|
ಜಯಪುರ (ರಾಜಸ್ಥಾನ) – ನಮ್ಮ ಆಸ್ತಿ ವಶಪಡಿಸಿಕೊಳ್ಳಲು ಯಾರ ಅಪ್ಪನಿಗೆ ಅಧಿಕಾರವಿದೆ? ನಮ್ಮ ಜನಸಂಖ್ಯೆಯನ್ನು ಏಕೆ ಮರೆಮಾಚುತ್ತೀರಿ ? ಯಾವ ದಿನ ನಾವು ಬೀದಿಗೆ ಇಳಿಯುವೆವು, ಆ ದಿನ ನಿಮ್ಮ ಆತ್ಮ ನಡುಗುವುದು. ನಮ್ಮ ಯುವಕರು ಹೇಡಿಗಳಲ್ಲ. ನಾವು ನಮ್ಮ ಯುವಕರನ್ನು ಹಿಡಿತದಲ್ಲಿಟ್ಟಿದ್ದೇವೆ. ಯಾವ ದಿನ ಅವರು ನಮ್ಮ ಹಿಡಿತ ತಪ್ಪುವರೋ ಆಗ ಅವರನ್ನು ತಡೆಯುವುದು ನಿಮಗೆ ಅಸಾಧ್ಯವಾಗುವುದು ಎಂದು ಇತ್ತೆಹಾದ್- ಎ-ಮಿಲ್ಲತ್ ಪರಿಷತ್ತಿನ ಪ್ರಮುಖ ಮೌಲಾನ ತೌಫಿರ್ ರಝಾ ಖಾನ್ ಅವರು ಬೆದರಿಕೆ ನೀಡಿದ್ದಾರೆ. ನವಂಬರ್ ೧೭ ರಂದು ದೆಹಲಿಯಲ್ಲಿ ಒಟ್ಟಾಗಿ ಸೇರಿ ಸಂಸತ್ತಿಗೆ ಮುತ್ತಿಗೆ ಹಾಕುವಂತೆ ಕೂಡ ಮುಸ್ಲಿಮರಿಗೆ ಕರೆ ನೀಡಿದ್ದಾರೆ.
ಸಂಸತ್ ಅಧಿವೇಶನ ಪ್ರಾರಂಭವಾಗಲಿದೆ, ನೀವು (ಮುಸಲ್ಮಾನರಿಗೆ) ನಿಮ್ಮ ಶಕ್ತಿ ತೋರಿಸುವುದಿದ್ದರೆ ಮತ್ತು ನೀವು ನಿಮ್ಮ ಮನ ಬಂದಂತೆ ಜೀವಿಸಲು ಬಯಸಿದ್ದರೆ ನೀವು ದೆಹಲಿಗೆ ಬರಬೇಕು. ಸರಕಾರ ಅಪ್ರಾಮಾಣಿಕವಾಗಿದೆ. ಕುರಾನ್ ಮತ್ತು ಅಲ್ಲ ಇವರನ್ನು ಅವಮಾನಿಸುವ ಸರಕಾರ ಅಧಿಕಾರದಲ್ಲಿದೆ. ನಿಮಗೆ ಏನಾದರೂ ತೊಂದರೆ ಆಗುತ್ತಿದ್ದರೆ, ಮತ್ತು ನೀವು ಪ್ರಾಮಾಣಿಕವಾಗಿದ್ದರೆ, ನೀವು ದೆಹಲಿಗೆ ಬನ್ನಿ. ನಾವು ತ್ರಿವರ್ಣ ಧ್ವಜವನ್ನು ಹಿಡಿದು ಹೋಗೋಣ. ಸರಕಾರ ಕೇಳದಿದ್ದರೆ ಆಗ ಆಡಳಿತದ ಕಡೆಗೆ ಹೋಗೋಣ. ಅದರ ನಂತರ ಏನಾಗುವುದೊ ಅದಕ್ಕೆ ಸರಕಾರವೇ ಹೊಣೆಯಾಗಲಿದೆ ಎಂದು ರಝಾ ಬೆದರಿಕೆ ಹಾಕಿದ್ದಾರೆ.
ಸಂಪಾದಕೀಯ ನಿಲುವುನಿರಂತರವಾಗಿ ಈ ರೀತಿ ಹೇಳಿಕೆ ನೀಡಲು ರಝಾ ಅವರಿಗೆ ಇಷ್ಟೊಂದು ಧೈರ್ಯ ಹೇಗೆ ಬರುತ್ತದೆ ? ಸರಕಾರ ಇಂತವರಿಗೆ ಕಡಿವಾಣ ಹಾಕಿಲ್ಲ ಎಂಬುದೇ ಇದು ಸೂಚಿಸುತ್ತಿದೆಯೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ. |