ನವದೆಹಲಿ– ದೇಶದಲ್ಲಿ ಕೊರೋನಾ ಲಸಿಕೆಯ ಎರಡೂ ಡೋಸ್ ಗಳನ್ನು ತೆಗೆದುಕೊಂಡಿರುವ ಶೇ. ೭೬ ರಷ್ಟು ನಾಗರಿಕರಲ್ಲಿ ಕೊರೋನಾ ಸೋಂಕು ತಗುಲಿರುವ ಪ್ರಕರಣಗಳು ಕಂಡು ಬಂದಿವೆ; ಆದರೆ ಇಂತಹವರು ಆಸ್ಪತ್ರೆಗೆ ದಾಖಲಾಗಬೇಕಾದ ಸಾಧ್ಯತೆ ಬಹಳ ಕಡಿಮೆ ಪ್ರಮಾಣದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ೨೭ ರೋಗಿಗಳಲ್ಲಿ ಒಬ್ಬ ರೋಗಿಯ ಮೃತ್ಯುವಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನೆ ಪರಿಷತ್ತು ( ಆಯ್.ಸಿ.ಎಂ.ಆರ್.) ತನ್ನ ವರದಿಯಲ್ಲಿ ಮಾಹಿತಿ ನೀಡಿದೆ. ಈ ವರದಿಯನ್ವಯ ಸೋಂಕು ತಗುಲಿರುವ ಈ ರೋಗಿಗಳಲ್ಲಿ ಶೇ. ೧೭ ರಷ್ಟು ಜನರಿಗೆ ಯಾವುದೇ ಲಕ್ಷಣಗಳು ಇರಲಿಲ್ಲ. ಉಳಿದ ಶೇ. ೧೦ ರಷ್ಟು ಜನರನ್ನು ಆಸ್ಪತ್ರೆಗೆ ದಾಖಲಿಸಬೇಕಾಯಿತು.