ಪುಡುಕೊಟ್ಟೈ(ತಮಿಳುನಾಡು) ಇಲ್ಲಿ ಅಪರಿಚಿತರಿಂದ ಪ್ರಾಚೀನ ಶಿವಲಿಂಗ ಮತ್ತು ಭಗವಾನ್ ಶಿವನ ಮೂರ್ತಿ ಧ್ವಂಸ

ರಾಜ್ಯದಲ್ಲಿ ಡಿಎಮ್‍ಕೆ ಸರಕಾರ ಬಂದಾಗಿನಿಂದ ಹಿಂದೂ ಧರ್ಮದ ಮೇಲಿನ ಆಘಾತಗಳಲ್ಲಿ ಹೆಚ್ಚಳ !

ದ್ರಾವಿಡರು ತಾವು ಹಿಂದೂಗಳಿಂದ ಬೇರೆ ಎಂದು ತಿಳಿದುಕೊಳ್ಳುತ್ತಿರುವುದರಿಂದ ಹಾಗೂ ಡಿಎಮ್‍ಕೆ ಪಕ್ಷ ಹಿಂದೂ ವಿರೋಧಿ ಆಗಿದ್ದರಿಂದಲೇ ಈ ರೀತಿಯ ಘಟನೆಗಳು ನಡೆಯುತ್ತಿರುತ್ತದೆ, ಇದರಲ್ಲಿ ಆಶ್ಚರ್ಯಪಡುವಂತಹದ್ದೇನಿಲ್ಲ. ಭಾರತ ಜಾತ್ಯತೀತ ದೇಶವಾಗಿದ್ದರೂ, ಹಿಂದುಗಳನ್ನು ಹೊರತು ಪಡಿಸಿ ಇತರರು ಜಾತ್ಯತೀತದ ಪಾಲನೆಯನ್ನು ಮಾಡುವುದಿಲ್ಲ ಮತ್ತು ಜನ್ಮಹಿಂದೂಗಳ ಪೈಕಿ ಹೆಚ್ಚಿನ ಹಿಂದೂಗಳು ತಮ್ಮನ್ನು ಪ್ರಗತಿಪರರೆಂದು ತಿಳಿದುಕೊಳ್ಳುತ್ತಾರೆ. ಆದ್ದರಿಂದ ಹಿಂದೂ ಧರ್ಮದ ರಕ್ಷಣೆ ಆಗುತ್ತಿಲ್ಲ, ಇದು ಹಿಂದೂಗಳಿಗೆ ನಾಚಿಕೆಯ ವಿಷಯವಾಗಿದೆ ! ಈ ಸ್ಥಿತಿಯನ್ನು ಹಿಂದೂರಾಷ್ಟ್ರ ಸ್ಥಾಪನೆಯಾದ ನಂತರವೇ ಬದಲಾಯಿಸಬಹುದು !

(ಈ ಚಿತ್ರವನ್ನು ಹಾಕುವ ಉದ್ದೇಶ ಯಾರ ಭಾವನೆಗೆ ನೋವನ್ನುಂಟುಮಾಡುವುದಾಗಿರದೆ ನಿಜ ಸ್ಥಿತಿ ತಿಳಿಸುವುದಾಗಿದೆ)

ಪುಡುಕೊಟ್ಟೈ (ತಮಿಳುನಾಡು) – ಇಲ್ಲಿಯ ಕಿಝನಾಂಚೂರ ಗ್ರಾಮದಲ್ಲಿ ಪ್ರಾಚೀನ ಕೈಲಾಸನಾಥ ದೇವಸ್ಥಾನದಲ್ಲಿನ ಶಿವಲಿಂಗ ಮತ್ತು ಭಗವಾನ್ ಶಿವನ ಮೂರ್ತಿಯನ್ನು ಅಪರಿಚಿತ ವ್ಯಕ್ತಿಗಳು ಧ್ವಂಸ ಮಾಡಿದ್ದಾರೆ. ಶಿವಲಿಂಗವನ್ನು ಎರಡು ತುಂಡುಗಳನ್ನಾಗಿ ಮಾಡಿ ಶಿವನ ವಿಗ್ರಹದ ತಲೆಯನ್ನು ಮುರಿಯಲಾಗಿದೆ. ಈ ದೇವಸ್ಥಾನವನ್ನು ಚೋಳ ರಾಜ್ಯದ ಕಾಲದಲ್ಲಿ ನಿರ್ಮಿಸಲಾಗಿತ್ತು. ಈ ದೇವಸ್ಥಾನದಲ್ಲಿ ಶ್ರೀ ಗಣೇಶ, ಪಾರ್ವತಿ ದೇವಿ, ಭಗವಾನ್ ಮುರುಗನ, ಭಗವಾನ್ ಶ್ರೀಕೃಷ್ಣ ಮತ್ತು ನಂದಿಯ ವಿಗ್ರಹಗಳು ಇವೆ. ಈ ದೇವಸ್ಥಾನದ ಬಾಗಿಲು ಯಾವಾಗಲೂ ತೆರೆದಿರುತ್ತದೆ. ಆದ್ದರಿಂದಲೇ ಅಪರಿಚಿತರು ಇದನ್ನು ದುರುಪಯೋಗಿಸಿದ್ದಾರೆ ಎನ್ನಲಾಗುತ್ತಿದೆ. ರಾಜ್ಯದಲ್ಲಿ ದ್ರಾವಿಡ ಮುನ್ನೆತ್ರ ಕಳಘಮ್(ದ್ರಾವಿಡ ಪ್ರಗತಿ ಸಂಘ) ಪಕ್ಷದ ಸರಕಾರವು ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳ ದೇವಸ್ಥಾನದ ಮೇಲೆ ಹಾಗೂ ಧರ್ಮದ ಮೇಲೆ ಆಘಾತಗಳು ಆಗುತ್ತಿವೆ, ಎಂದು ಹಿಂದೂಗಳು ಹೇಳುತ್ತಿದ್ದಾರೆ.