Meat & Alcohol In UK PM Diwali Party : ದೀಪಾವಳಿ ಕಾರ್ಯಕ್ರಮದಲ್ಲಿ ಮಾಂಸಾಹಾರ ಮತ್ತು ಮದ್ಯದ ಬಳಕೆ !

ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದ ಬ್ರಿಟನ್ನಿನ ಪ್ರಧಾನಿ: ಹಿಂದೂ ಸಂಘಟನೆಗಳ ಆರೋಪ

ಲಂಡನ್ (ಬ್ರಿಟನ್) – ಬ್ರಿಟಿಷ್ ನ ಪ್ರಧಾನಿ ಕೀರ್ ಸ್ಟಾರ್ಮರ್ ಅಕ್ಟೋಬರ್ 29 ರಂದು ಅವರ ಅಧಿಕೃತ ನಿವಾಸ ’10 ಡೌನಿಂಗ್ ಸ್ಟ್ರೀಟ್’ ನಲ್ಲಿ ದೀಪಾವಳಿಯನ್ನು ಆಚರಿಸಿದರು. ಈ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಂಸಾಹಾರ ಹಾಗೂ ಮದ್ಯವನ್ನು ನೀಡಲಾಗಿದ್ದು, ಇದು ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪ ಮಾಡಲಾಗಿದೆ. ಬ್ರಿಟನ್‌ನ ಹಿಂದೂ ಸಂಘಟನೆಯಾದ ‘ಇನ್‌ಸೈಟ್ ಯುಕೆ’ ಇದನ್ನು ಟೀಕಿಸಿದೆ. ಇಂತಹ ಧಾರ್ಮಿಕ ಕಾರ್ಯಕ್ರಮ ಆಯೋಜಿಸುವ ಮುನ್ನ ಸೂಕ್ತ ಅಭಿಪ್ರಾಯ ಪಡೆಯಬೇಕಿತ್ತು’ ಎಂದು ಈ ಸಂಘಟನೆ ಹೇಳಿದೆ.

1. ಪ್ರಧಾನ ಮಂತ್ರಿ ಸ್ಟಾರ್ಮರ್ ಅವರು ತಮ್ಮ ದೀಪಾವಳಿಯ ಕಾರ್ಯಕ್ರಮದಲ್ಲಿ ಯಾವ ಭಕ್ಷ್ಯಗಳ ಆಯ್ಕೆ ಮಾಡಿದ್ದರೋ ಅದರಿಂದ ಅವರಿಗೆ ಧಾರ್ಮಿಕ ಸಂಪ್ರದಾಯಗಳ ಬಗ್ಗೆ ತಿಳುವಳಿಕೆ ಮತ್ತು ಗೌರವದ ಕೊರತೆ ಕಂಡು ಬರುತ್ತದೆ ಎಂದು ಸಂಘಟನೆಯು ​​ಹೇಳಿದೆ. ಸಮಾರಂಭವನ್ನು ಆಯೋಜಿಸುವ ಮೊದಲು ಅವರು ಧಾರ್ಮಿಕ ಮುಖಂಡರೊಡನೆ ಚರ್ಚೆ ಮಾಡಿದ್ದರೇ? ಸ್ಟಾರ್ಮರ್‌ ಅವರಿಗೆ ಆಧ್ಯಾತ್ಮಿಕತೆಯ ಜ್ಞಾನವಿಲ್ಲ.

2. ಈ ಸಂಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ ಪೋಸ್ಟ್‌ನಲ್ಲಿ, ದೀಪಾವಳಿ ಕೇವಲ ಉತ್ಸವದ ಕಾಲವಲ್ಲ, ಅದಕ್ಕೆ ಧಾರ್ಮಿಕ ಅರ್ಥಗಳಿವೆ ಎಂದು ಹೇಳಿದೆ. ದೀಪಾವಳಿಯ ಪವಿತ್ರ ಹಬ್ಬವು ಶುದ್ಧತೆ ಮತ್ತು ಭಕ್ತಿಗೆ ಮಹತ್ವ ನೀಡುತ್ತದೆ ಮತ್ತು ಅದಕ್ಕಾಗಿಯೇ ಸಾಂಪ್ರದಾಯಿಕವಾಗಿ ಸಸ್ಯಾಹಾರಿ ಆಹಾರವನ್ನು ಸೇವಿಸುತ್ತೇವೆ. ಮದ್ಯಪಾನವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

3. ಈ ಕಾರ್ಯಕ್ರಮದ ಆಹ್ವಾನ ಸಿಕ್ಕ ನಂತರ ಹಲವು ಹಿಂದೂ ಸಂಘಟನೆಗಳೂ ಆಕ್ಷೇಪ ವ್ಯಕ್ತಪಡಿಸಿದ್ದವು. ಅಕ್ಟೋಬರ್ 29 ರಂದು ನಡೆದ ಈ ಕಾರ್ಯಕ್ರಮಕ್ಕೆ ಬ್ರಿಟಿಷ್ ಭಾರತೀಯ ಸಮುದಾಯದಲ್ಲಿನ ನಾಯಕರು, ಉದ್ಯಮಿಗಳು ಮತ್ತು ಸಂಸತ್ತಿನ ಸದಸ್ಯರನ್ನು ಆಹ್ವಾನಿಸಲಾಗಿತ್ತು.

ಸಂಪಾದಕೀಯ ನಿಲುವು

ತಮ್ಮನ್ನು ತಾವು ಸುಸಂಸ್ಕೃತರು ಮತ್ತು ಸಭ್ಯ ಸಮಾಜದವರು ಎಂದುಕೊಳ್ಳುವ ಬ್ರಿಟಿಷರಲ್ಲಿ ದೀಪಾವಳಿ ಹಬ್ಬದ ಪಾವಿತ್ರ್ಯತೆ ಗೊತ್ತಿದ್ದೂ ಅದನ್ನು ಆಚರಿಸುವ ವಿಚಾರವಿಲ್ಲ ಎಂದು ಇದರಿಂದ ಹೇಳಬೇಕಾಗುತ್ತದೆ !