ಅಮೇರಿಕಾದ ‘ಡಿಜಿಟಲ್ ಮಿಲೇನಿಯಮ್ ಕಾಫಿರೈಟ್’ ಕಾಯ್ದೆಯ ಉಲ್ಲಂಘನೆ ಮಾಡಿದ್ದರಂತೆ !
ಭಾರತದ ಕೇಂದ್ರ ಸಚಿವರ ಖಾತೆಯನ್ನು ಉದ್ದೇಶಪೂರ್ವಕವಾಗಿ ಬಂದ್ ಮಾಡಿರುವುದು ಸ್ಪಷ್ಟವಾಗಿದೆ. ಇದರಿಂದ ಟ್ವಿಟರ್‌ನ ಮೊಂಡುತನ ಕಂಡುಬರುತ್ತದೆ. ಕೇಂದ್ರವು ಟ್ವಿಟರ್‌ನ ಈ ಮೊಂಡುತನವನ್ನು ಮುರಿಯಲು ಈಗ ಇನ್ನೂ ಕಠಿಣವಾಗಬೇಕು !
ನವ ದೆಹಲಿ – ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರ ಟ್ವಿಟ್ಟರ್ ಖಾತೆಯನ್ನು ಒಂದು ಗಂಟೆಗಳ ಕಾಲ ಬಂದ್ ಮಾಡಿತ್ತು. ನಂತರ, ಟ್ವಿಟರ್ ರವಿಶಂಕರ್ ಪ್ರಸಾದ್ ಅವರಿಗೆ ಎಚ್ಚರಿಕೆ ನೀಡಿ ಅದನ್ನು ಪುನರಾರಂಭಿಸಿತು. ‘ರವಿಶಂಕರ ಪ್ರಸಾದ ಇವರು ಅಮೇರಿಕಾದ ‘ಡಿಜಿಟಲ್ ಮಿಲೇನಿಯಮ್ ಕಾಪಿರೈಟ್’ ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ಅವರ ಖಾತೆಯನ್ನು ಬಂದ್ ಮಾಡಲಾಗಿದೆ’, ಎಂದು ಟ್ವಿಟರ್ ತಿಳಿಸಿದೆ. ಕೇಂದ್ರ ಸರಕಾರದ ಹೊಸ ನಿಯಮಗಳ ಬಗ್ಗೆ ಕಳೆದ ಕೆಲವು ದಿನಗಳಿಂದ ಕೇಂದ್ರ ಸರಕಾರ ಮತ್ತು ಟ್ವಿಟರ್ ನಡುವೆ ವಿವಾದ ಉಂಟಾಗಿದ್ದು, ರವಿಶಂಕರ ಪ್ರಸಾದ ಇವರ ಸಂಬಂಧಿಸಿದ ಖಾತೆಯ ಸಚಿವ ಆಗಿರುವಾಗಲೂ ಈ ಘಟನೆ ನಡೆಯುವುದು ಎಂದರೆ ಈ ಘಟನೆಯ ಹಿಂದೆ ಪಿತೂರಿ ಇದೆ ಎಂದು ಹೇಳಲಾಗುತ್ತಿದೆ.