ವಡೋದರಾ (ಗುಜರಾತ)ದಲ್ಲಿ ಹಿಂದೂ ಪತ್ನಿಯ ಬಲಪೂರ್ವಕ ಮತಾಂಧರ ಪ್ರಕರಣದಲ್ಲಿ ಮತಾಂಧ ಪತಿ, ಅವನ ಸಹೋದರ ಮತ್ತು ತಂದೆಯ ಬಂಧನ.

ಗುಜರಾತನಲ್ಲಿರುವ ಹೊಸ ಮತಾಂತರ ವಿರೋಧಿ ಕಾನೂನಿನ್ವಯ ಕ್ರಮ!

* ಇಂತಹ ಕಾನೂನು ಕೇಂದ್ರಸರಕಾರ ಸಂಪೂರ್ಣ ದೇಶಕ್ಕೆ ಯಾವಾಗ ತರುವುದು?

* ಇಂತಹ ಪ್ರಕರಣಗಳ ಬಗ್ಗೆ ಕಾಂಗ್ರೆಸ್, ಸಮಾಜವಾದಿ ಪಕ್ಷ, ರಾಷ್ಟ್ರವಾದಿ ಕಾಂಗ್ರೆಸ್, ಕಮ್ಯುನಿಸ್ಟ ಪಕ್ಷ ಇತ್ಯಾದಿ ಪಕ್ಷಗಳು, ಅಲ್ಲದೇ ಜಾತ್ಯಾತೀತವಾದಿ ಮತ್ತು ಪುರೋ(ಅಧೋ)ಗಾಮಿಗಳು ಏಕೆ ಮಾತನಾಡುವುದಿಲ್ಲ?

* ಹಿಂದೂಗಳು ಎಂದಾದರೂ ಇತರೆ ಧರ್ಮೀಯ ಯುವತಿಯ ಮೇಲೆ ಇಂತಹ ಒತ್ತಡ ಹೇರಿರುವುದನ್ನು ಕೇಳಿದ್ದೀರಾ ? ಅಪ್ಪಿತಪ್ಪಿ ಯಾರಾದರೂ ಮಾಡಿದರೆ, ಇದೇ ಜಾತ್ಯಾತೀತವಾದಿಗಳು ಹಿಂದೂಗಳನ್ನು ‘ತಾಲಿಬಾನಿ’ ಎಂದು ಕರೆಯುವರು.

ವಡೋದರಾ(ಗುಜರಾತ)– ಪೊಲೀಸರು ಒತ್ತಾಯಪೂರ್ವಕ ಮತಾಂತರದ ಪ್ರಕರಣದಡಿಯಲ್ಲಿ ಮೋಹಿಬ್ ಪಠಾಣ, ಅವನ ಸಹೋದರ ಮೊಹಸಿನ ಮತ್ತು ತಂದೆ ಇಮ್ತಿಯಾಜ್ ಪಠಾಣ ಇವರನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಹೊಸದಾಗಿ ಜಾರಿಗೊಳಿಸಿರುವ ಮತಾಂತರ ವಿರೋಧಿ ಕಾನೂನಿಡಿಯಲ್ಲಿ ದೂರು ದಾಖಲಿಸಲಾಗಿದೆ. ಅಲ್ಲದೇ ಅನೈಸರ್ಗಿಕ ಶಾರೀರಿಕ ಸಂಬಂಧವನ್ನು ಹೊಂದಿರುವ ಮತ್ತು ಥಳಿತದ ಪ್ರಕರಣದ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಈ ಮೂವರೂ ದೋಷಿಗಳೆಂದು ಕಂಡು ಬಂದಲ್ಲಿ ಅವರಿಗೆ ೩ ರಿಂದ ೭ ವರ್ಷಗಳ ವರೆಗೆ ಶಿಕ್ಷೆಯಾಗಬಹುದು. ಮೋಹಿಬ್ ತನ್ನ ಹಿಂದೂ ಪತ್ನಿಯನ್ನು ವಿವಾಹದ ಬಳಿಕ ಮತಾಂತರಕ್ಕಾಗಿ ಒತ್ತಾಯಿಸಿರುವ ಆರೋಪ ಅವನ ಮೇಲಿದೆ. ಇದರಲ್ಲಿ ಅವನ ಸಹೋದರ ಮತ್ತು ತಂದೆಯವರು ಸಹಾಯ ಮಾಡಿದ್ದಾರೆ. ಮೋಹಿಬ್‍ನು ಹಿಂದೂ ಪತ್ನಿಗೆ, ವಿವಾಹದ ಬಳಿಕ ಅವಳಿಗೆ ಇಸ್ಲಾಂ ಧರ್ಮವನ್ನು ಸ್ವೀಕರಿಸಬೇಕಾಗುವುದಿಲ್ಲವೆಂದು ವಿವಾಹದ ಮೊದಲು ಆಶ್ವಾಸನೆ ನೀಡಿದ್ದನು. (ಹಿಂದೂ ಯುವತಿಯರೇ, ಮತಾಂಧ ಪ್ರಿಯಕರ ನೀಡುವ ಆಶ್ವಾಸನೆ ಯಾವ ರೀತಿ ಸುಳ್ಳಾಗಿರುತ್ತದೆಯೆಂದು ಗಮನಿಸಿರಿ! ಹಿಂದೂಗಳಿಗೆ ಧರ್ಮಶಿಕ್ಷಣವಿಲ್ಲದ ಕಾರಣ ಹಿಂದೂ ತರುಣಿಯರು ಮತಾಂಧರ ಪ್ರೇಮದ ಬಲೆಯಲ್ಲಿ ಸಲೀಸಾಗಿ ಸಿಲುಕಿ, ಆಯುಷ್ಯವನ್ನು ಸರ್ವನಾಶಗೊಳಿಸಿಕೊಳ್ಳುತ್ತಾರೆ! ಇದನ್ನು ತಡೆಯಲು ಹಿಂದೂ ಸಂಘಟನೆಗಳು ಹಿಂದೂಗಳಿಗೆ ವಿಶೇಷವಾಗಿ ತರುಣಿಯರನ್ನು ಯುದ್ಧೋಪಾದಿಯಲ್ಲಿ ಧರ್ಮಶಿಕ್ಷಣವನ್ನು ನೀಡಿ ಅವರಲ್ಲಿ ಧರ್ಮಪ್ರೇಮವನ್ನು ನಿರ್ಮಾಣ ಮಾಡಲು ಪ್ರಾರಂಭಿಸಬೇಕಾಗಿದೆ- ಸಂಪಾದಕರು)