾಗಿರುವವರ ಮುಖವಾಡ ಬಯಲಾಗಿದೆ. ದೇವರು ತೃಣಮೂಲ ಕಾಂಗ್ರೆಸ್ಸಿನ ಸಂಸದರಿಗೆ ಸದ್ಬುದ್ಧಿ ನೀಡಲಿ ಎಂದು ಟೀಕಿಸಿದರು.

ಸಂಪಾದಕೀಯ ನಿಲುವು

ವರ್ಷದ 365 ದಿನಗಳೂ ದಿನಕ್ಕೆ 5 ಬಾರಿ ಕೂಗುವ ಅಜಾನ್ ನಿಂದ ಸಾಕೇತ್ ಗೋಖಲೆಯವರಿಗೆ ಯಾವುದೇ ತೊಂದರೆಯಾಗುವುದಿಲ್ಲ; ಆದರೆ ಕೇವಲ ಒಂದು ರಾತ್ರಿಯ ದೇವಿಯ ಜಾಗರಣೆಯಿಂದ ಮಾತ್ರ ತೊಂದರೆಯಾಗುತ್ತದೆ, ಇದರಿಂದ ಅವರ ನಿಜವಾದ ಮನಃಸ್ಥಿತಿ ಸ್ಪಷ್ಟವಾಗುತ್ತದೆ.